ಕಟಕ್(ಒಡಿಶಾ): ಬಿಜೆಡಿ ಸಂಸದ, ನಟ ಅನುಭವ್ ಮೊಹಾಂತಿ ಅವರ ಸಿಬ್ಬಂದಿಯನ್ನು ಜಾತಿ ವಿಚಾರವಾಗಿ ನಿಂದಿಸಿದ್ದಾರೆನ್ನುವ ಆರೋಪ ಹೊತ್ತಿರುವ ನಟಿ, ಅನುಭವ್ ಮೊಹಾಂತಿ ಪತ್ನಿ ವರ್ಷಾ ಪ್ರಿಯದರ್ಶಿನಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ಕೆಲಸಗಾರರ ಕುರಿತು ಜಾತಿ ವಿಚಾರವಾಗಿ ನಿಂದಿಸಿರುವ ಬಗ್ಗೆ ಜುಲೈ 2019ರಲ್ಲಿ ಸಂಸದ ಅನುಭವ್ ಮೊಹಾಂತಿ ದೂರು ಸಲ್ಲಿಸಿದ್ದಾರೆ. ಈ ವಿಚಾರವಾಗಿ ದೆಹಲಿ ಪೊಲೀಸರು ವರ್ಷಾ ಪ್ರಿಯದರ್ಶಿನಿ ಮತ್ತು ಆಕೆಯ ಸಂಬಂಧಿಕರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ದಾಖಲಾದ ಆಧಾರದ ಮೇಲೆ ದೆಹಲಿ ಪೊಲೀಸರ ತಂಡವು ಕಳೆದ ಜುಲೈ 25 ರಂದು ಕಟಕ್‌ಗೆ ಭೇಟಿ ನೀಡಿತ್ತು. ವರ್ಷಾ ಪ್ರಿಯದರ್ಶಿನಿ ಮತ್ತು ಅವರ ಸಹೋದರಿ ಪುರಿಘಾಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ನೋಟಿಸ್ ಸ್ವೀಕರಿಸಿದ್ದಾರೆ.