ಕರ್ನಾಟಕ

karnataka

ETV Bharat / entertainment

’ನಿನಗಾಗಿ‘ ಮ್ಯೂಸಿಕಲ್ ಆಲ್ಬಂಗೆ ಅಜಯ್ ರಾವ್ ಸಾಥ್ - Ninagagi musical album

'ಎ2 ಮ್ಯೂಸಿಕ್' ಸಂಸ್ಥೆಯ ನಿನಗಾಗಿ ಮ್ಯೂಸಿಕಲ್ ಆಲ್ಬಂಗೆ ನಟ ಅಜಯ್ ರಾವ್ ಸಾಥ್ ಕೊಟ್ಟಿದ್ದಾರೆ.

Ajay Rao supports Ninagagi musical album
ನಿನಗಾಗಿ ಮ್ಯೂಸಿಕಲ್ ಆಲ್ಬಂಗೆ ಅಜಯ್ ರಾವ್ ಸಾಥ್

By

Published : Jun 9, 2023, 10:14 AM IST

ಸಂಗೀತ ಪ್ರೇಮಿಗಳು ಸದಾ ಗುನುಗುವ, ನೆನಪಿನಲ್ಲಿಡುವ ಹಾಡುಗಳನ್ನು ಕೊಡುಗೆಯಾಗಿ ನೀಡಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದು 'ಎ2 ಮ್ಯೂಸಿಕ್'. ಜೋಗಿ, ಅಲೆಮಾರಿ, ಪ್ರೀತಿ ಏಕೆ ಭೂಮಿ ಮೇಲಿದೆ ಸೇರಿದಂತೆ ಹಲವು ಚಿತ್ರಗಳ ಮೂಲಕ ಸಂಚಲನ ಸೃಷ್ಟಿಸಿರುವ 'ಅಶ್ವಿನಿ ಮೀಡಿಯಾ ನೆಟ್​​ವರ್ಕ್​ ' 2020ರಲ್ಲಿ ಹೊಸ ಆಯಾಮದಲ್ಲಿ 'A2 ಮ್ಯೂಸಿಕ್' ಎಂದು ಮರು ನಾಮಕರಣಗೊಂಡಿತು. ಸಲಗ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟು ವಿಜಯೋತ್ಸವನ್ನು ಸಂಭ್ರಮಿಸಿತು.

ಬಳಿಕ A2 ಸಂಸ್ಥೆಯಿಂದ ಬಂದ ಹೆಚ್ಚಿನ ಹಾಡುಗಳು ಜನಮನ ತಲುಪಿ ಯಶಸ್ವಿ ಆಗಿದೆ. ನೂರಕ್ಕೂ ಹೆಚ್ಚು ಚಿತ್ರಗಳ ಆಡಿಯೋ ಖರೀದಿ ಮಾಡುವ ಮೂಲಕ ಸಂಚಲನ ಸೃಷ್ಟಿಸಿರುವ A2 ಮ್ಯೂಸಿಕ್, A2 originals, A2 entertainment, A2 ಭಕ್ತಿಸಾಗರ, A2 ಫ್ಲೋಕ್ಲೋರ್, A2 ಕ್ಲಾಸಿಕಲ್ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲೂ ಹೊರಹೊಮ್ಮಿದೆ.

ಇದೇ A2 ಒರಿಜಿನಲ್ಸ್ ಫ್ಲಾಟ್ ಫಾರ್ಮ್ ಮೂಲಕ ಮತ್ತೊಂದು ಸಾಹಸಕ್ಕಿಳಿದಿದೆ. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಮೂಲಕ 'ಮ್ಯೂಸಿಕಲ್ ಸೀರಿಸ್' ನಿರ್ಮಾಣಕ್ಕೂ ಕೈ ಹಾಕಿದೆ. ಈ ಪ್ರಯತ್ನಕ್ಕೆ ಕೃಷ್ಣ ಅಜಯ್ ರಾವ್ ಸಾಥ್ ನೀಡಿದ್ದಾರೆ. ‌ನಾಲ್ಕು ಭಾಷೆಯಲ್ಲಿ, ನಾಲ್ಕು ಚಾಪ್ಟರ್​ಗಳಲ್ಲಿ ಬರುತ್ತಿರುವ ಭಾರತದ ಪ್ರಪ್ರಥಮ ನಾನ್ ಫಿಲ್ಮ್ ಪ್ಯಾನ್ ಇಂಡಿಯಾ 'ನಿನಗಾಗಿ ಆಲ್ಬಂ' ಇದಾಗಿದೆ. ಎ2 ಮ್ಯೂಸಿಕ್ ಡಿಜಿಟಲ್ ವೇದಿಕೆಯಲ್ಲಿ ನಾಲ್ಕು ಹಂತಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಹಾಡನ್ನು ನಟ ಅಜಯ್ ರಾವ್ ಅನಾವರಣಗೊಳಿಸಿ ನಾಯಕಿಯೊಂದಿಗೆ ಹೆಜ್ಜೆ ಹಾಕಿದರು.

ನಟ ಅಜಯ್ ರಾವ್ ಮಾಥಣಾಢೀ, ಎಕ್ಸ್ ಕ್ಯೂಸ್ ಮಿ ಸಿನಿಮಾದಿಂದಲೇ ನನ್ನ ಎ2 ಮ್ಯೂಸಿಕ್ ಸಂಸ್ಥೆಯ ಒಡನಾಟವಿದೆ. ಆ ಅಭಿಮಾನ, ಪ್ರೀತಿ ಅಲ್ಲಿಂದಲೇ ಬೆಳವಣಿಗೆ ಆಗಿದೆ. ’ಎಕ್ಸ್ ಕ್ಯೂಸ್ ಮಿ‌‘ ಸಮಯದಲ್ಲಿ ನಾನು ಹೊಸಬ. ನನಗೂ ಯಾರು ಪರಿಚಯ ಇರಲಿಲ್ಲ. ಯಾರೋ ಒಬ್ಬರು ಅವಕಾಶ ಕೊಟ್ಟರು. ಇಂದು ಈ ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ನಾನು ಸಾಥ್ ಕೊಟ್ಟಿದ್ದೇನೆ. ಆರ್ಟಿಸ್ಟ್ ಪ್ರಸೆಂಟ್ ಮಾಡಿರುವ ರೀತಿ ಬಹಳ ಚೆನ್ನಾಗಿದೆ. ನನ್ನ ಹೊಸ ಯುದ್ಧಕಾಂಡ ಸಿನಿಮಾದ ಆಡಿಯೋವನ್ನು ಎ2 ಮ್ಯೂಸಿಕ್ ಭಾರೀ ಮೊತ್ತಕ್ಕೆ ಖರೀದಿಸಿದೆ ಎಂದು ಸಹ ತಿಳಿಸಿದರು.

ನಿರ್ದೇಶಕ ಅಕ್ಷ್​​ ಮತನಾಡಿ, ಇದೊಂದು ಮ್ಯೂಸಿಕಲ್ ಸೀರಿಸ್.‌ ಕನ್ನಡದಲ್ಲಿ ನಿನಗಾಗಿ ಎಂಬ ಟೈಟಲ್ ಅಡಿ ರಿಲೀಸ್ ಆಗಿದೆ. ಬೇರೆ ಭಾಷೆಯಲ್ಲಿಯೂ ಹಾಡುಗಳು ಬರುತ್ತಿದೆ. ಕನ್ನಡ ವರ್ಷನ್ ಆಲ್ಬಂ ಅನ್ನು ಲಾಕ್ ಡೌನ್​ಗೂ‌ ಮೊದಲು ಶುರು ಮಾಡಿದ್ದೆವು. ನಾನು ಮತ್ತು ಟಾರ್ಕ್ ಕಾಲೇಜ್ ದಿನಗಳಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೆವು. ಇಷ್ಡು ದೊಡ್ಡ ಪ್ರಮಾಣದಲ್ಲಿ ಆಗುತ್ತದೆ ಅಂದುಕೊಂಡಿರಲಿಲ್ಲ. ಒಂದು ವರ್ಷ ಆದ ಬಳಿಕ ನಾಲ್ಕು ಹಾಡುಗಳನ್ನು ಒಂದು ಕಥೆಯಲ್ಲಿ ನರೇಟ್ ಮಾಡಬೇಕು ಎಂಬ ಐಡಿಯಾ ಬಂತು ಎಂದು ತಿಳಿಸಿದರು.

ಇದನ್ನೂ ಓದಿ:Photos: ಪ್ರಕೃತಿ ನಡುವೆ ತನ್ನ ಸೌಂದರ್ಯ ಸಿರಿ ಪ್ರದರ್ಶಿಸಿದ ಜಾನ್ವಿ ಕಪೂರ್

ನಿನಗಾಗಿ ಆಲ್ಬಂ ಸೀರಿಸ್​ಗೆ ಸಂಗೀತ ನಿರ್ದೇಶನ ಜೊತೆಗೆ ಪದಪುಂಜ ಪೊಣಿಸಿರುವುದು ಯುವ ಪ್ರತಿಭೆ ಟಾರ್ಕ್( ಆದರ್ಶ್). ಅಕ್ಷ್ ನಿರ್ದೇಶನದ ಜೊತೆಗೆ ಹಾಡಿಗೆ ದನಿಯಾಗಿದ್ದಾರೆ. ನಿರೀಕ್ಷಿತ್ ಹಾಗೂ ಯಾನ್ವಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಆಲ್ಬಂ ಕನ್ನಡದಲ್ಲಿ ವಿಭಿನ್ನ, ಹೊಸ ಪ್ರಯತ್ನ ಆಗಿದೆ. ಚಿಕ್ಕಮಗಳೂರು, ಹಾಸನ್, ಸಕಲೇಶಪುರ ಸುತ್ತಮುತ್ತಲಿನ ರಮಣೀಯ ಪ್ರದೇಶದಲ್ಲಿ ಈ ಆಲ್ಬಂನ ಚಿತ್ರೀಕರಣ ಮಾಡಲಾಗಿದೆ. ಶಶಾಂಕ್ ಜಂಗಮ್, ವಿಕ್ಕಿ ಮತ್ತು ದೀಪು ನಾರಾಯಣ್ ಕ್ಯಾಮರಾ ವರ್ಕ್ ಇದೆ. ಮುಂಬರುವ ದಿನಗಳಲ್ಲಿ ಇಂಥ ಹೊಸ ಪ್ರಯತ್ನಗಳಿಗೆ ಈ ಎ2 ಒರಿಜಿನಲ್ಸ್ ಮುಂದಾಗಲಿದೆ ಎಂದರು. A2 ಮ್ಯೂಸಿಕ್ ಸಂಸ್ಥೆಯ ಪ್ರವೀಣ್ ಮಾತನಾಡಿ, ಕಾನ್ಸೆಪ್ಟ್ ಬಹಳ ಚೆನ್ನಾಗಿದೆ ಎಂದು‌ ಮಾಡಿದ್ದೇವೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದೇವೆ‌ ಎಂದು ತಿಳಿಸಿದರು.

ABOUT THE AUTHOR

...view details