ಕರ್ನಾಟಕ

karnataka

ETV Bharat / entertainment

ಶರಣ್, ಚಿಕ್ಕಣ್ಣ ಕಾಂಬಿನೇಶನ್​ನಲ್ಲಿ ಛೂ ಮಂತರ್.. ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ಪಕ್ಕಾ

ನಟ ಶರಣ್ ಅವರ "ಛೂ ಮಂತರ್'' ಚಿತ್ರದಲ್ಲಿ ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಪ್ರಮುಖ ಪಾತ್ರದಲ್ಲಿದ್ದಾರೆ.

choo mantar movie
ಛೂ ಮಂತರ್ ಸಿನಿಮಾ

By

Published : Dec 20, 2022, 3:35 PM IST

ಕಾಮಿಡಿ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆದ ನಟರಲ್ಲಿ ಅಧ್ಯಕ್ಷ ಖ್ಯಾತಿಯ ಶರಣ್ ಕೂಡ ಒಬ್ಬರು. ಅವತಾರ ಪುರಷ ಸಿನಿಮಾ ನಂತರ ಶರಣ್ ಛೂ ಮಂತರ್ ಸಿನಿಮಾ ಮಾಡುತ್ತಿರೋದು ಗೊತ್ತಿರುವ ವಿಚಾರ. ಈ ಚಿತ್ರಕ್ಕೆ ನಟಿ ಯಾರು? ಉಳಿದ ಸ್ಟಾರ್ ಕಾಸ್ಟ್ ಯಾರು ಅನ್ನೋದು ಗಾಂಧಿನಗರದಲ್ಲಿ ಟಾಕ್ ಆಗುತ್ತಿತ್ತು‌. ಇದೀಗ ಶರಣ್ ಛೂ ಮಂತರ್ ಸಿನಿಮಾದಲ್ಲಿ ಯಾರೆಲ್ಲ ಅಭಿನಯಿಸುತ್ತಿದ್ದಾರೆ ಅನ್ನೋದನ್ನು ನಾವ್​ ಹೇಳ್ತೀವಿ ಕೇಳಿ.

ತಮ್ಮ ಅಮೋಘ ‌ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟ ಶರಣ್ ಅವರ "ಛೂ ಮಂತರ್'' ಚಿತ್ರದಲ್ಲಿ ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನು ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್​​ನಲ್ಲಿ ಬರುತ್ತಿರುವ ಚಿತ್ರ ಎಂದ ಮೇಲೆ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ಸಿಗುವುದಂತು ಖಚಿತ.

ಛೂ ಮಂತರ್ ಚಿತ್ರತಂಡ

ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಾ ಬಂದಿರುವ ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಚಿತ್ರ. ಕರ್ವ ಚಿತ್ರದ‌ ಮೂಲಕ ಕನ್ನಡಿಗರ ಮನ ಗೆದ್ದಿರುವ ನವನೀತ್, ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:ದರ್ಶನ್​​ ಮೇಲಿನ ಕೃತ್ಯಕ್ಕೆ ವ್ಯಾಪಕ ಖಂಡನೆ: ಕೆಟ್ಟ ಪದ ಬಳಸುವವರ ಟ್ವಿಟರ್ ಖಾತೆ ಬ್ಯಾನ್ ಮಾಡಲು ರಮ್ಯಾ ಮನವಿ

ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರಾಖಂಡ ಹಾಗೂ ಲಂಡನ್​​ನಲ್ಲಿ ಚಿತ್ರೀಕರಣ ನಡೆದಿದೆ. ಅನೂಪ್ ಕಟ್ಟುಕರನ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ವೆಂಕಿ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್(ಕೆ.ಜಿ.ಎಫ್ ಖ್ಯಾತಿ) ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ "ಛೂ ಮಂತರ್" ಚಿತ್ರಕ್ಕಿದೆ.

ABOUT THE AUTHOR

...view details