ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಇರುವ ಸಂಭ್ರಮ ಎಂಬ ಚಿತ್ರ ರಾಜ್ಯದ 60 ಚಿತ್ರಮಂದಿರಗಳಲ್ಲಿ ಫೆ.24ರಂದು ತೆರೆಗೆ ಬರಲಿದೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ಹಾಗೂ ಚಿತ್ರಕಥೆಯ ಸಾಹಿತಿ ಶ್ರೀ ಸಂಭ್ರಮ್ ಅವರು ಹೇಳಿದರು. ಗಂಗಾವತಿ ನಗರದಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ಸಿಂಕ್ ಸೌಂಡ್ ಎಂಬ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಕನ್ನಡದ ಚಿತ್ರರಂಗದಲ್ಲಿ ಬೆರಳೆಣಿಕೆಯ ಕೆಲವೇ ಕೆಲವು ಚಿತ್ರಗಳಲ್ಲಿ ಈ ತಂತ್ರಜ್ಞಾನ ಬಳಸಲಾಗಿದೆ ಎಂದು ತಿಳಿಸಿದರು.
ಬಹುತೇಕ ಕಲಾವಿದರು ಉತ್ತರ ಕರ್ನಾಟಕದವರು.. ಉತ್ತ ಮುಖ್ಯವಾಗಿ ಈ ಚಿತ್ರದ ನಟಿ ಮಾತ್ರ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಮಿಕ್ಕಂತೆ ಚಿತ್ರದಲ್ಲಿರುವ ಬಹುತೇಕ ಕಲಾವಿದರ ತಂಡ ಉತ್ತರ ಕರ್ನಾಟಕದ ನಾನಾ ಜಿಲ್ಲೆಗೆ ಸೇರಿದ್ದಾರೆ. ಕನಸಿನ ಗುರಿಯೊಂದನ್ನು ಬೆನ್ನುಹತ್ತಿ ಹೋಗುವ ಯುವಕನಿಗೆ ಎದುರಾಗುವ ಸವಾಲು-ಸಂಕಷ್ಟಗಳೇ ಚಿತ್ರದ ಆಧಾರ. ಈ ಸಂದರ್ಭದಲ್ಲಿ ಪರಿಚಯವಾಗುವ ನಾಯಕಿ ಸುತ್ತಲೂ ನಿರ್ದೇಶಕ ಶ್ರೀ ಸಂಭ್ರಮ್ ಅವರು ಸುಂದರವಾಗಿ ಕಥೆ ಹೆಣೆದಿದ್ದಾರೆ. ಹಾಗೂ ಹೆಚ್ಚು ಬಜೆಟ್ ಹಾಕಿ ಸಿನಿಮಾ ಮಾಡಿಲ್ಲ. ಆದರೆ ಪ್ರೇಕ್ಷಕರಿಗೆ ತಲುಪುವ ಚಿತ್ರವನ್ನು ನಿರ್ದೇಶಕರು ರೆಡಿ ಮಾಡಿದ್ದಾರೆ.
ಇದನ್ನೂ ಓದಿ..ಚಂದನವನದ ಸ್ಟಾರ್ಗಳ ಜೊತೆ ಪ್ರಧಾನಿ ಮಾತುಕತೆ: ಭಾರತೀಯ ಚಿತ್ರರಂಗಕ್ಕಾಗಿ ಮೋದಿಗೆ ಮನವಿ ಸಲ್ಲಿಸಿದ ನಟ ಯಶ್
ಹೈದರಾಬಾದ್ ಕರ್ನಾಟಕದಲ್ಲಿ ಚಿತ್ರೀಕರಣ.. ಬಹುತೇಕ ಎಲ್ಲ ಜನರ ಸಹಜ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಇಲ್ಲಿ ಮೂರ್ತ ರೂಪ ನೀಡಿ ಒಂದು ಚೌಕಟ್ಟಿನಲ್ಲಿ ಕತೆ ಹೆಣೆಯಲಾಗಿದ್ದು, ಕಥೆಗೆ ತಕ್ಕಂತೆ ಸನ್ನಿವೇಶವನ್ನು ಹೈದಾರಬಾದ್ ಕರ್ನಾಟಕದ ಭಾಗಗಳಲ್ಲಿ ಚಿತ್ರಿಸಲಾಗಿದೆ. ಮುಂಗಾರು ಮಳೆ ಸೇರಿದಂತೆ ಹತ್ತಾರು ವಿಭಿನ್ನ ಸಿನಿಮಾಗಳಿಗೆ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿದೇರ್ಶಕ ಮನೋಮೂರ್ತಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಮೆರಿಕದ ಫ್ಲಾರಿಡಾದಲ್ಲಿದ್ದ ಮನೋಮೂರ್ತಿ ಅವರನ್ನು ದೂರವಾಣಿ ಮೂಲಕ ಸಂರ್ಪಕಿಸಿ ಮೊದಲು ಕತೆ ಹೇಳಿದ್ಧಾರೆ. ನಂತರ ಕತೆ ಕೇಳಿ ತಕ್ಷಣವೇ ಅವರು ಚಿತ್ರಕ್ಕೆ ಸಂಗೀತ ನೀಡಲು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮತ್ತೊಂದು ವಿಶೇಷವೆನೆಂದರೆ ಶ್ರೇಯಾ ಘೋಶಾಲ್, ಸೋನು ನಿಗಮ್ ನಂತಹ ಖ್ಯಾತ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಹಾಡು ಬರೆದುಕೊಟ್ಟಿರುವ ಜಯಂತ್ ಕಾಯ್ಕಿಣಿ.. ಇನ್ನು, ಪ್ರತಿಭಾವಂತ ಸಾಹಿತಿ, ಬರಹಗಾರ ಜಯಂತ್ ಕಾಯ್ಕಿಣಿ ಅವರು ಸಂಭ್ರಮ ಚಿತ್ರಕ್ಕಾಗಿ ಒಟ್ಟು ಮೂರು ಹಾಡುಗಳನ್ನು ಬರೆದು ಕೊಟ್ಟಿದ್ದಾರೆ.
ಚಿತ್ರದಲ್ಲಿ ಬಣ್ಣ ಹಚ್ಚಿದ ಸರ್ಕಾರಿ ಶಾಲೆಯ ಶಿಕ್ಷಕರು.. 15 ಜನ ಸರ್ಕಾರಿ ಶಾಲೆಯ ಶಿಕ್ಷಕರು ಈ ಚಿತ್ರದಲ್ಲಿದ್ದಾರೆ. ಮೊದಲ ಹಂತದಲ್ಲಿ ರಾಜ್ಯದ 60 ಚಿತ್ರ ಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಸಂಭ್ರಮ ಹೇಳಿದರು. ಈ ಸಂದರ್ಭದಲ್ಲಿ ಚಿತ್ರದ ನಟ ಅಜಯ್ವೀರ್, ನಾಯಕಿ ರಿದ್ಧಿ ರಾಥೋಡ್ ಮಾತನಾಡಿದರು.
ಇದನ್ನೂ ಓದಿ :ಜೂಲಿಯಟ್ 2 ಚಿತ್ರದ ಮತ್ತೊಂದು ಹಾಡು ಬಿಡುಗಡೆ: ಕೋಟಿ ಜನರ ಮನಮುಟ್ಟಿದ ತಾಯಿ ಹಾಡು