ಬಾಲಿವುಡ್ ನಟಿ ಬಿಪಾಶಾ ಬಸು ಅವರು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ತಮ್ಮ ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರ ಜೊತೆಗೆ ಆಗಾಗ್ಗೆ ತಮ್ಮ ಮಗಳು ದೇವಿ ಬಸು ಸಿಂಗ್ ಗ್ರೋವರ್ ಅವರ ಮುದ್ದಾದ ಚಿತ್ರಗಳು ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಸೋಮವಾರ, ನಟ ತನ್ನ ಮಗಳು ತಂದೆ ಕರಣ್ ಸಿಂಗ್ ಗ್ರೋವರ್ ಜೊತೆ ಕಾರ್ ರೈಡ್ ಅನ್ನು ಆನಂದಿಸುತ್ತಿರುವ ವಿಡಿಯೋವನ್ನು ನಟಿ ಬಿಪಾಶು ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿಕೊಂಡಿರುವ ನಟಿ ಬಿಪಾಶಾ ಬಸು, ಅದಕ್ಕೆ "ದೇವಿ ಮತ್ತು ಪಾಪಾ" ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ. ವಿಡಿಯೋದಲ್ಲಿ, ಹೇಟ್ ಸ್ಟೋರಿ 3 ನಟ ಮಗಳು ದೇವಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಕಾರಿನ ಹೊರಗಿನ ನೋಟವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಬಿಪಾಶಾ ಅವರ ಮಗಳು ಮುದ್ದಾದ ಗುಲಾಬಿ ಬಣ್ಣದ ಉಡುಪು ಧರಿಸಿದ್ದು, ಅದರ ಮೇಲೆ ಕೆಂಪು ಹಾರ್ಟ್ ಚಿತ್ರಗಳಿರುವುದನ್ನು ಕಾಣಬಹುದು.
ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮದುವೆಯಾದ ಆರು ವರ್ಷಗಳ ನಂತರ ಕಳೆದ ವರ್ಷ ನವೆಂಬರ್ 12 ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಇನ್ಸ್ಟಾಗ್ರಾಮ್ನಲ್ಲಿ ಬಿಪಾಶಾ ತಮ್ಮ ಮಗಳ ಹೆಸರನ್ನು ಪ್ರಕಟಿಸಿದ ಪೋಸ್ಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, "12.11.2022. ದೇವಿ ಬಸು ಸಿಂಗ್ ಗ್ರೋವರ್. ನಮ್ಮ ಪ್ರೀತಿಯ ಭೌತಿಕ ಅಭಿವ್ಯಕ್ತಿ ಮತ್ತು ಅಮ್ಮನ ಆಶೀರ್ವಾದ ಈಗ ಇಲ್ಲಿದೆ ಮತ್ತು ಅವಳು ದೈವಿಕಳು." ಎಂದು ಬರೆಯಲಾಗಿತ್ತು.