ಕರ್ನಾಟಕ

karnataka

ETV Bharat / entertainment

ಅನಿರುದ್ಧ್‌ ಜತ್ಕರ್ ಭರ್ಜರಿ ಅಡುಗೆ.. 'Chef ಚಿದಂಬರ'ನಿಗೆ ಅನುಭವಿ Chefಗಳಿಂದ ತರಬೇತಿ - anirudh jatkar next movie

Chef Chidambara: ನಟ ಅನಿರುದ್ಧ್‌ ಜತ್ಕರ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುಂದಿನ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

anirudh jatkar
ನಟ ಅನಿರುದ್ಧ್‌ ಜತ್ಕರ್ 'Chef ಚಿದಂಬರ' ಸಿನಿಮಾ

By ETV Bharat Karnataka Team

Published : Aug 24, 2023, 4:05 PM IST

ಚಿತ್ರ, ತುಂಟಾಟ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟ ಅನಿರುದ್ಧ್‌ ಜತ್ಕರ್. ಹಿರಿತೆರೆ ಜೊತೆಗೆ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಜೊತೆ ಜೊತೆಯಲಿ ಎಂಬ ಧಾರಾವಾಹಿ ಕನ್ನಡಿಗರ ಮನೆ ಮಾತಾಗಿತ್ತು. ಆರ್ಯವರ್ಧನ್​ ಎಂಬ ಪಾತ್ರದ ಮೂಲಕ ತಮ್ಮ ಸ್ಟಾರ್​ ಡಮ್​ ಹೆಚ್ಚಿಸಿಕೊಂಡ್ರು. ಇದೀಗ ಹೊಸ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ.

ಅನಿರುದ್ಧ್‌ ಜತ್ಕರ್ ಸಿನಿಮಾ:'Chef ಚಿದಂಬರ' ನಟ ಅನಿರುದ್ಧ್‌ ಜತ್ಕರ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ. ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. 'Chef ಚಿದಂಬರ' ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ.

'Chef ಚಿದಂಬರ'ನಿಗೆ ಅನುಭವಿ Chefಗಳಿಂದ ತರಬೇತಿ

'Chef ಚಿದಂಬರ'ನಿಗೆ ತರಬೇತಿ:ನಟ ಅನಿರುದ್ಧ್ ಈ ಚಿತ್ರದಲ್ಲಿ "chef" ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ನಟ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಅನಿರುದ್ಧ್ ಅವರಿಗೆ ಹೆಸರಾಂತ ಬಾಣಸಿಗರು ತರಬೇತಿ ನೀಡುತ್ತಿದ್ದಾರೆ. ಈ ಟ್ರೈನಿಂಗ್ ವಿಡಿಯೋವನ್ನು ಚಿತ್ರತಂಡ ರಿವೀಲ್​ ಮಾಡಿದೆ.

ಕಾಮಿಡಿ ಸಿನಿಮಾ: ಕೆಲ ದಿನಗಳ ಹಿಂದೆ‌ ಅನಿರುದ್ಧ್ ನಟನೆಯ ಈ ಚಿತ್ರದ ಶೀರ್ಷಿಕೆಯನ್ನು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದರು. ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಅಂತಾ ಶುಭ ಹಾರೈಸಿದ್ದರು. ಅನಿರುದ್ಧ್ ಈ ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಡಾರ್ಕ್ ಕಾಮಿಡಿ ಜಾನರ್​ ಕಥೆಯಾಗಿದೆ.

'Chef ಚಿದಂಬರ' ಚಿತ್ರತಂಡ: ರಾಘು ಚಿತ್ರ ಖ್ಯಾತಿಯ ನಿರ್ದೇಶಕ ಎಂ. ಆನಂದರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, ವಿಕ್ರಾಂತ್ ರೋಣ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ:ಬಿಡುಗಡೆಗೆ ಸಜ್ಜಾಗುತ್ತಿದೆ 'ಕರಟಕ ದಮನಕ': ಶಿವಣ್ಣ - ಪ್ರಭುದೇವ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ

ಐದು ವರ್ಷಗಳ ನಂತರ ಅನಿರುದ್ಧ್ ಸಿನಿಮಾ:ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಸೇರಿದಂತೆ ಮುಂತಾದವರು "chef ಚಿದಂಬರ" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಐದು ವರ್ಷಗಳ ನಂತರ ಅನಿರುದ್ಧ್ ಸಿನಿಮಾ ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ:ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ - ಭುವನ್ : ಸಮಾರಂಭಕ್ಕೆ ಮಾಜಿ ಸಿಎಂ BSY ಸೇರಿ ಗಣ್ಯರು ಸಾಕ್ಷಿ

ABOUT THE AUTHOR

...view details