ವಾಷಿಂಗ್ಟನ್: ನಟಿ ಏಂಜಲೀನಾ ಜೋಲಿ (Angelina Jolie) ಅವರು ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಜಿಲ್ ಬೈಡನ್ ಅವರೊಂದಿಗೆ ಬುಧವಾರ ಕಾಣಿಸಿಕೊಂಡರು. ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.
ವಿಶೇಷವಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ (Yoon Suk Yeol) ಮತ್ತು ಅವರ ಪತ್ನಿ ಕಿಮ್ ಕಿಯೋನ್ (Kim Keon) ಅವರಿಗಾಗಿ ಆಯೋಜಿಸಲಾಗಿದ್ದ ಭೂಜನ ಕೂಟದಲ್ಲಿ ನಟಿ ಏಂಜಲೀನಾ ಜೋಲಿ ಅವರು ಮಗ ಮ್ಯಾಡಾಕ್ಸ್ (21) ಜೊತೆ ಉಪಸ್ಥಿತರಿದ್ದರು ಎಂದು ಜನರು ವರದಿ ಮಾಡಿದ್ದಾರೆ.
''ಏಂಜಲೀನಾ ಅವರ ಕುಟುಂಬಕ್ಕೆ ಏಷ್ಯಾ ಅಮೆರಿಕ ಸಂಬಂಧಗಳು ಮುಖ್ಯವಾಗಿವೆ. ಅವರು ಮತ್ತು ಮಕ್ಕಳು ದಕ್ಷಿಣ ಕೊರಿಯಾ ಸೇರಿದಂತೆ, ಯುಎಸ್ ಪ್ರದೇಶದೊಂದಿಗೆ ಹಲವು ವರ್ಷಗಳಿಂದ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಮ್ಯಾಡಾಕ್ಸ್ ಸಿಯೋಲ್‌ನ ಯೋನ್ಸಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಏಂಜಲೀನಾ ಮಾನವೀಯ ದೃಷ್ಟಿಯಿಂದ ಹಲವು ಬಾರಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ನಿರಾಶ್ರಿತರಿಗೆ ಸೇವೆ ಸಲ್ಲಿಸಿರುವ ಏಂಜಲೀನಾ ಮತ್ತು ಮಗ ಮ್ಯಾಡಾಕ್ಸ್ ಈ ರಾಜ್ಯ ಭೋಜನಕ್ಕೆ ಹಾಜರಾಗಲು ಗೌರವಾನ್ವಿತರಾಗಿದ್ದಾರೆ" ಎಂದು ಮೂಲವೊಂದು ಪ್ರಕಟಣೆಗೆ ತಿಳಿಸಿದೆ.