ಶನಿವಾರ ಸಂಜೆ ನಡೆದ ಮುಂಬೈ ಪೊಲೀಸರ ವಾರ್ಷಿಕ ಕಾರ್ಯಕ್ರಮ 'Umang 2023'ರಲ್ಲಿ ಬಾಲಿವುಡ್ ತಾರೆಯರ ದಂಡೇ ನೆರೆದಿತ್ತು. ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕರಣ್ ಜೋಹರ್, ರಣ್ವೀರ್ ಸಿಂಗ್, ಸಲ್ಮಾನ್ ಖಾನ್, ಶಾರುಖ್ ಖಾನ್, ರಣ್ಬೀರ್ ಕಪೂರ್, ಶೆಹನಾಜ್ ಗಿಲ್, ತೇಜಸ್ವಿ ಪ್ರಕಾಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನಟ-ನಟಿಯರು ಆಕರ್ಷಕ ದಿರಿಸಿನಲ್ಲಿ ಕಾಣಿಸಿಕೊಂಡರು. ಹೆಚ್ಚಿನ ನಟಿಯರು ಸೀರೆಯುಟ್ಟಿದ್ದರು. ಸಿನಿಮಾ ಸುಂದರಿಯರ ಸಾಂಪ್ರದಾಯಿಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೆಲೆಬ್ರಿಟಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ನೀಲಿ ಬಣ್ಣದ ಬನಾರಸಿ ಸೀರೆಯಲ್ಲಿ ಫೈಟರ್ ಸಿನಿಮಾಗೆ ಸಜ್ಜಾಗುತ್ತಿರುವ ದೀಪಿಕಾ ಪಡುಕೋಣೆ ಬೆರಗುಗೊಳಿಸುವ ನೋಟ ಬೀರಿದರು. ಸೀರೆಗೆ ಹೊಂದಿಕೆಯಾಗುವ ಆಭರಣಗಳು, ಬನ್ ಹೇರ್ಸ್ಟೈಲ್, ಕನಿಷ್ಟ ಮೇಕಪ್ನೊಂದಿಗೆ ಆಗಮಿಸಿದ್ದ ಅವರು ಗಮನ ಸೆಳೆದರು. ಶೆಹನಾಜ್ ಗಿಲ್ ಜೊತೆಗೆ ಅವರು ಕುಳಿತಿದ್ದರು.
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಫ್ಲೋರಲ್ ಪ್ರಿಂಟೆಡ್ ಕೋ-ಆರ್ಡ್ ಔಟ್ಫಿಟ್ನಲ್ಲಿ ಆಗಮಿಸಿದ್ದರು. ನಾಗಿನ್ 6ರಲ್ಲಿ ಕಾಣಿಸಿಕೊಂಡಿದ್ದ ತೇಜಸ್ವಿ ಪ್ರಕಾಶ್ ಕೂಡ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಪಿಂಕ್ ಸೀರೆಯುಟ್ಟಿದ್ದ ಈ ನಟಿ ಛಾಯಾಗ್ರಾಹಕರ ಕ್ಯಾಮರಾಗಳಿಗೆ ಪೋಸ್ ನೀಡಿದರು. ಇವರ ವಿಡಿಯೋಗಳು ಹೆಚ್ಚು ವೈರಲ್ ಆಗಿವೆ.
ಇದನ್ನೂ ಓದಿ:ಸ್ಟೈಲಿಶ್ ಸೀರೆಯುಟ್ಟು ಕಿಲ್ಲಿಂಗ್ ಲುಕ್ ಕೊಟ್ಟ ಕೃತಿ ಸನೋನ್; ಆಕರ್ಷಕ ಫೋಟೋಗಳಿಲ್ಲಿವೆ
ಡಂಕಿ ನಟ ಶಾರುಖ್ ಖಾನ್ ಸೂಟ್ ಬೂಟು ಧರಿಸಿ ಸ್ಟೈಲಿಶ್ ಎಂಟ್ರಿ ಕೊಟ್ಟರು. ಸಲ್ಮಾನ್ ಖಾನ್ ಕಡು ನೀಲಿ ಬಣ್ಣದ ಶರ್ಟ್, ಜಾಕೆಟ್ನಲ್ಲಿ ಗಂಭೀರ ನೋಟ ಬೀರಿದರು. ಟೈಗರ್ 3 ನಟ ಹೊರಡುವ ಮುನ್ನ ವೀಲ್ ಚೇರ್ನಲ್ಲಿದ್ದ ಹೆಸರಾಂತ ಗಾಯಕಿ ಉಷಾ ಉತ್ತುಪ್ ಅವರನ್ನು ಅಪ್ಪಿಕೊಂಡರು. ಇನ್ನು, ರಣ್ವೀರ್ ಸಿಂಗ್ , ವಿಜಯ್ ವರ್ಮಾ, ಕರಣ್ ಜೋಹರ್, ಕಿಯಾರಾ ಅಡ್ವಾಣಿ, ಅನನ್ಯಾ ಪಾಂಡೆ, ಆದಿತ್ಯ ರಾಯ್ ಕಪೂರ್ ಸೇರಿದಂತೆ ಹಲವರ ವಿಡಿಯೋಗಳು ವೈರಲ್ ಆಗುತ್ತಿದೆ. ಹೆಚ್ಚಿನ ನಟಿಯರು ಸಾಂಪ್ರದಾಯಿಕ, ವಿಶೇಷವಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಈಗಾಗಲೇ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇದನ್ನೂ ಓದಿ:ಮಿನುಗುವ ಸೀರೆಯಲ್ಲಿ ಕಂಗೊಳಿಸಿದ ಜಾಹ್ನವಿ ಕಪೂರ್ : Photos