ಹೈದರಾಬಾದ್(ತೆಲಂಗಾಣ):ಬಾಲಿವುಡ್ ನಟ ಅಜಯ್ ದೇವಗನ್ ಅವರ 52ನೇ ಹುಟ್ಟುಹಬ್ಬದ ಸಲುವಾಗಿ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಟಾಲಿವುಡ್ ಚಿತ್ರ ಆರ್ಆರ್ಆರ್ದಲ್ಲಿ ಅಜಯ್ ದೇವಗನ್ ಪಾತ್ರದ ಫಸ್ಟ್ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ.
ಆರ್ಆರ್ಆರ್ ಸಿನಿಮಾದಲ್ಲಿ ಅಜಯ್ ದೇವಗನ್ ಅವರ ಹೆಸರನ್ನು ಬಹಿರಂಗಪಡಿಸದೇ 'ಲೋಡ್.. ಏಮ್.. ಶೂಟ್..' ಅವನ ಜನರನ್ನು ಬಲಿಷ್ಟಗೊಳಿಸುವುದರಿಂದ ಅವನು ಶಕ್ತಿಯನ್ನು ಪಡೆಯುತ್ತಾನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ದ್ರಾವಿಡ ನೆಲದಲ್ಲಿ ಜಲ್ಲಿಕಟ್ಟು ಉಲ್ಲೇಖಿಸಿ ಪ್ರಧಾನಿ ಮೋದಿ ಮತಬೇಟೆ
ಈ ಟ್ವಿಟರ್ ಪೋಸ್ಟ್ ಅನ್ನು ಜೂನಿಯರ್ ಎನ್ಟಿಆರ್, ರಾಮಚರಣ್, ಅಲಿಯಾ ಭಟ್, ಒವಿಲಿಯಾಗೆ ಟ್ಯಾಗ್ ಮಾಡಿದ್ದಾರೆ.
ಆರ್ಆರ್ಆರ್ ಸಿನಿಮಾ ಬಗ್ಗೆ..
ಆರ್ಆರ್ಆರ್ ಸಿನಿಮಾ ಸ್ವಾತಂತ್ರ್ಯ ಪೂರ್ವದಲ್ಲಿ ಅಂದ್ರೆ 1920ರ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್ ಜೀವನ ಚರಿತ್ರೆಯನ್ನು ಆಧರಿಸಿದೆ.
ಡಿವಿವಿ ದಾನಯ್ಯ ಅವರು ನಿರ್ಮಾಪಕರಾಗಿದ್ದು, ಡಿವಿವಿ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ:ಸಲಗ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಗಲಿ.. ಸಿದ್ಧಗಂಗಾ ಶ್ರೀಗಳಿಂದ ಹಾರೈಕೆ
2020ರ ಜುಲೈನಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಲು ಯೋಜಿಸಲಾಗಿತ್ತಾದರೂ, ನಟ ಜೂನಿಯರ್ ಎನ್ಟಿಆರ್ ಮತ್ತು ರಾಮಚರಣ್ಗೆ ಚಿತ್ರೀಕರಣದ ವೇಳೆ ಆದ ಗಾಯಗಳ ಕಾರಣದಿಂದಾಗಿ ಮತ್ತು ಕೊರೊನಾ ಮತ್ತಿತರ ಕಾರಣದಿಂದಾಗಿ ಚಿತ್ರದ ಬಿಡುಗಡೆ ಮುಂದೂಡಲಾಗಿದೆ.
ಈ ವರ್ಷದ ಅಕ್ಟೋಬರ್ 13ರಂದು ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದ್ದು, ವಿವಿಧ ಭಾಷೆಗಳಲ್ಲಿ ಆರ್ಆರ್ಆರ್ ತೆರೆಗೆ ಅಪ್ಪಳಿಸಲಿದೆ.