ನವರಸನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಗುರು ಪ್ರಸಾದ್ಗೆ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಮಟ್ಟದ ಬ್ರೇಕ್ ನೀಡಿದ ಸಿನಿಮಾ 'ಮಠ'. ಗುರು ಪ್ರಸಾದ್ ನಿರ್ದೇಶನ ಮತ್ತು ಜಗ್ಗೇಶ್ ವಿಭಿನ್ನ ಮ್ಯಾನರಿಸಂನಿಂದ ಮಠ ಚಿತ್ರವು ಸಿನಿಪ್ರಿಯರನ್ನು ನಕ್ಕು ನಲಿಸಿತ್ತು. ಇದೀಗ ಇದೇ ಟೈಟಲ್ ಮೇಲೆ ಸಿನೆಮಾವೊಂದು ಬರುತ್ತಿದೆ. ಹಾಗಂತ ಈ ಸಿನೆಮಾಗೂ, ಆ ಸಿನೆಮಾಗೂ ಸಂಬಂಧವಿಲ್ಲ, ಇದೇ ಬೇರೆ ಅದೇ ಬೇರೆ.
ಫಿಲಾಸಫಿಕಲ್, ಕಾಮಿಡಿ, ಸತ್ಯ ಘಟನೆಯಾಧಾರಿತ ಮಠ ಸಿನೆಮಾದಲ್ಲಿ ದೊಡ್ಡ ತಾರಾಬಳಗವಿದೆ. ಬರೋಬ್ಬರಿ 82 ಜನ ಕಲಾವಿದರು ನಟಿಸಿರುವ ಈ ಚಿತ್ರದಲ್ಲಿ, ನಿರ್ದೇಶಕ ಗುರು ಪ್ರಸಾದ್ ಹಾಗೂ ತಬಲನಾಣಿ, ಮಂಡ್ಯ ರಮೇಶ್, ಬಿರಾದಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, 25 ಜಿಲ್ಲೆಗಳಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಕಥೆಗೆ ತಕ್ಕಂತೆ ಶೂಟಿಂಗ್ ಮಾಡಿದೆ. ಸುಮಾರು ಮುನ್ನೂರು ಮಠಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಈ ಬಗ್ಗೆ ಮಾತನಾಡಿದ ಹಾಸ್ಯ ನಟ ಸಾಧುಕೋಕಿಲ, ನಾನು ಸುಮಾರು ಮಾಡಿರಬಹುದು. ಆದರೆ ಲೆಕ್ಕ ಇಟ್ಟಿಲ್ಲ. ಸುಮಾರು 600ರಿಂದ 700 ಸಿನೆಮಾ ಮಾಡಿರಬಹುದು. ಜಾಸ್ತಿ ಅಥವಾ ಕಡಿಮೆ ಎರಡು ಇರಬಹುದು. ಆದರೆ, ಗುರು ಪ್ರಸಾದ್ ಮಠ ಸಿನೆಮಾದಲ್ಲಿ ನಾನು ಒಂದೆರೆಡು ಸೀನ್ನಲ್ಲಿ ಮಾಡಿದ್ದೇನೆ. ಈ ಚಿತ್ರದಲ್ಲಿ ಮಠ ಎಂದು ಹೆಸರು ತೆಗೆದುಕೊಳ್ಳಲಾಗಿದೆ, ಕಥಾವಸ್ತು ಬೇರೆ. ನಾನು ಮೇಜರ್ ರೋಲ್ ಮಾಡಿದ್ದು, ಆದರೆ, ಅದು ನನಗೆ ಕಾಮಿಡಿಯಲ್ಲ. ಇದು ನಿಜ ಜೀವನದ ಕಥೆ. ಒಂದೊಂದು ಪಾತ್ರವೂ ಕಥಾನಕ ಎಂದು ಹೇಳಿದರು.