ಕರ್ನಾಟಕ

karnataka

ETV Bharat / entertainment

'ಕಾಟೇರ'ದಲ್ಲಿ ದರ್ಶನ್ ಬಾಲ್ಯದ ಪಾತ್ರ ಮಾಡಿದ ಯುವ ಪ್ರತಿಭೆ ಯಾರು ಗೊತ್ತೇ? - ದರ್ಶನ್ ಕುಟುಂಬ

'ಕ್ರಾಂತಿ' ಸಿನಿಮಾದಲ್ಲಿ ಅಸಿಸ್ಟೆಂಟ್​ ಡೈರೆಕ್ಟರ್​ ಆಗಿ ಕೆಲಸ ಮಾಡಿದ್ದ ದರ್ಶನ್​ ಅವರ ಸಹೋದರಿಯ ಮಗ ಚಂದು ಅವರು 'ಕಾಟೇರ' ಸಿನಿಮಾದಲ್ಲಿ ಚಾಲೆಂಜಿಂಗ್​ ಸ್ಟಾರ್​ ಬಾಲ್ಯದ ಪಾತ್ರ ಮಾಡಿದ್ದಾರೆ.

Chandu with Darshan
ದರ್ಶನ್​ ಜೊತೆ ಚಂದು

By ETV Bharat Karnataka Team

Published : Dec 29, 2023, 8:22 PM IST

ಈ ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಸ್ಟಾರ್ ಕುಟುಂಬದ ಮಕ್ಕಳು ಹಾಗು ಸಂಬಂಧಿಕರು ಬರುವುದು ಹೊಸತೇನಲ್ಲ. ಖಳನಟನಾಗಿ ಹಾಗೂ ಪೋಷಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದವರು ತೂಗುದೀಪ್​ ಶ್ರೀನಿವಾಸ್​. ಅವರ ತರುವಾಯ ಪುತ್ರ ದರ್ಶನ್​ ಹಾಗೂ ದಿನಕರ್​ ತೂಗುದೀಪ್​ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದೀಗ ಅದೇ ಕುಟುಂಬದಿಂದ ಮತ್ತೊಂದು ಕುಡಿ ಚಂದನವನ ಪ್ರವೇಶಿಸಿದೆ. ದರ್ಶನ್​ ಸಹೋದರಿಯ ಮಗ ಚಂದು 'ಕಾಟೇರ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ.

ಕಾಟೇರ ಸಿನಿಮಾದ ಪೋಸ್ಟರ್​

ಕಲಾವಿದರು ಕ್ಯಾಮರಾ ಎದುರಿಸುವ ಮುನ್ನ ಕ್ಯಾಮರಾ ಹಿಂದೆ ಸಿನಿಮಾವನ್ನು ನೋಡಬೇಕು. ಬಳಿಕ ಮುಂದೆ ಬರಬೇಕು ಎನ್ನುವುದು ದರ್ಶನ್ ಅಭಿಪ್ರಾಯ. ಅದರಂತೆ ದರ್ಶನ್ ಕೂಡ ತೆರೆಯ ಹಿಂದೆ ಲೈಟ್‌ ಬಾಯ್‌, ಕ್ಯಾಮರಾ ಅಸಿಸ್ಟೆಂಟ್‌, ಜೂನಿಯರ್‌ ಆರ್ಟಿಸ್ಟ್‌, ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ಹೀರೋ ಆಗಿ ಈಗ ಚಾಲೆಂಜಿಂಗ್ ಸ್ಟಾರ್ ಆದವರು.

ದರ್ಶನ್​ ಜೊತೆ ಚಂದು

ಕ್ರಾಂತಿ ಸಿನಿಮಾದಲ್ಲಿ ಅಸಿಸ್ಟೆಂಟ್‌ ಡೈರೆಕ್ಟರ್​ ಆಗಿ ಕೆಲಸ ಮಾಡಿದ್ದ ಚಂದು, ಕಾಟೇರದಲ್ಲಿ ದರ್ಶನ್‌ ಬಾಲ್ಯದ ಪಾತ್ರ ಮಾಡಿದ್ಧಾರೆ. ಚಿತ್ರದಲ್ಲಿ 'ಅನುರಾಗವ ಕಲಿಸಲು..' ಎಂಬ ಮೆಲೋಡಿ ಹಾಡಿನಲ್ಲಿ ಚಂದು ಅಭಿನಯಿಸಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯದ ಹಾಡನ್ನು ವಾಣಿ ಹರಿಕೃಷ್ಣ ಹಾಡಿದ್ದಾರೆ. ಈ ಹಾಡಿನಲ್ಲಿ ನಾಯಕ ನಾಯಕಿಯರ ಟೀನೇಜ್ ಲವ್‌ ಸ್ಟೋರಿ ಇದೆ. ದರ್ಶನ್ ಮಗ ವಿನೀಶ್ ಅವರು ಯಜಮಾನ, ಮಿ.ಐರಾವತ ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.

ಇದನ್ನೂ ಓದಿ:'ಕಾಟೇರ' ಸಿನಿಮಾ ಹೇಗಿದೆ?: ಯಾರು, ಏನಂದ್ರು? ವಿಡಿಯೋ ನೋಡಿ

ABOUT THE AUTHOR

...view details