ಮುಂಬೈ:ಮುದ್ದು ಮಗಳು ರಾಹಾಳಿಗೆ ಜನ್ಮ ನೀಡಿದ ಬಳಿಕ ಮತ್ತೆ ವೃತ್ತಿ ಜೀವನಕ್ಕೆ ಹೊರಳಿರುವ ನಟಿ ಆಲಿಯಾ ಭಟ್ ಇತ್ತಿಚೆಗೆ ವಿಶ್ವ ವಿಖ್ಯಾತ ಬ್ರಾಂಡ್ ಆಗಿರುವ ಗುಚ್ಚಿ ರಾಯಭಾರಿಯಾಗಿ ಜಪಾನ್ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಬ್ರಾಂಡ್ಗೆ ಭಾರತದ ಮೊದಲ ರಾಯಭಾರಿಯಾದವರು ಇವರಾಗಿದ್ದಾರೆ. ಇದೀಗ ಮೊದಲ ಬಾರಿಗೆ ಹಾಲಿವುಡ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಹಾರ್ಟ್ ಆಫ್ ಸ್ಟೋನ್ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಬ್ರೆಜಿಲ್ನ ಸಾಹೊ ಪೌಲೊದಲ್ಲಿ ನಡೆಯುತ್ತಿರುವ ನೆಟ್ಫ್ಲಿಕ್ಸ್ ಟುಡುಮ್ನಲ್ಲಿ ಭಾಗಿಯಾಗುವುದಾಗಿ ಅವರು ಖಚಿತಪಡಿಸಿದ್ದಾರೆ. ಗುರುವಾರ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋವನ್ನು ಹಾಕಿರುವ ಅವರು ಈ ಕುರಿತು ತಿಳಿಸಿದ್ದಾರೆ.
ಸಾಹೋ ಪೌಲೊಗೆ ತೆರಳುವು ಮುನ್ನ ಈ ಫೋಟೋಗಳನ್ನು ಕ್ಲಿಕಿಸಿದ್ದು, ಈ ಫೋಟೋ ಹಂಚಿಕೊಂಡಿರುವ ಅವರು, 'ಇಲ್ಲಿ ಯಾವುದೇ ಕಲ್ಲಿನ ಹೃದಯ ಇಲ್ಲ... ಕೇವಲ ಪ್ರೀತಿಯಿಂದ ತುಂಬಿದೆ... ನನ್ನ ಮಾರ್ಗ ಸಾಹೋ ಪೌಲೊ ಹತ್ತಿರ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇನ್ನು ಹಾರ್ಟ್ ಆಫ್ ಸ್ಟೋನ್ ಚಿತ್ರ ಸ್ಪೈ ಥ್ರಿಲ್ಲರ್ ಕಥೆ ಹೊಂದಿದ್ದು, ನೆಟ್ಫ್ಲಿಕ್ಸ್ ಮತ್ತು ಸ್ಕೃಡ್ಯಾನ್ಸ್ ಇದರ ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಆಲಿಯಾ ಜೊತೆಗೆ ಗಾಲ್ ಗಡೊಟ್ ಮತ್ತು ಜಿಮಿ ಡೊರ್ನನ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಮನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಕನ್ನಡಿ ಮುಂದೆ ನಿಂತು ಹೊಸ ಉಡುಪಿನಲ್ಲಿ ಫೋಸ್ ನೀಡಿರುವ ಅವರು, ತಮ್ಮ ಕೈಯಲ್ಲಿ ಹೃದಯದ ಚಿಹ್ನೆಯನ್ನು ತೋರಿಸಿದ್ದಾರೆ. ತಮ್ಮ ಡಿಂಪಲ್ ಜೊತೆಗೆ ಫೋಟೋದಲ್ಲಿ ಅದ್ಬುತವಾಗಿ ಆಕೆ ಕಂಡಿದ್ದಾರೆ. ಬಹು ಬಣ್ಣದ ಕಸೂತಿಯ ಕ್ರಾಪ್ ಟಾಕ್ ಜೊತೆಗೆ ನೀಲಿ ಬಣ್ಣದ ಡೆನಿಮ್ ಟ್ರಶರ್ನಲ್ಲಿ ಕಾಣಿಸಿಕೊಂಡಿದ್ದಾರೆ.