ಕರ್ನಾಟಕ

karnataka

ETV Bharat / entertainment

'ಪ್ಯಾರ್ ತೋ ಹೋನಾ ಹಿ ಥಾ, ಪ್ಯಾರ್ ತೋ ಹೈ': ಕಾಜೋಲ್‌ - ಅಜಯ್ 24ನೇ ವಿವಾಹ ವಾರ್ಷಿಕೋತ್ಸವ - ಕಾಜೋಲ್‌ ಅಜಯ್ ಫೋಟೋ

ಬಾಲಿವುಡ್​ ನಟಿ ಕಾಜೋಲ್‌ ಹಾಗೂ ನಟ ಅಜಯ್ ದೇವ್​​ಗನ್ 24ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

Ajay Devgn Kajol wedding Anniversary
ಕಾಜೋಲ್‌ ಅಜಯ್ ವಿವಾಹ ವಾರ್ಷಿಕೋತ್ಸವ

By

Published : Feb 24, 2023, 2:15 PM IST

ಹಿಂದಿ ಚಿತ್ರರಂಗದ ತಾರಾ​ ದಂಪತಿಯಾದ ಕಾಜೋಲ್‌ ಹಾಗೂ ಅಜಯ್ ದೇವ್​​ಗನ್ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಪ್ರೀತಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ 24 ವರ್ಷಗಳು ಸಂದಿವೆ. ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಈ ಜೋಡಿಗೆ ಕುಟುಂಬಸ್ಥರು, ಆಪ್ತರು, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಈ ವಿಶೇಷ ದಿನದಂದು ಪರಸ್ಪರ ಶುಭ ಕೋರಿಕೊಳ್ಳಲು ನಟ ಅಜಯ್ ದೇವ್​​ಗನ್ ಮತ್ತು ನಟಿ ಕಾಜೋಲ್ ಪ್ರೀತಿಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪರಸ್ಪರ ತಮ್ಮ 24ನೇ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಉತ್ತಮ ಕೆಮಿಸ್ಟ್ರಿ ಹಿನ್ನೆಲೆ ಈ ತಾರಾ ದಂಪತಿ ತೆರೆ ಮೇಲೆ ಮತ್ತು ಆಫ್ ಸ್ಕ್ರೀನ್​​ನಲ್ಲಿಯೂ ಸಖತ್​ ಫೇಮಸ್​ ಆಗಿದ್ದಾರೆ. ಲವ್​ ಬರ್ಡ್ಸ್​​ಗಳಾಗಿ ಅಭಿಮಾನಿಗಳ, ಯುವ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಅಜಯ್​ ದೇವ್​ಗನ್​​ ಮತ್ತು ಕಾಜೋಲ್​​ ಮದುವೆಯಾಗಿ 24 ವರ್ಷಗಳಾಗಿದ್ದು, ಸುಮಾರು 9 ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

ನಟಿ ಕಾಜೋಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೃತ್ಪೂರ್ವಕ ಸಂದೇಶವನ್ನು ಹಂಚಿಕೊಂಡಿದ್ದಾರೆ ಮತ್ತು ನಟ ಅಜಯ್ ದೇವಗನ್ ಅವರು ಸಂದರ್ಶನದ ಕ್ಲಿಪ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಬಳಿಕ ಅಭಿಮಾನಿಗಳು ಜೋಡಿಗೆ ಶುಭ ಹಾರೈಸಲು ಆರಂಭಿಸಿದ್ದಾರೆ. "ಓಡುತ್ತಾ, ನಡೆಯುತ್ತಾ, ಕುಂಟುತ್ತಾ, ಒದೆಯುತ್ತಾ, ಕಿರುಚುತ್ತಾ ನಾವು 24 ವರ್ಷಗಳ ನಂತರ ಇಲ್ಲಿದ್ದೇವೆ. ನಾವು ಪದಕಕ್ಕೆ ಅರ್ಹರೇ ಅಥವಾ ವಿಸ್ಮಯಕ್ಕೆ ಅರ್ಹರೇ? ಎಂದು ಕಾಜೋಲ್​ ಬರೆದುಕೊಂಡಿದ್ದಾರೆ.

ಅಜಯ್ ದೇವಗನ್ ಅವರು 4 ಸೆಕೆಂಡುಗಳ ಸಂದರ್ಶನದ ಕ್ಲಿಪ್ ಒಂದನ್ನು ಪೋಸ್ಟ್ ಮಾಡಿದ್ದಾರೆ. "ಅವರು (ಕಾಜೋಲ್​) ಇನ್ನೂ ನನ್ನೊಂದಿಗೆ ಇದ್ದಾರೆ ಎಂದರೆ ನನಗೆ ಆಶ್ಚರ್ಯವಾಗಿದೆ" ಮತ್ತು 'ಕಾಜೋಲ್ ವಿಸ್ಮಯ' ಎಂದು ಆ ವಿಡಿಯೋದಲ್ಲಿ ನಟ ಅಜಯ್​ ಹೇಳಿದ್ದಾರೆ. ಜೊತೆಗೆ, "1999 - ಪ್ಯಾರ್ ತೋ ಹೋನಾ ಹಿ ಥಾ 2022 - ಪ್ಯಾರ್ ತೋ ಹಮೇಶಾ ಹೈ! ( ಪ್ರೀತಿ ಆಗಬೇಕಿತ್ತು, ಪ್ರೀತಿ ಎಂದೆಂದಿಗೂ ಇರುತ್ತದೆ ಎಂದು ಅರ್ಥ. ಪ್ಯಾರ್ ತೋ ಹೋನಾ ಹಿ ಥಾ ಈ ಜೋಡಿ ಒಟ್ಟಾಗಿ ನಟಿಸಿರುವ ಸಿನಿಮಾ ಕೂಡ ಹೌದು) ವಾರ್ಷಿಕೋತ್ಸವದ ಶುಭಾಶಯಗಳು ಕಾಜೋಲ್'' ಎಂದು ಬರೆದು ಹೃದಯದ ಇಮೋಜಿ ಹಾಕಿಕೊಂಡಿದ್ದಾರೆ.

ಪತ್ನಿಗೆ ಉತ್ತಮ ಸಂದೇಶದ ಪೋಸ್ಟ್ ಹಾಕುವುದರ ಜೊತೆಗೆ ಅಜಯ್ ದೇವಗನ್ ಫನ್ನಿ ವಿಡಿಯೋವೊಂದನ್ನೂ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಕಾಫಿ ವಿತ್ ಕರಣ್‌ ಸೆಲೆಬ್ರಿಟಿ ಚಾಟ್ ಶೋನಲ್ಲಿ ನಿರೂಪಕ ಕರಣ್​ ಜೋಹರ್​ ಅವರು, ಅಜಯ್​ ಅವರಲ್ಲಿ ನಿಮ್ಮ ಮದುವೆಯ ವಾರ್ಷಿಕೋತ್ಸವ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟ ಬೇಕಂತಲೇ ತಪ್ಪು ಉತ್ತರ ನೀಡಿದ್ದಾರೆ. ಇದಕ್ಕೆ ಕಾಜೋಲ್ ಅವರ ಪ್ರತಿಕ್ರಿಯೆ ಬಹಳ ವಿಭಿನ್ನವಾಗಿತ್ತು. ಈ ದಿನವನ್ನು ಹೇಗೆ ಮರೆಯಲು ಸಾಧ್ಯ ಎಂದು ಕಾಜೋಲ್​​ ತಮ್ಮ ಕಣ್ಣುಗಳನ್ನು ಕೆಂಪು ಮಾಡಿದರು. ಈ ವಿಡಿಯೋ ಹಂಚಿಕೊಂಡಿರುವ ನಟ ಅಜಯ್​​, ರಿಮೈಂಡರ್​ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಇದನ್ನೂ ಓದಿ:ಶ್ರೀದೇವಿ 5ನೇ ವರ್ಷದ ಪುಣ್ಯತಿಥಿ: ಮರೆಯಲಾದಿತೇ ಲೇಡಿ ಸೂಪರ್​ಸ್ಟಾರ್​ ಸಿನಿಗಾಥೆ!

ಅಜಯ್ ದೇವಗನ್ ಅವರು ತಾನ್ಹಾಜಿ, ಇಷ್ಕ್, ಪ್ಯಾರ್ ತೋ ಹೋನಾ ಹಿ ಥಾ, ದಿಲ್ ಕ್ಯಾ ರೇ, ಗುಂಡರಾಜ್, ರಾಜು ಚಾಚಾ, ತೂನ್‌ಪುರ್ ಸೂಪರ್‌ಹೀರೋ, ಯು ಮಿ ಔರ್ ಹಮ್, ಹುಲ್ಚುಲ್ ಚಿತ್ರಗಳಲ್ಲಿ ಕಾಜೋಲ್ ಜೊತೆ ನಟಿಸಿದ್ದಾರೆ. 'ಪ್ಯಾರ್ ತೋ ಹೋನಾ ಹಿ ಥಾ' - ಇದು 1999ರಲ್ಲಿ ತೆರೆಕಂಡ ಸಿನಿಮಾ. ಈ ಚಿತ್ರದಲ್ಲಿ ಕಾಜೋಲ್​ ಹಾಗೂ ಅಜಯ್​ ರೊಮ್ಯಾನ್ಸ್​ ಮಾಡಿದ್ದರು. ಅಷ್ಟರಲ್ಲಾಗಲೇ ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಅವರು ಅದೇ ವರ್ಷ ಮದುವೆ ಆದರು.

ABOUT THE AUTHOR

...view details