ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಆದಿಪುರುಷ್ ಚಿತ್ರದ ಡೈಲಾಗ್‌ಗಳು ಟೀಕೆಗೊಳಗಾಗಿ, ವಿವಾದವನ್ನು ಹುಟ್ಟುಹಾಕಿದೆ. ಸಂಭಾಷಣೆ ವೇಳೆ ಬಳಸಿರುವ ಭಾಷೆಗೆ "ಟಪೋರಿ" ಭಾಷೆ ಎಂದು ಕರೆಯಲಾಗಿದೆ. ಚಿತ್ರದಲ್ಲಿ ಕೆಲ ಸ್ಥಳೀಯ ಪದಗಳನ್ನು ಬಳಸಿರುವುದನ್ನು ನಿರ್ಮಾಪಕರು ಮೊದಲು ಸಮರ್ಥಿಸಿಕೊಂಡರು. ಭಾರಿ ಟೀಕೆಯ ನಂತರ, ಅವರು ಚಿತ್ರದಲ್ಲಿ ಭಗವಾನ್ ಹನುಮಾನ್ ಪಾತ್ರವನ್ನು ನಿರ್ವಹಿಸುವ ನಟನಿಂದ ಬಂದ ಡೈಲಾಗ್ಗಳನ್ನು ಸರಿಪಡಿಸುವ ಭರವಸೆ ನೀಡಿದರು. ಕೊಟ್ಟ ಮಾತಿನಂತೆ ಇದೀಗ ಆದಿಪುರುಷ್ ಚಿತ್ರದ ವಿವಾದಾತ್ಮಕ ಡೈಲಾಗ್ಗಳನ್ನು ಬದಲಾಯಿಸಲಾಗಿದೆ.
ಲಂಕಾ ದಹನ ದೃಶ್ಯದ ಡೈಲಾಗ್‌ಗಳು: ಆದಿಪುರುಷ್ ಸಿನಿಮಾದ ಲಂಕಾ ದಹನ ದೃಶ್ಯದಲ್ಲಿ ನಟ ದೇವದತ್ತ ನಾಗೆ (Devdatta Nage, ಹನುಮಾನ್ ಪಾತ್ರ) ಅವರ ಸಂಭಾಷಣೆ ವಿವಾದಕ್ಕೊಳಗಾಯಿತು. ಹಲವರು ಭಗವಾನ್ ಬಾಯಲ್ಲಿ ಇಂತಹ ಡೈಲಾಗ್ಸ್ ಸರಿಯಲ್ಲವೆಂದು ಅಸಮಾಧಾನ ಹೊರಹಾಕಿದ್ದರು.
ಬದಲಾದ ಡೈಲಾಗ್‌ಗಳು: ಲಂಕಾ ದಹನ ದೃಶ್ಯದ ಮೊದಲಿನ ಡೈಲಾಗ್‌ಗಳು ಹೀಗಿದ್ದವು: "ಕಪ್ಡಾ ತೇರೆ ಬಾಪ್ ಕಾ, ತೇಲ್ ತೇರೆ ಬಾಪ್ ಕಾ, ಆಗ್ ಭಿ ತೇರೆ ಬಾಪ್ ಕಿ, ಔರ್ ಜಲೇಗಿ ಭಿ ತೇರೆ ಬಾಪ್ ಕಿ" (ಬಟ್ಟೆ ನಿನ್ನ ಅಪ್ಪನದ್ದು, ಎಣ್ಣೆ ನಿನ್ನ ಅಪ್ಪನದ್ದು, ಬೆಂಕಿ ನಿನ್ನ ಅಪ್ಪನದ್ದು ಮತ್ತು ಸುಟ್ಟೋಗುವುದು ನಿನ್ನ ಅಪ್ಪನದ್ದೇ). ಇದೀಗ ಈ ಡೈಲಾಗ್ಸ್ ಬದಲಾಯಿಸಲಾಗಿದ್ದು, "ಬಾಪ್" ಪದದಿಂದ "ಲಂಕಾ" ಎಂದು ಬಳಸಲಾಗಿದೆ. ವೀಕ್ಷಕರೊಬ್ಬರು ಟ್ವಿಟ್ಟರ್‌ನಲ್ಲಿ ಬದಲಾಯಿಸಿರುವ ಡೈಲಾಗ್ಸ್ನ ವಿಡಿಯೋವನ್ನು (ಥಿಯೇಟರ್ ಸೀನ್) ಹಂಚಿಕೊಂಡಿದ್ದಾರೆ. ಅದರಲ್ಲಿ "ಕಪ್ಡಾ ತೇರಿ ಲಂಕಾ ಕಾ, ತೇಲ್ ತೇರಿ ಲಂಕಾ ಕಾ, ಆಗ್ ಭಿ ತೇರಿ ಲಂಕಾ ಕಿ, ಔರ್ ಜಲೇಗಿ ಭಿ ತೇರಿ ಲಂಕಾ ಹಿ" ಎಂಬ ಡೈಲಾಗ್ಸ್ಗಳಿವೆ.