ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಜನಪ್ರಿಯ ತಾರಾ ದಂಪತಿ. ಈ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ಮೂಲಕ ಬಹುತೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಒಬ್ಬರಿಗೊಬ್ಬರು ಶಕ್ತಿ ಆಗಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಅವರು ತಮ್ಮ ಶಕ್ತಿ ಎಂದು ಅನೇಕ ಸಂದರ್ಶನಗಳಲ್ಲಿ ವಿರಾಟ್ ಕೊಹ್ಲಿ ಹೇಳಿಕೊಂಡು ಬಂದಿದ್ದಾರೆ. ಕೊಹ್ಲಿ ಆರ್‌ಸಿಬಿ ಜರ್ಸಿ ಅಥವಾ ಇಂಡಿಯನ್ ಕ್ರಿಕೆಟ್ ಉಡುಗೆ ಧರಿಸಿಲಿ, ಬಾಲಿವುಡ್ ದಿವಾ ಅನುಷ್ಕಾ ತಮ್ಮ ಪತಿಯನ್ನು ಹುರಿದುಂಬಿಸುವ ದೃಶ್ಯಗಳು ಕಂಡು ಬರುತ್ತವೆ.
ಸೋಮವಾರ ಕೂಡ ನಟಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಪಂದ್ಯ ನಡೆದಿದೆ. ತಮ್ಮ ಪತಿಯ ಆರ್‌ಸಿಬಿ ತಂಡವನ್ನು ಹುರಿದುಂಬಿಸಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅವರ ಫೋಟೋಗಳೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎಲ್‌ಎಸ್‌ಜಿ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬ್ಯಾಟಿಂಗ್ ಮಾಡಿ 212 ಗಳಿಸಿತ್ತು. ಆರ್‌ಸಿಬಿ ಎದುರಾಳಿಯಾದ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡ ಗೆಲುವು ಸಾಧಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನನುಭವಿಸಿದ್ದರೂ, ಈ ತಂಡ ಮತ್ತು ಸ್ಟಾರ್ ದಂಪತಿ ಮೇಲಿನ ಅಭಿಮಾನಿಗಳ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ.
ವಿರಾಟ್ ಮತ್ತು ಅನುಷ್ಕಾ ಅತ್ಯಂತ ಪ್ರೀತಿಪಾತ್ರಕ್ಕೊಳಗಾದ ಸೆಲೆಬ್ರಿಟಿ ಜೋಡಿಗಳಲ್ಲಿ ಪ್ರಮುಖರು. ಕ್ರೀಡಾಂಗಣದಲ್ಲಿ ಅವರ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆದಿದೆ. ವೈಟ್ ಡ್ರೆಸ್ ಧರಿಸಿ ಬಂದಿದ್ದ ನಟಿ ಆಟದ ಉದ್ದಕ್ಕೂ ತಮ್ಮ ಪತಿಯನ್ನು ಹುರಿದುಂಬಿಸುತ್ತಲೇ ಇದ್ದರು. ಸ್ಟೇಡಿಯಂನಿಂದ ಅವರ ಹಲವಾರು ಚಿತ್ರಗಳು ವೈರಲ್ ಆಗಿ, ಆನ್ಲೈನ್ನಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ:ಒಡಹುಟ್ಟಿದವರ ದಿನ: ಸಹೋದರನ ಜೊತೆಗಿನ ವಿಶೇಷ ಫೋಟೋ ಹಂಚಿಕೊಂಡ ಅಥಿಯಾ ಶೆಟ್ಟಿ
ಇನ್ನು ವಿರಾಟ್ ಕೊಹ್ಲಿ ಇತ್ತೀಚೆಗೆ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ, ಪತ್ನಿ, ನಟಿ ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಿದ್ದರು. ತಮ್ಮ ಮೊದಲ ಭೇಟಿಯ ಬಗ್ಗೆ ವಿವರಿಸಿದ್ದರು. ಜಾಹೀರಾತಿಗಾಗಿ ಅನುಷ್ಕಾ ಅವರ ಜೊತೆ ಚಿತ್ರೀಕರಣಕ್ಕೆ ಹೋಗಬೇಕಿತ್ತು. ಆ ಸಂದರ್ಭ ನಾನು ಬಹಳ ಕಸಿವಿಸಿಗೊಂಡಿದ್ದೆ. ಏಕೆಂದರೆ ಅನುಷ್ಕಾ ಅವರು ಆ ಸಮಯದಲ್ಲಿ ಭಾರತದ "ಟಾಪ್ ನಟಿಯರಲ್ಲಿ" ಒಬ್ಬರಾಗಿದ್ದರು ಎಂದು ತಿಳಿಸಿದ್ದಾರೆ. ಬಾಲಿವುಡ್ನಲ್ಲಿ ಈಗಲೂ ಅನುಷ್ಕಾ ಶರ್ಮಾ ಬೇಡಿಕೆ ಹೊಂದಿದ್ದಾರೆ. ನಾಲ್ಕು ವರ್ಷಗಳ ಬ್ರೇಕ್ ಬಳಿಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಚಕ್ಡಾ ಎಕ್ಸ್ಪ್ರೆಸ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ. ಭಾರತದ ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರ ಬಯೋಪಿಕ್ ಇದು. ಸ್ಟಾರ್ ಕ್ರಿಕೆಟಿಗನ ಪತ್ನಿ ಈಗ ಕ್ರಿಕೆಟಿಗರ ಪಾತ್ರಕ್ಕೆ ಜೀವ ತುಂಬಿರುವುದು ಸದ್ಯ ಸಹಜವಾಗಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಆರ್ಸಿಬಿಗೆ ಮಾರ್ಕಸ್, ನಿಕೋಲಸ್ ಕಂಟಕ: ಕೊನೆಯ ಓವರ್ ಥ್ರಿಲ್ಲರ್ನಲ್ಲಿ ಸೋಲಿನ ಆಘಾತ