ಹೈದರಾಬಾದ್: ಹಿಂದಿ ಚಿತ್ರೋದ್ಯಮದಲ್ಲಿನ ಬೆಸ್ಟ್ ಫ್ರೆಂಡ್ ಜೋಡಿಗಳಲ್ಲಿ ಒಂದಾಗಿರುವ ನಟ ಅಜಯ್ ದೇವಗನ್ ಮತ್ತು ಟಬು ನಟನೆಯ ರೋಮ್ಯಾಂಟಿಕ್ ಚಿತ್ರ 'ಔರೊ ಮೇ ಕಹಾ ದಮ್ ತಾ' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಚಿತ್ರದ ಹೊಸ ಅಪ್ಡೇಟ್ ಕುರಿತು ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿರಜ್ ಪಾಂಡೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಮುಂದಿನ ವರ್ಷ ಏಪ್ರಿಲ್ಗೆ ಬಿಡುಗಡೆಯಾಗಲಿದೆ. ನಿರಜ್ ಪಾಂಡೆ ಈ ಹಿಂದಿನ ಸಿನಿಮಾಗಳಾದ 'ಎ ವೆಡ್ನೆಸ್ಡೇ', 'ಸ್ಪೆಷನ್ 26' ಮತ್ತು 'ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದವು. ಇದೀಗ ಈ ಸಿನಿಮಾ ಬಗ್ಗೆ ಕೂಡ ಹೆಚ್ಚಿನ ನಿರೀಕ್ಷೆ ಇದೆ.
ಇನ್ನು ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ನಿರ್ದೇಶಕರ ಜೊತೆಗೆ ನಟ ಅಜಯ್ ದೇವಗನ್ ಕೂಡ ಹಂಚಿಕೊಂಡಿದ್ದಾರೆ. ನಿರಜ್ ಪಾಂಡೆ ಜೊತೆಗಿನ ಸಹಯೋಗದಲ್ಲಿ ಮೂಡಿ ಬರುತ್ತಿರುವ 'ಔರೊ ಮೇ ಕಹಾ ಧಮ್ ತಾ' ಚಿತ್ರ ಏಪ್ರಿಲ್ 26ರಂದು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
'ಔರೊ ಮೇ ಕಹಾ ಧಮ್ ತಾ' ಚಿತ್ರದಲ್ಲಿ ಟಬು ಮತ್ತು ಜಿಮ್ಮಿ ಶೆರ್ಗಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರವು ಒಂದು ಮ್ಯೂಸಿಕಲ್ ಲವ್ ಸ್ಟೋರಿ ಆಗಿದ್ದು, 2002 ಮತ್ತು 2023 ನಡುವಿನ ರೋಮ್ಯಾಟಿಕ್ ಡ್ರಾಮಾ ಆಗಿದೆ. ಹಿಂದಿ ಜೊತೆಗೆ ಬಹು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಎಂ ಎಂ ಕ್ರೀಮ್ ಸಂಗೀತ ನಿರ್ದೇಶ ಮಾಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಎಂದರೆ, ಸಿನಿಮಾದಲ್ಲಿ ಸಾಯಿ ಮಂಜ್ರೇಕರ್ ಮತ್ತು ಶಾಂತನೂ ಮಹೇಶ್ವರಿ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.