ಕರ್ನಾಟಕ

karnataka

ETV Bharat / entertainment

"ವಾವ್, ಫ್ಯಾಬ್​ ಲುಕ್"- 'ಮ್ಯಾನ್​' ಮೋಷನ್​ ಪೋಸ್ಟರ್ ಹಂಚಿಕೊಂಡ ನಟಿ ಹನ್ಸಿಕಾ - etv bharat kannada

ನಟಿ ಹನ್ಸಿಕಾ ಮೋಟ್ವಾನಿ ತಮ್ಮ ಮುಂದಿನ 'ಮ್ಯಾನ್'​ ಸಿನಿಮಾದ ಮೋಷನ್​ ಪೋಸ್ಟರ್​ನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

poster
ಹನ್ಸಿಕಾ

By

Published : Mar 9, 2023, 1:25 PM IST

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸೌತ್​ ಸುಂದರಿಯ ಮುಂದಿನ ಸಿನಿಮಾ 'ಮ್ಯಾನ್​' ಇದರ ಮೊದಲ ಮೋಷನ್​ ಪೋಸ್ಟರ್​ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. "ಥ್ರಿಲ್ಲರ್​​ ರೈಡ್‌ಗೆ ಸಿದ್ಧರಾಗಿ! ಹನ್ಸಿಕಾ ನಟಿಸಿರುವ ಮ್ಯಾನ್​ ಸಿನಿಮಾ ಶೀಘ್ರದಲ್ಲೇ ಬರಲಿದೆ. ಚಿತ್ರವನ್ನು ಇಗೋರ್​ ನಿರ್ದೇಶಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಫಸ್ಟ್​ ಲುಕ್​ ಮತ್ತು ಮೋಷನ್​ ಪೋಸ್ಟರ್​, ಚಿತ್ರವು ಆಕ್ಷನ್​ ಕ್ರೈಂ ಥ್ರಿಲ್ಲರ್​​ ಎಂಬ ಸುಳಿವು ನೀಡಿದೆ.

ಇಗೋರ್​ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ಬಿಡುಗಡೆ ದಿನಾಂಕ ಅಧಿಕೃತವಾಗಿ ನಿಗದಿಯಾಗಿಲ್ಲ. 'ಮ್ಯಾನ್​' ಮೋಷನ್​ ಪೋಸ್ಟರ್​ ನೋಡಿದ ಅಭಿಮಾನಿಗಳು ಕೆಂಪು ಹೃದಯಗಳು ಮತ್ತು ಫೈರ್​​ ಎಮೋಜಿಗಳೊಂದಿಗೆ ಕಾಮೆಂಟ್​ ವಿಭಾಗವನ್ನು ತುಂಬಿದರು. "ವಾವ್.. ಫ್ಯಾಬ್​ ಲುಕ್" ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಮತ್ತೊಬ್ಬರು, "ವಾವ್ ಇಟ್ಸ್ ಲುಕ್ ಅಮೇಜಿಂಗ್ ಹನ್ಸೂ" ಎಂದು ಕಾಮೆಂಟ್ ಮಾಡಿದ್ದಾರೆ. "ನಾವು ಸಿನಿಮಾಕ್ಕಾಗಿ ಕಾಯುತ್ತಿದ್ದೇವೆ" ಎಂದು ಫ್ಯಾನ್ಸ್​ ಕಮೆಂಟ್​ ಮೂಲಕ ಹೇಳುತ್ತಿದ್ದಾರೆ.

ಇದನ್ನೂ ಓದಿ:ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ

ಸೌತ್​ ಸುಂದರಿ ಹನ್ಸಿಕಾ: ಬಾಲ ಕಲಾವಿದೆಯಾಗಿ 'ಶಕ ಲಕಾ ಬೂಮ್​ ಬೂಮ್​' ಜನಪ್ರಿಯ ಶೋ ಮೂಲಕ ಹನ್ಸಿಕಾ ಮೋಟ್ವಾನಿ ಬಣ್ಣದ ಲೋಕಕ್ಕೆ ಕಾಲಿರಿಸಿದರು. ಬಳಿಕ 2003 ರಲ್ಲಿ ತೆರೆಕಂಡ ಹೃತಿಕ್​ ರೋಷನ್ ​ಮತ್ತು ಪ್ರೀತಿ ಜಿಂಟಾ ಅವರ ಬ್ಲಾಕ್​ಬಸ್ಟರ್​ ಸಿನಿಮಾ 'ಕೋಯಿ ಮಿಲ್ ಗಯಾ' ಇದರ ಭಾಗವಾದರು. ಅದಾಗಿ 2007 ರಲ್ಲಿ ಬಿಡುಗಡೆಯಾದ ಪುರಿ ಜಗನ್ನಾಥ್​ ನಿರ್ದೇಶನದ 'ದೇಸಮುದುರು' ತೆಲುಗು ಚಿತ್ರದಲ್ಲಿ ಅಲ್ಲು ಅರ್ಜುನ್​ ಜೊತೆ ನಾಯಕಿಯಾಗಿ ಕಾಣಿಸಿಕೊಂಡರು. ಆ ಸಿನಿಮಾ ಅವರಿಗೆ ಫಿಲ್ಮ್​ಫೇರ್​ ಪ್ರಶಸ್ತಿಯನ್ನು ತಂದು ಕೊಟ್ಟಿತು. ಏತನ್ಮಧ್ಯೆ, ಇತ್ತೀಚೆಗೆ ಹನ್ಸಿಕಾ ಓಟಿಟಿ ಪ್ಲಾಟ್​ಫಾರ್ಮ್ ಡಿಸ್ನಿ + ಹಾಟ್​ಸ್ಟಾರ್​ನಲ್ಲಿ ಪ್ರದರ್ಶನಗೊಂಡ 'ಹನ್ಸಿಕಾಸ್​ ಲವ್​ ಶಾದಿ ಡ್ರಾಮಾ' ಶೋನಲ್ಲಿ ಕಾಣಿಸಿಕೊಂಡರು.

ಸೊಹೈಲ್​ ಕಥುರಿಯಾ ಜೊತೆ ಹನ್ಸಿಕಾ ಮದುವೆ: 2022 ರ ಡಿಸೆಂಬರ್​ 4 ರಂದು ರಾಜಸ್ಥಾನದ 450 ವರ್ಷಗಳಷ್ಟು ಹಳೆಯದಾದ ರಾಜಮನೆತನದ ಕೋಟೆಯಲ್ಲಿ ಉದ್ಯಮಿ ಸೊಹೈಲ್​ ಕಥುರಿಯಾ ಅವರ ಜೊತೆ ಹಸೆಮಣೆ ಏರುವ ಮೂಲಕ ಹನ್ಸಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗೆ ಮುನ್ನ ಮೆಹಂದಿ, ಸಂಗೀತ, ಹಳದಿ ಸೇರಿದಂತೆ ಬಗೆ ಬಗೆಯ ಶಾಸ್ತ್ರಗಳು ಜೋರಾಗಿಯೇ ನಡೆದಿತ್ತು. ಅದರಲ್ಲೂ ಮೆಹಂದಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ಜೈಪುರದ ಮುಂಡೋಟಾ ಕೋಟೆಯಲ್ಲಿ ಅದ್ದೂರಿಯಾಗಿ ನರವೇರಿದ ಈ ಜೋಡಿ ಮದುವೆಗೆ ಆತ್ಮೀಯರು, ಚಿತ್ರರಂಗದವರು ಸಾಕ್ಷಿಯಾಗಿದ್ದರು. ಸಾವಿರಾರು ಅಭಿಮಾನಿಗಳು, ಸೆಲೆಬ್ರಿಟಿಗಳು ನವ ಜೋಡಿಗೆ ಶುಭಹಾರೈಸಿದ್ದರು.

ಇದನ್ನೂ ಓದಿ:ಕೆಜಿಎಫ್ ಚಾಪ್ಟರ್ 2 ದಾಖಲೆ ಸರಿಗಟ್ಟಲಿದೆ ಕಬ್ಜ ಸಿನಿಮಾ ಬಿಡುಗಡೆ.. 4000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಸಂಭವ

ABOUT THE AUTHOR

...view details