ಕಾಮಿಡಿ ಪಾತ್ರಗಳನ್ನ ಮಾಡ್ತಾ ಈಗ ಪೈಸಾ ವಸೂಲ್ ಹೀರೋ ಆಗಿರುವ ಶರಣ್ಗೆ ಸದ್ಯ ಚಿತ್ರರಂಗದಲ್ಲಿ ಬೇಡಿಕೆಯ ನಟ. ಅವತಾರ ಪುರುಷ ಸಿನಿಮಾ ಜಪ ಮಾಡುತ್ತಿರುವ ಶರಣ್ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಇರುವ ಕಲಾವಿದರು ಕಷ್ಟ- ಸುಖಗಳ ಬಗ್ಗೆ ಸಿಕ್ವೇನ್ಸ್ ವಿಡಿಯೋ ಮಾಡಿದ್ದಾರೆ.
ಜೂನಿಯರ್ ಆರ್ಟಿಸ್ಟ್ ಏನಾಲ್ಲ ಸಮಸ್ಯೆಗಳನ್ನ ಎದುರಿಸುತ್ತಾರೆ. ಪ್ರೊಡಕ್ಷನ್ ಮ್ಯಾನೇಜರ್ಗಳು ಅವರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಅನ್ನೋದನ್ನ ವಿಡಿಯೋ ಮೂಲಕ ತೋರಿಸಿದ್ದಾರೆ. ಯಾಕೆಂದರೆ ಅವತಾರ ಪುರುಷ ಸಿನಿಮಾದಲ್ಲಿ ಶರಣ್ ಹತ್ತು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಜೂನಿಯರ್ ಆರ್ಟಿಸ್ಟ್ ಪಾತ್ರ ಕೂಡ ಒಂದು. ಈ ಕಾರಣಕ್ಕೆ ಚಿತ್ರದ ಪ್ರಮೋಷನ್ ದೃಷ್ಟಿಯಿಂದ ಅವತಾರ ಪುರುಷ ಚಿತ್ರತಂಡ ಹೊಸ ಕಾನ್ಸೆಪ್ಟ್ನೊಂದಿಗೆ ಜೂನಿಯರ್ ಆರ್ಟಿಸ್ಟ್ ಅವರ ಕಷ್ಟ-ಸುಖಗಳನ್ನ ಹೇಳಿದ್ದಾರೆ.
ಓದಿ:ಹತ್ತು ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಸ್ಯಾಂಡಲ್ವುಡ್ ಅಧ್ಯಕ್ಷ
ಸದ್ಯ ಶರಣ್ ಹತ್ತಾರು ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಡೈಲಾಗ್ ಡೆಲಿವರಿಯಿಂದ ಕಿಕ್ ಕೊಟ್ಟಿದ್ದಾರೆ. ಶರಣ್ಗೆ ಜೋಡಿಯಾಗಿ ಆಶಿಕಾ ರಂಗನಾಥ್ ಮಿಂಚಿದ್ದು, ರ‍್ಯಾಂಬೋ 2 ಚಿತ್ರದ ಮೂಲಕ ಮತ್ತೆ ಮೋಡಿ ಮಾಡುವ ಲಕ್ಷಣಗಳು ಕಾಣ್ತಾ ಇವೆ. ಅವತಾರ ಪುರುಷ ಚಿತ್ರದಲ್ಲಿ ಶರಣ್ ಜ್ಯೂನಿಯರ್ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳ ಹೊರತಾಗಿ ಒಮ್ಮೆ ನಿಜ ಜೀವನದಲ್ಲಿಯೂ ನಟಿಸಬೇಕಾದ ಸಂದರ್ಭ ಎದುರಾದರೆ ಏನಾಗುತ್ತದೆ ಎಂಬುದು ಈ ಚಿತ್ರದ ಒನ್‌ಲೈನ್ ಕಥೆ.
ಶರಣ್, ಆಶಿಕಾ ರಂಗನಾಥ್ ಅಲ್ಲದೇ ಸಾಯಿ ಕುಮಾರ್, ಸುಧಾರಾಣಿ, ಶ್ರೀನಗರ ಕಿಟ್ಟಿ, ಭವ್ಯ ಅಂತಾ ಹೀಗೆ ಹಲವಾರು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಸಿಂಪಲ್ ಸುನಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್ ಮಾಡಿದ್ದು, ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದು, ಮೇ 6ಕ್ಕೆ ಅವತಾರ ಪುರುಷ ಸಿನಿಮಾ ಬಿಡುಗಡೆ ಆಗುತ್ತಿದೆ.