ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಮುಂಬರುವ ಬಹುನಿರೀಕ್ಷಿತ 'ಜವಾನ್' ಸಿನಿಮಾದ ಪ್ರಿವ್ಯೂ ಇತ್ತೀಚೆಗಷ್ಟೇ ಅನಾವರಣಗೊಂಡು ಟ್ರೆಂಡಿಂಗ್ನಲ್ಲಿದೆ. ಆ್ಯಕ್ಷನ್ ದೃಶ್ಯಗಳು ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಪೋಸ್ಟರ್, ಪ್ರಿವ್ಯೂನಲ್ಲಿ ಸೆಲೆಬ್ರಿಟಿಗಳ ನೋಟಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಒಂದಾದ ಮೇಲೊಂದರಂತೆ ಪೋಸ್ಟರ್ಗಳು ಅನಾವರಣಗೊಳ್ಳುತ್ತಿದ್ದು, ಜವಾನ್ ಸುತ್ತಲಿನ ಪ್ರೇಕ್ಷಕರ ಉತ್ಸಾಹವು ಹೆಚ್ಚುತ್ತಲೇ ಇದೆ. ಸದ್ಯ ಸಿನಿ ಪ್ರಿಯರ ಗಮನ ಚಿತ್ರದ ಹಾಡುಗಳ ಮೇಲಿದ್ದು, ಶೀಘ್ರವೇ ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ.
ಜಿಂದಾ ಬಂದಾ.. ಜವಾನ್ ಸಿನಿಮಾದ ಮೊದಲ ಸಾಂಗ್ ಅನ್ನು ಅನಾವರಣಗೊಳಿಸಲು ಚಿತ್ರತಯಾರಕರು ಸಿದ್ಧರಾಗಿದ್ದಾರೆ ಎಂದು ವರದಿಗಳು ಹೇಳಿವೆ. ವರದಿ ಪ್ರಕಾರ, ಜಿಂದಾ ಬಂದಾ (Zinda Banda) ಶೀರ್ಷಿಕೆಯ ಹಾಡಿದು. ಸಿನಿಮಾದಲ್ಲಿ ಇದು ಅತ್ಯಂತ ಆಕರ್ಷಕ ಹಾಡು. ಈ ಹಾಡಿನಲ್ಲಿ ಶಾರುಖ್ ಖಾನ್ ಹೆಜ್ಜೆ ಹಾಕಿದ್ದು, ದೊಡ್ಡ ಮಟ್ಟದಲ್ಲಿ ಚಿತ್ರೀಕರಿಸಲಾಗಿದೆ.
ಅನಿರುಧ್ ರವಿಚಂದರ್ ಅವರ ಚೊಚ್ಚಲ ಹಿಂದಿ ಸಾಂಗ್.. ಚಿತ್ರದ ಹಾಡುಗಳ ದೃಶ್ಯಗಳು ನೋಡುಗರನ್ನು ಬೆರಗುಗೊಳಿಸಲಿವೆ ಎಂದು ಚಿತ್ರ ತಯಾರಕರು ವಿಸ್ವಾಸ ವ್ಯಕ್ತಪಡಿಸಿದ್ದಾರೆ. ಖ್ಯಾತ ಸಂಗೀತ ಸಂಯೋಜಕ ಅನಿರುಧ್ ರವಿಚಂದರ್ ಅವರು ಉತ್ತಮ ಟ್ಯೂನ್ ಹಾಕಿರುವುದರಿಂದ ಜಿಂದಾ ಬಂದಾ ಆಡಿಯೋ ಜನಪ್ರಿಯವಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. 'ಜವಾನ್' ಸಿನಿಮಾ ಸಾಂಗ್ ಅನಿರುಧ್ ರವಿಚಂದರ್ ಅವರ ಚೊಚ್ಚಲ ಆಲ್ಬಂ.