ಕರ್ನಾಟಕ

karnataka

ETV Bharat / entertainment

ಛೀ ಕಳ್ಳ ಆಲ್ಬಂ ಸಾಂಗ್​​ನಲ್ಲಿ ಏಕ್ ಲವ್ ಯಾ ಬೆಡಗಿ ರೀಷ್ಮಾ ನಾಣಯ್ಯ ಮಿಂಚು - akshar starrer chee kalla album

ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಪುತ್ರ ಅಕ್ಷರ್ ಹಾಗೂ ಏಕ್ ಲವ್ ಯಾ ಸಿನಿಮಾ ನಟಿ ರೀಷ್ಮಾ ನಾಣಯ್ಯ ಅಭಿನಯದ ಛೀ ಕಳ್ಳ ಆಲ್ಬಂ ಸಾಂಗ್​ ಬಿಡುಗಡೆ ಆಗಿದೆ.

actress Reeshma Nanaiah starrer chee kalla album song released
ರೀಷ್ಮಾ ನಾಣಯ್ಯ - ಅಕ್ಷರ್

By

Published : Sep 9, 2022, 4:33 PM IST

Updated : Sep 9, 2022, 4:39 PM IST

ನಿರ್ಮಾಪಕ ಬಿ.ಕೆ.ಶ್ರೀನಿವಾಸ್ (ಬೆಂಕೋಶ್ರೀ) ಅವರ ಪುತ್ರ ಅಕ್ಷರ್ ಹಾಗೂ ಏಕ್ ಲವ್ ಯಾ ಸಿನಿಮಾ ನಟಿ ರೀಷ್ಮಾ ನಾಣಯ್ಯ ಅಭಿನಯದ ಛೀ ಕಳ್ಳ ಆಲ್ಬಂ ಸಾಂಗ್​ ಬಿಡುಗಡೆ ಆಗಿದೆ. ಖ್ಯಾತ ಗಾಯಕ ನವೀನ್ ಸಜ್ಜು ಕಂಠ ಸಿರಿಯಲ್ಲಿ ಮೂಡಿ ಬಂದಿರುವ ವಿಡಿಯೋ ಆಲ್ಬಂ ಸಾಂಗ್‌ ಅನ್ನು ಪ್ರತಿಷ್ಠಿತ ಎ2 ಮ್ಯೂಸಿಕ್ (A2 music) ಸಂಸ್ಥೆ ಮೂಲಕ ಬಿಡುಡೆ ಮಾಡಲಾಗಿದೆ.

ಪನರ್ವ್ ಆಕರ್ಷ್ ನಿರ್ದೇಶಿಸಿರುವ ಈ ಅದ್ಭುತ ಗೀತೆಯನ್ನು ವಿಸ್ಮಯ ಜಗ ಬರೆದು, ರಾಗ ಸಂಯೋಜನೆ ಕೂಡ ಮಾಡಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಬೆಂ.ಕೋ.ಶ್ರೀ ಅವರು ಛೀ ಕಳ್ಳ ಆಲ್ಬಂ ಸಾಂಗ್​​ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಛೀ ಕಳ್ಳ ಆಲ್ಬಂ ಬಹಳ ಚೆನ್ನಾಗಿದೆ. ನಾನು ಏಳು ಚಿತ್ರಗಳನ್ನು ನಿರ್ಮಿಸಿದ್ದೇನೆ. ಆ ಪೈಕಿ ಕೆಲವು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಹ ಬಂದಿದೆ. ನನಗೆ ಮೊದಲಿನಿಂದಲೂ ಮಾಧ್ಯಮದವರು ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ. ಅದೇ ಪ್ರೋತ್ಸಾಹವನ್ನು ನನ್ನ ಮಗನಿಗೂ ನೀಡಿ ಎಂದು ಬೆಂ.ಕೋ.ಶ್ರೀ ತಿಳಿಸಿದರು.

ನನಗೆ ಸಿನಿಮಾದಲ್ಲಿ ನಟಿಬೇಕು ಎಂಬ ಆಸೆ. ಅದರ ಪೂರ್ವಭಾವಿಯಾಗಿ ಈ ಆಲ್ಬಂನಲ್ಲಿ ಅಭಿನಯಿಸಿದ್ದೇನೆ. ರೀಷ್ಮಾ ನಾಣಯ್ಯ ಅವರ ಅಭಿನಯ ಈ ಹಾಡನ್ನು ಮತ್ತಷ್ಟು ಸುಂದರವಾಗಿಸಿದೆ. ವಿಸ್ಮಯ ಜಗ ಅದ್ಭುತವಾದ ಹಾಡನ್ನು ಬರೆದು, ರಾಗ ಸಂಯೋಜನೆ ಕೂಡ ಮಾಡಿದ್ದಾರೆ. ಅಷ್ಟೇ ಅದ್ಭುತವಾಗಿ ಪುನರ್ವ್ ಆಕರ್ಶ್ ನಿರ್ದೇಶಿಸಿದ್ದಾರೆ. ನವೀನ್ ಸಜ್ಜು ಸುಮಧುರವಾಗಿ ಹಾಡಿದ್ದಾರೆ.

ನವೀನ್ ಕುಮಾರ್ ಹಾಗೂ ಎ.ಜೆ.ಶೆಟ್ಟಿ ಅವರ ಛಾಯಾಗ್ರಹಣದಲ್ಲಿ ಈ ಹಾಡನ್ನು ನೋಡುವುದೇ ಸೊಗಸು. ನಾಗೇಂದ್ರ ಈ ಹಾಡಿನ ನೃತ್ಯ ನಿರ್ದೇಶಕರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಆಲ್ಬಂ ಬಿಡುಗಡೆ ಮಾಡಿರುವ A2 music ಅವರಿಗೆ ಧನ್ಯವಾದಗಳು ಎಂದು ಅಕ್ಷರ್ ತಿಳಿಸಿದರು.‌ ಇನ್ನೂ ನಟಿ ರೀಷ್ಮಾ ನಾಣಯ್ಯ ಮಾತನಾಡಿ, ಛೀ ಕಳ್ಳ ಆಲ್ಬಂ ತುಂಬಾ ಚೆನ್ನಾಗಿದೆ. ಇದು ನಾನು ನಟಿಸಿರುವ ಮೊದಲ ಆಲ್ಬಂ ಎಂದು ತಿಳಿಸಿದರು.

ಯಶೋದಾ ಸಿನಿಮಾ ಟೀಸರ್ ರಿಲೀಸ್​... ಹೊಸ ಅವತಾರದಲ್ಲಿ ನಟಿ ಸಮಂತಾ ರುತ್ ಪ್ರಭು

Last Updated : Sep 9, 2022, 4:39 PM IST

ABOUT THE AUTHOR

...view details