ಟಾಲಿವುಡ್ ಕ್ವೀನ್ ಸಮಂತಾ ರುತ್ ಪ್ರಭು ಅಭಿನಯದ ಪೌರಾಣಿಕ ಕಥಾಹಂದರವುಳ್ಳ ಸಿನಿಮಾ 'ಶಾಕುಂತಲಂ' ನವೆಂಬರ್ 4ಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.
ಶಾಕುಂತಲಂ ಸಿನಿಮಾ ಬಿಡುಗಡೆ ದಿನಾಂಕವನ್ನು ಸ್ವತಃ ಸಮಂತಾ ಅವರೇ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಪ್ರೇಮ ಮಹಾಕಾವ್ಯ ಶಾಕುಂತಲಂ 2022ರ ನವೆಂಬರ್ 4ರಂದು ಜಗತ್ತಿನಾದ್ಯಂತ ತೆರೆಗೆ ಬರಲಿದೆ ಎಂದು ನಟಿ ಸಮಂತಾ ಟ್ವೀಟ್ ಮಾಡಿದ್ದಾರೆ. 'ನಿಮ್ಮ ಪ್ರೀತಿಗೆ ಧನ್ಯವಾದಗಳು. ನೀವೇ ನನ್ನ ಶಕ್ತಿ' ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಇನ್ನೊಂದು ಟ್ವೀಟ್ ಮಾಡಿದ್ದಾರೆ.