ಕರ್ನಾಟಕ

karnataka

By

Published : Jun 21, 2022, 3:18 PM IST

ETV Bharat / entertainment

ಅಜಯ್‌ ದೇವಗನ್‌ ಮುಖ್ಯಭೂಮಿಕೆಯ 'ದೃಶ್ಯಂ 2' ಬಿಡುಗಡೆಗೆ ಸಿದ್ಧ

'ದೃಶ್ಯಂ 2' ಬಾಲಿವುಡ್‌ ಸಿನಿಮಾ ದೇಶಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

drushyam 2
ನವಂಬರ್​ 18ರಂದು ಬಾಲಿವುಡ್​ನಲ್ಲಿ ಬಿಡುಗಡೆಗೊಳ್ಳಲಿರುವ ದೃಶ್ಯಂ 2

ಮುಂಬೈ:ಬಾಲಿವುಡ್‌ ನಟರಾದ ಅಜಯ್ ದೇವಗನ್, ಅಕ್ಷಯ್ ಖನ್ನಾ ಮತ್ತು ಟಬು ಅಭಿನಯದ 'ದೃಶ್ಯಂ 2' ಚಿತ್ರ ನವೆಂಬರ್ 18ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಅಭಿಷೇಕ್ ಪಾಠಕ್ ನಿರ್ದೇಶಿಸಿದ ಚಿತ್ರವು ಮೂಲತ: 2015ರಲ್ಲಿ ತೆರೆಕಂಡ ಮಲಯಾಳಂನ ಕ್ರೈಂ ಥ್ರಿಲ್ಲರ್ ಆಗಿದೆ. ಇದು ದೃಶ್ಯಂ ಒಂದರ ಮುಂದುವರೆದ ಭಾಗ. ಮಲಯಾಳಂನ ಜನಪ್ರಿಯ ನಟ ಮೋಹನ್‌ಲಾಲ್​ ಅಭಿನಯದಲ್ಲಿ ಮೊದಲ ಬಾರಿಗೆ ಈ ಸಿನಿಮಾ ಚಿತ್ರ ನಿರ್ಮಾಣವಾಗಿತ್ತು. ನಂತರ ತೆಲುಗು, ಕನ್ನಡ, ಹಿಂದಿಯಲ್ಲಿ ರಿಮೇಕ್​ ಮಾಡಲಾಗಿದೆ. ಆದರೆ, ಮಲಯಾಳಂನಲ್ಲಿದ್ದ ಹೆಸರನ್ನೇ ಎಲ್ಲಾ ಭಾಷೆಗಳಲ್ಲೂ ಇಡಲಾಗಿದೆ.

ಮಂಗಳವಾರ ಹೈದರಾಬಾದ್‌ನಲ್ಲಿ ಚಿತ್ರತಂಡ ಚಿತ್ರೀಕರಣ ಮುಗಿಸಲಿದೆ. ದೃಶ್ಯಂ 2 ಚಿತ್ರವನ್ನು ಭೂಷಣ್ ಕುಮಾರ್, ಕುಮಾರ್ ಮಂಗತ್ ಪಾಠಕ್, ಅಭಿಷೇಕ್ ಪಾಠಕ್, ಕ್ರಿಶನ್ ಕುಮಾರ್ ನಿರ್ಮಿಸಿದ್ದು, ಸಂಜೀವ್ ಜೋಶಿ, ಆದಿತ್ಯ ಚೌಕ್ಸೆ ಮತ್ತು ಶಿವ ಚನಾನ ಸಹ ನಿರ್ಮಾಣ ಮಾಡಿದ್ದಾರೆ. ವಯಾಕಾಮ್ 18 ಸ್ಟುಡಿಯೋಸ್, ಟಿ-ಸೀರೀಸ್ ಮತ್ತು ಪನೋರಮಾ ಸ್ಟುಡಿಯೋಸ್ ಪ್ರಸ್ತುತಪಡಿಸಲಿವೆ. ಹಿಂದಿ ಭಾಷೆಯ ದೃಶ್ಯಂ ಮೊದಲ ಭಾಗವನ್ನು ನಿರ್ಮಾಪಕ ದಿವಂಗತ ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದರು.

ಇದನ್ನೂ ಓದಿ:International Yoga Day 2022: ಫಿಟ್‌ ಅಂಡ್​​ ಫೈನ್​ ಆಗಿರಲು ಪ್ರತಿದಿನ ಯೋಗ ಮಾಡುವ ತಾರೆಯರು

ABOUT THE AUTHOR

...view details