ಕರ್ನಾಟಕ

karnataka

ETV Bharat / entertainment

ಅಭಿಮಾನಿಗಳೊಂದಿಗೆ ಸರಳ ದೀಪಾವಳಿ ಆಚರಿಸಿದ ನಟ ಸೋನು ಸೂದ್​ - etv bharat kannada

Sonu Sood Diwali celebration with fans: ಬಾಲಿವುಡ್​ ನಟ ಸೋನು ಸೂದ್​ ತಮ್ಮ ಅಭಿಮಾನಿಗಳೊಂದಿಗೆ ದೀಪಾವಳಿಯನ್ನು ಸರಳವಾಗಿ ಆಚರಿಸಿದ್ದಾರೆ.

Actor Sonu Sood meets his fans outside house on Diwali celebration
ಅಭಿಮಾನಿಗಳೊಂದಿಗೆ ಸರಳ ದೀಪಾವಳಿ ಆಚರಿಸಿದ ನಟ ಸೋನು ಸೂದ್​

By ETV Bharat Karnataka Team

Published : Nov 12, 2023, 9:50 PM IST

ಬಾಲಿವುಡ್​ ನಟ, ನಿರ್ಮಾಪಕ ಸೋನು ಸೂದ್​ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸಿನಿಮಾಗಳಿಗಿಂತ ಸಮಾಜಮುಖಿ ಕೆಲಸಗಳಲ್ಲೇ ಹೆಚ್ಚು ಗುರುತಿಸಿಕೊಂಡಿರುವ ಇವರು, ಈ ಬಾರಿ ದೀಪಾವಳಿಯನ್ನು ಕೂಡ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಅನೇಕರ ಬದುಕಿಗೆ ಬೆಳಕಾಗಿ ರಿಯಲ್​ ಲೈಫ್​ನಲ್ಲೂ ಹೀರೋ ಆಗಿ ಮಿಂಚುತ್ತಿರುವ ನಟ, ಬೆಳಕಿನ ಹಬ್ಬದಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಿಸಿದ್ದಾರೆ.

ಇಂದು ಮುಂಬೈನಲ್ಲಿರುವ ಸೋನ್​ ಸೂದ್​ ಮನೆಯ ಮುಂದೆ ಫ್ಯಾನ್ಸ್​ ಜಮಾಯಿಸಿದ್ದರು. ಅವರಿಗೆ ಆಟೋಗ್ರಾಫ್​ ನೀಡುವುದರ ಜೊತೆಗೆ ಸೆಲ್ಫಿಗೆ ಪೋಸ್​ ನೀಡಿ ಈ ವರ್ಷದ ದೀಪಾವಳಿಯನ್ನು ಅಭಿಮಾನಿಗಳೊಂದಿಗೆ ಆಚರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು​, "ನಾನು ದೀಪಾವಳಿಯನ್ನು ಆಚರಿಸುತ್ತಿರುವುದು ನನ್ನ ಕುಟುಂಬದ ಜೊತೆಯೇ ಎಂದು ಭಾವಿಸುತ್ತೇನೆ. ಅವರ ಪ್ರಾರ್ಥನೆಯೊಂದಿಗೆ ನಾವು ಇಲ್ಲಿ ನಿಂತಿದ್ದೇವೆ. ಪಾರ್ಟಿಗೆ ಹೋಗುವುದು ಅಷ್ಟೊಂದು ಖುಷಿ ಕೊಡುವುದಿಲ್ಲ. ಆದರೆ ಇವರೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ಮುದ ನೀಡುತ್ತದೆ" ಎಂದು ಸಂತಸ ಹಂಚಿಕೊಂಡರು.

ರಿಯಲ್​ ಲೈಫ್​ ಹೀರೋ ಸೋನು ಸೂದ್​: ಕೊರೊನಾ ಸಮಯದಲ್ಲಿ ದೇಶದ ಅನೇಕ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವ ಮೂಲಕ ಸೋನು ಸೂದ್​ ಅವರು ರಿಯಲ್​ ಲೈಫ್​ ಹೀರೋ ಎನಿಸಿಕೊಂಡಿದ್ದಾರೆ. ಕಷ್ಟ ಅಂತ ಬಂದವರಿಗೆ ತಮ್ಮಿಂದಾದಷ್ಟು ಸಹಾಯವನ್ನು ಮಾಡಲು ಸದಾ ಸಿದ್ಧರಿರುತ್ತಾರೆ. ಇತ್ತೀಚೆಗೆ ಬಿಹಾರದ ನವಾದಾ ನಗರದಲ್ಲಿನ ಎರಡೂ ಕಣ್ಣಿಲ್ಲದ ಪುಟಾಣಿ ಮಗುವಿನ ಚಿಕಿತ್ಸಾ ವೆಚ್ಚ ಭರಿಸಿದ್ದಾರೆ. ಈ ಮೂಲಕ ಅಂಧ ಮಗುವಿನ ಬಾಳಿಗೆ ಬೆಳಕಾಗಿದ್ದಾರೆ.

ಇದನ್ನೂ ಓದಿ:ನಾಲ್ಕು ಕೈ-ಕಾಲುಗಳಿದ್ದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ನುಡಿದಂತೆ ನಡೆದ ಸೋನುಸೂದ್​ಗೆ ಮೆಚ್ಚುಗೆ

ಬಿಹಾರದ ನವಾದಾ ನಗರದ ಪಕ್ರಿಬರವಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಗನ್ ಪಂಚಾಯತ್‌ನ ಅಮರಪುರ ಗ್ರಾಮದಲ್ಲಿನ 11 ತಿಂಗಳ ಗುಲ್ಶನ್ ಎಂಬ ಪುಟಾಣಿ ಮಗುವಿಗೆ ಹುಟ್ಟುವಾಗಲೇ ಕಣ್ಣಿರಲಿಲ್ಲ. ಮನೆಯವರು ಕೂಡ ಬಡವರಾಗಿದ್ದು, ಮಗುವಿಗೆ ಆಪರೇಷನ್ ಮಾಡಿಸುವಷ್ಟು ಶಕ್ತರಾಗಿರಲಿಲ್ಲ. ಹೀಗಾಗಿ ಮಗುವಿನ ಚಿಕಿತ್ಸೆಯ ವೆಚ್ಚವನ್ನು ಭರಿಸಿರುವ ಸೋನು ಸೂದ್​, ಗುಲ್ಶನ್ ಪಾಲಿಗೆ ಆಶಾಕಿರಣವಾಗಿದ್ದಾರೆ.

ಅದಕ್ಕೂ, ಕೆಲವು ತಿಂಗಳುಗಳ ಹಿಂದೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸೋನು ಸೂದ್​ ಸಹಾಯ ಹಸ್ತ ಚಾಚಿದ್ದರು. ಉಜ್ಜಯಿನಿಯ ಕಣಿಪುರದಲ್ಲಿರುವ ತಿರುಪತಿ ಧಾಮದ ನಿವಾಸಿ ಅಥರ್ವ ಎಂಬ ಬಾಲಕ ಬೆನ್ನುಮೂಳೆಯ ಸ್ನಾಯು ಕ್ಷೀಣತೆ sma-2 ಕಾಯಿಲೆಯಿಂದ ಬಳಲುತ್ತಿದ್ದ. ಬಾಲಕನ ಪೋಷಕರು ನಟ ಸೋನು ಸೂದ್​ ಭೇಟಿಯಾಗಿ ಮಗುವಿನ ಕಾಯಿಲೆ ಕುರಿತು ದುಃಖ ಹಂಚಿಕೊಂಡಿದ್ದರು. ಹೀಗಾಗಿ ಅಥರ್ವ ಚಿಕಿತ್ಸೆಗೆ ತಮ್ಮಿಂದ ಸಾಧ್ಯವಿರುವ ಎಲ್ಲ ಸಹಾಯ ಮಾಡಿದ್ದರು. ಅಷ್ಟೇ ಅಲ್ಲದೆ, ಮಗುವಿನ ಚಿಕಿತ್ಸೆಗೆ ಸಾಧ್ಯವಾದಷ್ಟು ದೇಣಿಗೆ ನೀಡುವಂತೆ ಜನರಲ್ಲಿ ಮನವಿ ಕೂಡ ಮಾಡಿಕೊಂಡಿದ್ದರು.

ಇದನ್ನೂ ಓದಿ:ಸೋನು ಸೂದ್​ ನೆರವಿನಿಂದ ಮೂಡಿತು ಹೊಸ ಬೆಳಕು.. ಬಿಹಾರದ ಬಾಲಕಿ ಈಗ ಎಲ್ಲರಂತೆ ಕಿಲ ಕಿಲ

ABOUT THE AUTHOR

...view details