ಕರ್ನಾಟಕ

karnataka

ETV Bharat / entertainment

ದೀಪಾವಳಿ ಸಂಭ್ರಮದಲ್ಲಿ ಬಾಲಿವುಡ್ ಗಣ್ಯರು: ​​ಶಾರುಖ್​ ಸೇರಿದಂತೆ ಸೂಪರ್​ ಸ್ಟಾರ್ಸ್ ವಿಡಿಯೋ ನೋಡಿ - ಶಾರುಖ್ ಖಾನ್

Bollywood Diwali celebration; ಬಾಲಿವುಡ್​ನಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಸ್ಟಾರ್ಸ್​ಗಳ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Bollywood Diwali celebration
ಬಾಲಿವುಡ್ ದೀಪಾವಳಿ ಆಚರಣೆ

By ETV Bharat Karnataka Team

Published : Nov 11, 2023, 12:30 PM IST

ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಬ್ಬ ಆಚರಿಸುವವರಿಗೆ ನಾಳೆ ಮಹತ್ವದ ದಿನವಾಗಿದ್ದು, ಸಿದ್ಧತೆಗಳು ಜೋರಾಗೇ ನಡೆಯುತ್ತಿವೆ. ಬಾಲಿವುಡ್​ ಕೂಡ ಇದರಿಂದ ಹೊರತಲ್ಲ. ಕಳೆದ ಕೆಲ ವರ್ಷಗಳಿಂದ ಬಾಲಿವುಡ್​ ಗಣ್ಯರು ತಮ್ಮ ಸಹೋದ್ಯೋಗಿಗಳಿಗಾಗಿ ಸಮಾರಂಭ ಆಯೋಜಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಈ ಮೂಲಕ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವವರು ಒಂದೇ ವೇದಿಕೆಯಲ್ಲಿ ಬಂದು ಸೇರುತ್ತಾರೆ.

ಮುಂಬೈ ಎಂಬ ಮಾಯಾನಗರಿಯಲ್ಲಿ ಒಂದರ ಹಿಂದೆ ಒಂದರಂತೆ ದೀಪಾವಳಿ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಕಳೆದೊಂದು ವಾರದಿಂದ ದೀಪಾವಳಿ ಸಂಭ್ರಮಾಚಣೆ ಜೋರಾಗೇ ನಡೆಯುತ್ತಿದೆ. ಮನೀಶ್ ಮಲ್ಹೋತ್ರಾ ಮತ್ತು ರಮೇಶ್ ತೌರಾನಿ ನಂತರ, ಏಕ್ತಾ ಕಪೂರ್ ಮತ್ತು ಅಮೃತಪಾಲ್ ಸಿಂಗ್ ಬಿಂದ್ರಾ ಶುಕ್ರವಾರ ರಾತ್ರಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ತಾರೆಯರ ದೀಪಾವಳಿ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಈ ದೀಪಾವಳಿ ಸಂಭ್ರಮಕ್ಕೆ ಶಾರುಖ್ ಖಾನ್ ತಮ್ಮ ಪ್ರೀತಿಯ ಪುತ್ರಿ ಸುಹಾನಾ ಖಾನ್ ಜೊತೆ ಆಗಮಿಸಿದ್ದರು. ಎಸ್​ಆರ್​ಕೆ ಅಲ್ಲದೇ ಹಲವು ಸೆಲೆಬ್ರಿಟಿಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಪಾರ್ಟಿ ಸ್ಥಳದಲ್ಲಿ ಬಾಲಿವುಡ್​​ ಕಿಂಗ್​​ ಶಾರುಖ್ ಖಾನ್ ಅವರ ಕಾರು ಕಂಡುಬಂದಿದೆ. ಆದರೆ ಅಭಿಮಾನಿಗಳಿಗೆ ಕಿಂಗ್​ನ ದರ್ಶನವಾಗಲಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಎಸ್​ಆರ್​​ಕೆ ಅವರ ಐಷಾರಾಮಿ ಕಾರಿನ ವಿಡಿಯೋ ವೈರಲ್​​​ ಆಗುತ್ತಿದ್ದು, ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ಓನ್ಲಿ ಶಾರುಖ್ ಖಾನ್' ಎಂದು ಬರೆದಿದ್ದಾರೆ. ಅಭಿಮಾನಿಯೊಬ್ಬರು 'ನಮ್ಮ ಕಿಂಗ್ ಖಾನ್' ಎಂದು ಬರೆದುಕೊಂಡಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ: ಆರೋಪಿಗಳ ವಿರುದ್ಧ ಎಫ್ಐಆರ್​

ಅಮೃತಪಾಲ್ ಸಿಂಗ್ ಬಿಂದ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಕೂಡ ಕಾಣಿಸಿಕೊಂಡರು. ಸುಹಾನಾ ಖಾನ್​​ ತಮ್ಮ ಸ್ವಂತ ಕಾರಿನಲ್ಲಿ ಪ್ರತ್ಯೇಕವಾಗಿ ಪಾರ್ಟಿಗೆ ಆಗಮಿಸಿದರು. ಸುಹಾನಾ ಖಾನ್ ಮಿನುಗುವ ಗೋಲ್ಡನ್ ಸೀರೆ ತೊಟ್ಟು ಕಂಗೊಳಿಸುತ್ತಿದ್ದರು. ತೆರೆದ ಕೂದಲು, ಬಿಂದಿಯೊಂದಿಗೆ ದೇಸಿ ಲುಕ್​ ಕೊಟ್ಟರು. ಉದಯೋನ್ಮುಖ ನಟಿಯ ಸೌಂದರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. 'ನ್ಯೂ ​​ಕ್ವೀನ್ ಆಫ್ ಬಾಲಿವುಡ್' ಎಂದು ನೆಟ್ಟಿಗರೋರ್ವರು ಕಾಮೆಂಟ್​ ಮಾಡಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ ಬಹಳ ಮುದ್ದಾಗಿದ್ದಾರೆ ಎಂದರೆ, ಅಭಿಮಾನಿಯೋರ್ವರು ಬ್ಯೂಟಿಫುಲ್ ಸುಹಾನಾ ಖಾನ್​​ ಎಂದು ಬರೆದಿದ್ದಾರೆ.

ಇದನ್ನೂ ಓದಿ:'ಸ್ಯಾಮ್ ಬಹದ್ದೂರ್': ಭಾರತೀಯ ಸೇನಾ ಕ್ಯಾಂಪ್​​ನಲ್ಲಿ ವಿಕ್ಕಿ ಕೌಶಲ್​​ - ತರಬೇತಿಯ ವಿಡಿಯೋ ನೋಡಿ

ಎಸ್​ಆರ್​ಕೆ, ಸುಹಾನಾ ಖಾನ್​ ಅಲ್ಲದೇ ಶಾಹಿದ್ ಕಪೂರ್, ಮೀರಾ ರಜ್​​ಪೂತ್, ಮಾಧುರಿ ದೀಕ್ಷಿತ್, ರಾಕುಲ್ ಪ್ರೀತ್ ಸಿಂಗ್, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ವಿಕ್ಕಿ ಕೌಶಲ್ ಸೇರಿದಂತೆ ಹಲವರು ನಿರ್ಮಾಪಕಿ ಏಕ್ತಾ ಕಪೂರ್, ನಿರ್ಮಾಪಕ ಅಮೃತಪಾಲ್ ಸಿಂಗ್ ಬಿಂದ್ರಾ ಅವರ ದೀಪಾವಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details