ಕರ್ನಾಟಕ

karnataka

ETV Bharat / entertainment

ಬೆಂಗಳೂರಿನ ಈ ಥಿಯೇಟರ್​ನಲ್ಲಿ ಕೆಜಿಎಫ್ ಚಾಪ್ಟರ್ 2 ವೀಕ್ಷಣೆಗೆ ಬಂದ ಅಭಿಮಾನಿಗಳಿಗೆ ಶಾಕ್!

ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಸಿನಿಮಾ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಚಾಪ್ಟರ್ 2 ಸಿನೆಮಾ ಬದಲಿಗೆ ಚಾಪ್ಟರ್ 1 ಸಿನೆಮಾ ಪ್ರದರ್ಶನವಾಗಿದ್ದು, ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

big-shock-for-audience-who-came-to-watch-kgf-chapter-2-movie
ವೀರೇಶ್ ಥಿಯೇಟರ್​ನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಶಾಕ್!

By

Published : Apr 14, 2022, 9:37 AM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಹಾಗು ವಿಜಯ್ ಕಿರಂಗದೂರ್ ಅದ್ಧೂರಿ ನಿರ್ಮಾಣದ ಕೆಜಿಎಫ್ ಚಾಪ್ಟರ್-2 ಸಿನೆಮಾ ಇಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ. ಮಧ್ಯರಾತ್ರಿಯಿಂದಲೇ ದೇಶಾದ್ಯಂತ ಕೆಜಿಎಫ್ ಚಾಪ್ಟರ್ 2 ಸಿನೆಮಾ ಬಿಡುಗಡೆ ಆಗುವ ಮೂಲಕ, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ‌. ಆದರೆ ಬೆಂಗಳೂರಿನ ವೀರೇಶ್ ಚಿತ್ರಮಂದಿರಲ್ಲಿ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ 20 ನಿಮಿಷಗಳ ಕಾಲ ಕೆಜಿಎಫ್ 1 ಪ್ರಸಾರ ಆಗುವ ಮೂಲಕ, ಸಿನಿಮಾ ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ‌.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ವೀರೇಶ್ ಚಿತ್ರಮಂದಿರಲ್ಲಿ ಕೆಜಿಎಫ್ ಚಾಪ್ಟರ್-2 ಬದಲಿಗೆ ಚಾಪ್ಟರ್-1 ರಿಲೀಸ್ ಆಗಿದೆ. ಸಿಬ್ಬಂದಿ ಈ ರೀತಿ ಎಡವಟ್ಟು ಮಾಡಿದ್ದಾರೆ. 20 ನಿಮಿಷಗಳ ಕಾಲ ಕೆಜಿಎಫ್ ಚಾಪ್ಟರ್ 1 ಪ್ರಸಾರ ಆಗಿದೆ. ಲೈಸೆನ್ಸ್ ಇಶ್ಯೂ ಆಗಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನ ತಡವಾಗಿದೆ. ಲೋಡ್ ಆಗ್ತಿಲ್ಲ, ಟೆಕ್ನಿಕಲ್ ಇಶ್ಯು ಆಗ್ತಿದೆ ಎಂದು ಸಿಬ್ಬಂದಿ ಪ್ರೇಕ್ಷಕರನ್ನು ಸಮಾಧಾನ ಮಾಡಿದ್ದಾರೆ. ಯಶ್ ಅಭಿಮಾನಿಗಳ ಭಾವನೆ ಜೊತೆ ಪ್ರೇಕ್ಷಕರು ಆಟ ಆಡುತ್ತಿದ್ದಾರೆ. ಎಲ್ಲಾ ಸಮಸ್ಯೆ ಪರಿಹಾರ ಮಾಡಿಕೊಂಡು ಸಿನೆಮಾ ಪ್ರಸಾರ ಮಾಡಬೇಕು. ಒಂದು ಗಂಟೆಯಾದರೂ ಚಿತ್ರ ಆರಂಭವಾಗಿಲ್ಲ ಎಂದು ಪ್ರೇಕ್ಷಕರು ಗರಂ ಆಗಿದ್ದರು. ವೀರೇಶ್ ಥಿಯೇಟರ್ ಸ್ಕ್ರೀನ್-2ರಲ್ಲಿ ಗಲಾಟೆಯಾಗಿದೆ.

ವೀರೇಶ್ ಚಿತ್ರಮಂದಿರ ಹೌಸ್​ಫುಲ್

ಆ ನಂತರದಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನ ಮಾಡಲಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರ ನೋಡಲು ಭಾರಿ ಬೇಡಿಕೆಯಿದ್ದು, ಬೆಂಗಳೂರಿನಲ್ಲಿ ಸಿಂಗಲ್ ಸ್ಕ್ರೀನ್‌ನಲ್ಲಿ ಕೂಡ 1 ಟಿಕೆಟ್‌ಗೆ 300 ರೂಪಾಯಿ ತೆರಬೇಕು. ಇಷ್ಟು ದುಡ್ಡು ಕೊಟ್ಟು ಸಿನೆಮಾ ನೋಡಬೇಕು ಎನ್ನುವ ಆಸೆಯಿಂದ ಚಿತ್ರಮಂದಿರಕ್ಕೆ ಬಂದರೆ, ಕೆಜಿಎಫ್ ಚಾಪ್ಟರ್ 2 ಬದಲು, ಕೆಜಿಎಫ್ ಚಾಪ್ಟರ್ 1 ಪ್ರಸಾರ ಮಾಡಿದ್ದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿತ್ತು. ಅದರಲ್ಲಿಯೂ ನಿದ್ದೆ, ಕೆಲಸ ಎಲ್ಲವನ್ನು ಬಿಟ್ಟು ಅಭಿಮಾನಿಗಳು ಚಿತ್ರಮಂದಿರದತ್ತ ಮುಖ ಮಾಡಿದ್ದಾರೆ.

ಇದಷ್ಟೇ ಅಲ್ಲದೇ ಗಾಂಧಿನಗರದ ತ್ರಿವೇಣಿ ಥಿಯೇಟರ್​​ನಲ್ಲಿ ಫಸ್ಟ್ ಶೋಗೆ ಕೌಂಟ್​​ಡೌನ್ ಆರಂಭವಾಗಿದೆ. 10 ಗಂಟೆಗೆ ಫಸ್ಟ್ ಶೋ ಆರಂಭವಾಗಲಿದೆ. ಅನುಪಮ ಚಿತ್ರಮಂದಿರದಲ್ಲಿ ಈಗಾಗಲೇ ಶೋ ಆರಂಭವಾಗಿದೆ. ಗಾಂಧಿನಗರದಲ್ಲಿಯೇ ನಾಲ್ಕು ಥಿಯೇಟರ್​​ಗಳಲ್ಲಿ ಕೆಜಿಎಫ್ ಅಬ್ಬರ ಶುರುವಾಗಿದೆ. ಭೂಮಿಕಾ ಚಿತ್ರಮಂದಿರದಲ್ಲಿ ತೆಲುಗು, ಹಿಂದಿ ವರ್ಷನ್ ಸಿನಿಮಾ ಪ್ರದರ್ಶನ ಆಗಲಿದೆ. ತ್ರಿವೇಣಿ ಚಿತ್ರಮಂದಿರದಲ್ಲಿ ಯಶ್ ಕಟೌಟ್​ಗೆ ಹೂವಿನ ಹಾರಗಳಿಂದ ಸಿಂಗಾರ ಮಾಡಲಾಗಿದ್ದು, ಬರೋಬ್ಬರಿ 72 ಅಡಿಯ ಕಟೌಟ್​ಗೆ ಯಶ್ ಅಭಿಮಾನಿಗಳಿಂದ 3 ಲಕ್ಷ ರೂಪಾಯಿಯ ಹೂವಿನ ಹಾರಗಳನ್ನ ಹಾಕಲಾಗಿದೆ.

ಇದನ್ನೂ ಓದಿ:ಗಣಿನಾಡಲ್ಲಿ ಕೆಜಿಎಫ್​ ಚಾಪ್ಟರ್​ -2.. ಸಿನೆಮಾ ನೋಡಲು ಅಭಿಮಾನಿಗಳ ನೂಕುನುಗ್ಗಲು

ABOUT THE AUTHOR

...view details