ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಕೆಲ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚಿತ್ರರಂಗದಲ್ಲಿ ಸಖತ್ ಫೇಮಸ್ ಜೊತೆಗೆ ವೃತ್ತಿಪರ ಜೀವನದಲ್ಲಿ ಭಾರಿ ಬ್ಯುಸಿಯಾಗಿರುವ ಜೋಡಿ ಕೂಡ ಹೌದು. ನಟಿ ಆಲಿಯಾ ಭಟ್ ಡಾರ್ಲಿಂಗ್ಸ್ ಮತ್ತು ಬ್ರಹ್ಮಾಸ್ತ್ರ ಚಿತ್ರದ ಪ್ರೊಮೋಷನ್ ಕಾರ್ಯದಲ್ಲಿ ತೊಡಗಿದ್ದಾರೆ.
ನಟನೆ ಜೊತೆಗೆ ನಿರ್ಮಾಣ ಮಾಡಿರುವ ಡಾರ್ಲಿಂಗ್ಸ್ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ ಆಲಿಯಾ. ಶೆಫಾಲಿ ಶಾ ಮತ್ತು ವಿಜಯ್ ವರ್ಮಾ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿದೆ. ಸೆಪ್ಟೆಂಬರ್ 9ರಂದು ತೆರೆಕಾಣಲಿರುವ ಬ್ರಹ್ಮಾಸ್ತ್ರ ಚಿತ್ರಕ್ಕೂ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ ಆಲಿಯಾ. ಇದು ಪತಿ ರಣಬೀರ್ ಕಪೂರ್ ಜೊತೆಗಿನ ಮೊದಲ ಚಿತ್ರವಾಗಿದೆ.