ಕರ್ನಾಟಕ

karnataka

ETV Bharat / entertainment

ಬಹುಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ಬಾಲಿವುಡ್​ ತಾರೆ ಮಾಧುರಿ ದೀಕ್ಷಿತ್.. ಬೆಲೆ ಎಷ್ಟು ಅಂತೀರಾ? - madhuri dixit buys luxury apartment

ನಟಿ ಮಾಧುರಿ ದೀಕ್ಷಿತ್ 48 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

Bollywood actress madhuri dixit
ಬಾಲಿವುಡ್​ ತಾರೆ ಮಾಧುರಿ ದೀಕ್ಷಿತ್

By

Published : Oct 5, 2022, 4:46 PM IST

ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್ ಮುಂಬೈನ ವರ್ಲಿಯಲ್ಲಿ 48 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

90ರ ದಶಕದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ತೆರೆ ಮೇಲೆ ಮಿಂಚಿದ ಈ ನಟಿ ಮುಂಬೈನ ವರ್ಲಿಯಲ್ಲಿ ಐಷಾರಾಮಿ ಮನೆ ಖರೀದಿಸಿದ್ದಾರೆ. ಕಳೆದ ವರ್ಷ ಈ ಅಪಾರ್ಟ್​​ಮೆಂಟ್​ ಅನ್ನು ಬಾಡಿಗೆಗೆ ಪಡೆದಿದ್ದರು. ತಿಂಗಳಿಗೆ 12 ಲಕ್ಷ ರೂ. ಬಾಡಿಗೆ ಪಾವತಿಸುತ್ತಿದ್ದರು. 3 ಕೋಟಿ ರೂ. ಠೇವಣಿ ಕೂಡ ಪಾವತಿಸಿದ್ದರು. ಈಗ ಸಂಪೂರ್ಣ ಮೊತ್ತ ಭರಿಸಿ ಈ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

ಇದನ್ನೂ ಓದಿ:ರಿಷಬ್ ಪಂತ್ ಜನ್ಮದಿನ... ಯಾರಿಗಂತ ಹೇಳದೇ ಗಾಳಿಯಲ್ಲಿ ಕಿಸ್ ತೇಲಿಬಿಟ್ಟ ನಟಿ ಊರ್ವಶಿ ರೌಟೇಲಾ

ಕಳೆದ ವರ್ಷ ಈ ಮನೆಯನ್ನು ಬಾಡಿಗೆಗೆ ಪಡೆದಾಗ ಇದು ಕೇವಲ ಮನೆಯಲ್ಲ ಅರಮನೆ ಎಂದು ಬಣ್ಣಿಸಲಾಗಿತ್ತು. ವಿನೂತನ ಶೈಲಿಯಲ್ಲಿದ್ದು, ಬಾಲ್ಕನಿಯಲ್ಲಿ ನಿಂತರೆ ಸಮುದ್ರದಲೆಗಳ ಸೌಂದರ್ಯ ಕಣ್ತುಂಬಿಕೊಳ್ಳಬಹುದು.

ABOUT THE AUTHOR

...view details