ಅಭಿನಯ ಚಕ್ರವರ್ತಿ ಸುದೀಪ್ ಅವರು ನಡೆಸಿಕೊಡುವ ಕನ್ನಡದ ಖ್ಯಾತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಈಗಾಗಲೇ 50 ದಿನಗಳನ್ನು ಪೂರೈಸಿರುವ 'ಕನ್ನಡ ಬಿಗ್ ಬಾಸ್ ಸೀಸನ್ 10'ಕ್ಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಟಾಸ್ಕ್ಗಳಲ್ಲೂ ಭಾಗಿಯಾಗಿದ್ದಾರೆ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ 'ಬಿಗ್ ಬಾಸ್'ನ ಇಂದಿನ ಸಂಚಿಕೆಯ ಪ್ರೋಮೋಗಳು ಅನಾವರಣಗೊಂಡಿದ್ದು, ನೋಡುಗರ ಕುತೂಹಲ ಹೆಚ್ಚಿದೆ.
ಆಟದಲ್ಲಿ ತಂಡಗಳು ಅಂಕಕ್ಕಿಂತ ಪೆಟ್ಟು ಪಡೆದಿದ್ದೇ ಹೆಚ್ಚು!' ಈಗಾಗಲೇ ಕೇಕ್ ತಿಂದು ರಸಪ್ರಶ್ನೆಯ ಆಟ ಆಡಿರುವ ಮನೆ ಮಂದಿಗೆ ಬಿಗ್ ಬಾಸ್ ನೀಡಿರುವ ಎರಡನೇ ಟಾಸ್ಕ್ ಸಖತ್ ಚಾಲೆಂಜಿಂಗ್ ಆಗಿದೆ. ಆಟದ ಪರಿಣಾಮವೂ ಜೋರಾಗೇ ಇದ್ದಂತೆ ಕಾಣುತ್ತಿದೆ. ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಆಟ ಗುದ್ದಾಟ ಎರಡೂ ಜಾಹೀರಾಗಿವೆ. ಹೌದು, 'ಆಟದಲ್ಲಿ ತಂಡಗಳು ಅಂಕಕ್ಕಿಂತ ಪೆಟ್ಟು ಪಡೆದಿದ್ದೇ ಹೆಚ್ಚು!' ಎಂಬ ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಮೂಡಿಸಿದೆ.
ಟಾಸ್ಕ್ ಏನು? ಎರಡೂ ಗುಂಪಿನ ಎಲ್ಲಾ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿರುವ ಜಾಗದಲ್ಲಿ ಒಂದಿಷ್ಟು ಬಾಲ್‌ಗಳನ್ನು ಇಡಲಾಗಿದೆ. ಬಿಗ್ ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತಾ ಹೋಗಿ ಬಾಲ್ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ.