ಅದ್ಭುತ ನಟನಾ ಕೌಶಲ್ಯದಿಂದ ಹಿಂದಿ ಚಿತ್ರರಂಗವನ್ನು ಆಳಿರುವ ಬಹುಬೇಡಿಕೆ ನಟಿ ಕಾಜೋಲ್ 'ದಿ ಟ್ರಯಲ್ : ಪ್ಯಾರ್ - ಕಾನೂನ್ - ಧೋಖಾ'ಮೂಲಕ ಒಟಿಟಿಗೆ ಚೊಚ್ಚಲ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಹಾಗಾದರೆ, ವೆಬ್ ಸರಣಿಯಲ್ಲಿ ಕೆಲಸ ಮಾಡುವುದು ಈ ನಟಿಗೆ ಚಲನಚಿತ್ರಗಳಿಗಿಂತ ಭಿನ್ನವಾಗಿದೆಯೇ?. ಇಲ್ಲ, ಕಾಜೋಲ್‌ಗೆ ಯಾವುದೇ ವ್ಯತ್ಯಾಸ ಕಾಣಿಸುತ್ತಿಲ್ಲ. ವೆಬ್ ಸರಣಿ, ಸಿನಿಮಾ, ಪಾತ್ರಗಳ ಕುರಿತು ಬಾಲಿವುಡ್ ಬೆಡಗಿ ಕಾಜೋಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಸೋಮವಾರದಂದು ನಡೆದ ಡಿಸ್ನಿ + ಹಾಟ್‌ಸ್ಟಾರ್ ಸರಣಿ 'ದಿ ಟ್ರಯಲ್ : ಪ್ಯಾರ್ - ಕಾನೂನ್ - ಧೋಖಾ'ದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಾಜೋಲ್, "ಫಾರ್ಮ್ಯಾಟ್ (ಸಿನಿಮಾ / ಸೀರಿಸ್) ಹೊರತಾಗಿ, ಪಾತ್ರವು ಮುಖ್ಯವಾಗಿರುತ್ತದೆ. ಅದಕ್ಕೆ ಪೂರ್ಣ ಪ್ರಮಾಣದ ಶ್ರಮ ಬೇಕಾಗುತ್ತದೆ" ಎಂದು ಕಾಜೋಲ್ ಹೇಳಿದರು.
ಬೆಳ್ಳಿ ತೆರೆಯಿಂದ ಒಟಿಟಿ ವೇದಿಕೆಗೆ ಹೋಗುವಲ್ಲಿ ಎದುರಿಸಬಹುದಾದ ಸವಾಲುಗಳ ಬಗ್ಗೆ ಪ್ರಶ್ನೆ ಎದುರಾದಾಗ, "ಇದು ನನಗೆ ಸರಳವಾದ ಆಯ್ಕೆ. ನಾನು ಕೆಲಸ ಮಾಡುವ ಸಂದರ್ಭ ನಾನು ಅದನ್ನು ಆನಂದಿಸುತ್ತೇನೆ. ನಾನು ಒಳ್ಳೆಯದರೊಂದಿಗೆ ಕೆಲಸ ಮಾಡುತ್ತೇನೆ. ಸ್ಕ್ರಿಪ್ಟ್ ಯಾವಾಗಲೂ ನನ್ನ ನಾಯಕನಾಗಿರುತ್ತದೆ" ಎಂದು ಕಾಜೋಲ್ ಪ್ರತಿಕ್ರಿಯಿಸಿದರು. ಮಾತು ಮುಂದುವರಿಸಿದ ನಟಿ "ಕೆಲಸ ಅದೇ ಇರುತ್ತದೆ, ನಾನು ಯಾವುದೇ ರೀತಿಯಲ್ಲಿ ಭಿನ್ನವಾಗಿಲ್ಲ, ನನ್ನ ಕೆಲಸವು ಸಹ ಯಾವುದೇ ರೀತಿಯಲ್ಲಿ ಭಿನ್ನವಾಗಿಲ್ಲ, ಆಯ್ಕೆ ಮಾಡುವುದು ಅಷ್ಟು ಕಷ್ಟವಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದರು.
'ದಿ ಟ್ರಯಲ್ : ಪ್ಯಾರ್ - ಕಾನೂನ್ - ಧೋಖಾ' ಸೀರಿಸ್ ನಟಿಯ ಚೊಚ್ಚಲ ಸೀರಿಸ್ ಆಗಿದ್ದು, ಯಾವ ವಿಷಯ ನಿಮಗೆ ಭಯ ಎನಿಸುತ್ತದೆ ಎಂದು ಪ್ರಶ್ನಿಸಿದಾಗ, "ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಭಾವಿಸುತ್ತೇನೆ, ಭಯಪಡುವ ಪದವನ್ನು ಬಳಸಬಾರದು. ಆದರೆ, ನನಗೆ ಈ ಮೂರರ (ಪ್ಯಾರ್ - ಕಾನೂನ್ - ಧೋಖಾ) ಬಗ್ಗೆ ಆರೋಗ್ಯಕರ ಅರಿವಿದೆ. ನೀವು ಕಣ್ಣು ಮುಚ್ಚಿ ಪ್ರೀತಿಯಲ್ಲಿ ಬೀಳಲು ಸಾಧ್ಯವಿಲ್ಲ, ನೀವು ಕಾನೂನಿನೊಂದಿಗೆ ಆಟವಾಡಲು ಸಾಧ್ಯವಿಲ್ಲ ಅಥವಾ ನೀವು ಯಾರಿಗೂ ದ್ರೋಹ ಮಾಡಲು ಸಾಧ್ಯವಿಲ್ಲ" ಎಂದು ತಿಳಿಸಿದರು.