ಪುನೀತ್ ರಾಜ್‍ಕುಮಾರ್ ಕನಸಿನ ಚಿತ್ರ ಗಂಧದ ಗುಡಿ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಫೋಟೋಗ್ರಾಫರ್ ಅಮೋಘವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಇದೇ ಅಕ್ಟೋಬರ್ 28ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ನಾಳೆ ಪುನೀತ್ ಪರ್ವ ಹೆಸರಿನಲ್ಲಿ ಗಂಧದ ಗುಡಿ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯಲಿದ್ದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಜವಂಶದ ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಸಮಾರಂಭದಲ್ಲಿ ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ ಲೈವ್ ಡ್ಯಾನ್ಸ್ ಪರ್ಫಾಮೆನ್ಸ್ ಕೊಡಲಿದ್ದಾರೆ. ಈ ಬಗ್ಗೆ ಪಿಆರ್ಕೆ ಪ್ರೊಡಕ್ಷನ್ ಮಾಹಿತಿ ನೀಡಿದೆ.