ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಅನಿಮಲ್ ಸಿನಿಮಾದ ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿದೆ. ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದರೂ, ಸಿನಿಮಾದ ಗಳಿಕೆ ಅತ್ಯುತ್ತಮವಾಗಿದೆ. ಹಿಂಸಾಚಾರ, ಸ್ತ್ರೀದ್ವೇಷದ ಸಿನಿಮಾ ಎಂಬ ಟೀಕೆ ವ್ಯಕ್ತವಾಗಿದ್ದರೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಮೆಚ್ಚಿನ ಸಿನಿಮಾವಾಗಿ ಹೊರಹೊಮ್ಮಿದೆ. ವಿಕ್ಕಿ ಕೌಶಲ್ ಅವರ ಸ್ಯಾಮ್ ಬಹದ್ದೂರ್ ಸಿನಿಮಾ ಕೂಡ ಪ್ರದರ್ಶನ ಆಗುತ್ತಿದ್ದು, 'ಅನಿಮಲ್' ಗಲ್ಲಾಪೆಟ್ಟಿಗೆಯಲ್ಲಿ ಮೇಲುಗೈ ಸಾಧಿಸಿದೆ.
ಅನಿಮಲ್ ಬಾಕ್ಸ್ ಆಫೀಸ್ ಕಲೆಕ್ಷನ್:ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಅನಿಮಲ್ ಏಳನೇ ದಿನ 25.5 ಕೋಟಿ ರೂ. ಸಂಪಾದಿಸಿದೆ. ಈ ಮೂಲಕ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ 338.85 ಕೋಟಿ ರೂ. ಆಗಿದೆ. ಅನಿಮಲ್ ಮತ್ತು ಸ್ಯಾಮ್ ಬಹದ್ದೂರ್ ಸಿನಿಮಾ ಡಿಸೆಂಬರ್ 1ರಂದು ತೆರೆಕಂಡಿತು. ಮೊದಲ ದಿನ ಭಾರತದಲ್ಲಿ ಬರೋಬ್ಬರಿ 63.8 ಕೋಟಿ ರೂ. ಗಳಿಸುವ ಮೂಲಕ ಅಬ್ಬರಿಸಿತು. ವಾರಾಂತ್ಯ ಈ ಸಂಖ್ಯೆ ಹೆಚ್ಚಿತು. ಭಾನುವಾರದ 71.46 ಕೋಟಿ ರೂ.ಗಳಿಸುವಲ್ಲಿ ಅನಿಮಲ್ ಯಶಸ್ವಿಯಾಯಿತು.
ಜಾಗತಿಕಬಾಕ್ಸ್ ಆಫೀಸ್ ಕಲೆಕ್ಷನ್:ಜಾಗತಿಕ ಮಟ್ಟದಲ್ಲಿ ಅನಿಮಲ್ ಅಂಕಿ ಅಂಶ ಗಗನಕ್ಕೇರಿದೆ. ತೆರೆಕಂಡ ಮೊದಲ ಏಳು ದಿನಗಳಲ್ಲಿ ಬರೋಬ್ಬರಿ 527.6 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಬ್ಲಾಕ್ಬಸ್ಟರ್ ಗದರ್ 2 ದಾಖಲೆಗಳನ್ನು ಮೀರಿಸಿದ್ದು, ಸದ್ಯ ಪಠಾಣ್ ದಾಖಲೆ ಮೇಲೆ ಕಣ್ಣಿಟ್ಟಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಸಖತ್ ಸದ್ದು ಮಾಡಿದೆ.