ಕರ್ನಾಟಕ

karnataka

ETV Bharat / entertainment

ಐದನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿರುಷ್ಕಾ - ವಿರಾಟ್ ಅನುಷ್ಕಾ ವಿವಾಹ ವಾರ್ಷಿಕೋತ್ಸವ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಂದು ಐದನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

Anushka Sharma Virat Kohli wedding anniversary
ಐದನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿರುಷ್ಕಾ

By

Published : Dec 11, 2022, 6:34 PM IST

ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಂದು ಐದನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಕ್ಯೂಟ್ ಕಪಲ್​ಗೆ ಅಭಿಮಾನಿಗಳು, ಚಿತ್ರರಂಗದವರು ಸೇರಿದಂತೆ ಆಪ್ತರು ಶುಭಾಶಯ ಕೋರಿದ್ದಾರೆ. ದಾಂಪತ್ಯ ಜೀವನಕ್ಕೆ ಐದು ವರ್ಷ ತುಂಬಿರುವ ಸಂಭ್ರಮದಲ್ಲಿರುವ ದಂಪತಿ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಿರುಷ್ಕಾ

"ನಮ್ಮನ್ನು ನಾವು ಆಚರಿಸಿಕೊಳ್ಳಲು ಈ ಸುಂದರವಾದ ಚಿತ್ರಗಳನ್ನು ಪೋಸ್ಟ್ ಮಾಡಲು ಇವತ್ತಿಗಿಂತ ಉತ್ತಮವಾದ ದಿನ ಯಾವುದು'' ಎಂದು ನಟಿ ಅನುಷ್ಕಾ ಶರ್ಮಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವಿರಾಟ್ ಕೊಹ್ಲಿ ಅವರ ಫನ್ನಿ ಫೋಟೋಗಳು ಇವೆ. "ಶಾಶ್ವತತೆಯ ಪ್ರಯಾಣದಲ್ಲಿ 5 ವರ್ಷಗಳು. ನಿಮ್ಮನ್ನು ಪಡೆಯಲು ನಾನು ಆಶೀರ್ವದಿಸಲ್ಪಟ್ಟಿದ್ದೇನೆ, ನಾನು ನಿನ್ನನ್ನು ಪ್ರೀತಿಸುತ್ತೇನೆ'' ಎಂದು ವಿರಾಟ್ ಕೊಹ್ಲಿ ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡು ಪತ್ನಿಗೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ:'ಅಭಿ-ಅವಿವಾ' ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ.. ಎಂಗೇಜ್​ಮೆಂಟ್​ ಸಂಭ್ರಮದ ಫೋಟೋಗಳನ್ನು ನೋಡಿ

ಪ್ರಣಯ ಪಕ್ಷಿಗಳಂತೆ ನಾಲ್ಕು ವರ್ಷಗಳಿಂದ ಮಾಧ್ಯಮಗಳ ಕಣ್ತಪ್ಪಿಸಿ ಈ ಜೋಡಿ ದೇಶ-ವಿದೇಶ ಸುತ್ತಾಡಿತ್ತು. ನಂತರ 2017 ಡಿ.11 ರಂದು ಇಟಲಿಯಲ್ಲಿ, ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಟಿ ಅನುಷ್ಕಾ ಅವರು​ ವಿರಾಟ್​ ಕೊಹ್ಲಿ ಕೈ ಹಿಡಿದು ಎಲ್ಲಾ ರೂಮರ್ಸ್​ಗಳಿಗೆ ಇತಿಶ್ರೀ ಹಾಡಿದ್ದರು. ಅಂದಿನಿಂದ ಮಾದರಿ ದಂಪತಿ ಅಂತೆ ಜೀವನ ನಡೆಸುತ್ತಿದ್ದಾರೆ. ಮುದ್ದು ಮಗಳ ಪೋಷಕರಾಗಿಯೂ ಅವರು ಬಡ್ತಿ ಪಡೆದಿದ್ದಾರೆ.

ABOUT THE AUTHOR

...view details