ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಅತ್ಯಂತ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' ಸೀಸನ್ 8ರ ಎಂಟನೇ ಸಂಚಿಕೆಯಲ್ಲಿ ಬಾಲಿವುಡ್ ನಟರಾದ ಆದಿತ್ಯ ರಾಯ್ ಕಪೂರ್ ಮತ್ತು ಅರ್ಜುನ್ ಕಪೂರ್ ಕಾಣಿಸಿಕೊಂಡರು. ಇಬ್ಬರೂ ಚಾಟ್ ಶೋನಲ್ಲಿ ಗಾಸಿಪ್ ಆಗುವಂತಹ ಯಾವುದೇ ವಿಚಾರಗಳನ್ನು ಹಂಚಿಕೊಳ್ಳಲಿಲ್ಲ. ಅದಾಗ್ಯೂ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವೊಂದು ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದರು.
ನಟಿ ಅನನ್ಯಾ ಪಾಂಡೆ ಜೊತೆಗಿನ ವದಂತಿ ಬಗ್ಗೆ ಪ್ರಶ್ನಿಸಿದಾಗ ಆದಿತ್ಯ ರಾಯ್ ಕಪೂರ್ ನಾಚಿಕೆಯಿಂದ ವರ್ತಿಸಿದರು. ಅವರು ತಮ್ಮಿಬ್ಬರ ಸಂಬಂಧವನ್ನು ದೃಢೀಕರಿಸದೇ ಇದ್ದರೂ, ಅನನ್ಯಾ ಪಾಂಡೆ ಬಗ್ಗೆ ಹೆಚ್ಚು ಮಾತನಾಡಿದ್ದಾರೆ. ಕರಣ್ ಅವರು ಆದಿತ್ಯ ಜೊತೆ, 'ನೀವು ಅನನ್ಯಾ ಪಾಂಡೆ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಎಂದು ವದಂತಿಗಳಿವೆ. ಇದು ನಿಜವೇ?' ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಟ, 'ಕರಣ್, ನೀವು ಈ ಶೋನಲ್ಲಿ, ನನ್ನನ್ನು ಯಾವುದೇ ರಹಸ್ಯಗಳನ್ನು ಕೇಳಬೇಡಿ. ನಾನು ನಿಮಗೆ ಸುಳ್ಳು ಹೇಳುವುದಿಲ್ಲ ಎಂದು ಹೇಳಿದ್ದೀರಿ. ನನಗೆ ಅದು ನೆನಪಿದೆ' ಎಂದು ಹೇಳಿದರು.
ಬಳಿಕ ಕರಣ್ ಅವರು ನಟನಿಗೆ, ತಮ್ಮ ಶೋನಲ್ಲಿ ಅನನ್ಯಾ ಅವರು 'ಅನನ್ಯಾ ಕಾಯ್ ಕಪೂರ್' ಎಂದು ಭಾವಿಸಿರುವುದಾಗಿ ವಿವರಿಸಿದರು. ಅದಕ್ಕೆ ಉತ್ತರವಾಗಿ ಆದಿತ್ಯ, 'ನಾನು ಸದ್ಯಕ್ಕೆ ಆದಿತ್ಯ ಜಾಯ್ ಕಪೂರ್' ಎಂದು ಹೇಳಿದರು. ನಂತರ ಕರಣ್, 'ನೀವು ಒಂದು ಸನ್ನಿವೇಶದಲ್ಲಿ ಸಂತೋಷದಿಂದ ಇದ್ದೀರಾ?' ಎಂದು ಪ್ರಶ್ನಿಸಿದರು. ಇದಕ್ಕೆ ಆದಿತ್ಯ, 'ನಾನು ತುಂಬಾ ಸಂತೋಷವಾಗಿದ್ದೇನೆ' ಎಂದು ಉತ್ತರಿಸಿದರು. ನಟ ಅನನ್ಯಾ ಪಾಂಡೆ ಅವರನ್ನು 'ಆನಂದ' ಮತ್ತು 'ಶುದ್ಧ ಸಂತೋಷ' ಎಂದು ಉಲ್ಲೇಖಿಸಿದರು.