ಮುಗಳು ನಗೆ, ರ‍್ಯಾಂಬೋ, ಮದಗಜ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಟಿ ಆಶಿಕಾ ರಂಗನಾಥ್. ಸಿನಿಮಾ, ಫೋಟೋಶೂಟ್ ವಿಷಯಗಳಿಗೆ ಸುದ್ದಿಯಾಗುತ್ತಿದ್ದ ಆಶಿಕಾ ಇದೀಗ ರಂಪಾಟದ ವಿಷಯವಾಗಿ ಸುದ್ದಿಯಾಗಿದ್ದಾರೆ. ಕುಡಿದು ಕಾರು ಅಪಘಾತ ಮಾಡಿ, ಸಿಕ್ಕ ಸಿಕ್ಕವರಿಗೆ ಆವಾಜ್ ಹಾಕುತ್ತಿರುವ ದೃಶ್ಯ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ಮಧ್ಯದ ಬೆರಳನ್ನು ತೋರಿಸುವ ಮೂಲಕ ಸುದ್ದಿಯಾಗಿದ್ದಾರೆ.
ಆಶಿಕಾ ರಂಗನಾಥ್ ಅವರಿಗೆ ಏನಾಯ್ತು, ಯಾರ ಜೊತೆ ಎಣ್ಣೆ ಪಾರ್ಟಿ ಮಾಡಿ ಗಲಾಟೆ ಮಾಡಿಕೊಂಡ್ರು? ಅನ್ನೋ ಪ್ರಶ್ನೆ ಕಾಡುತ್ತಿದೆಯಾ?. ಆಶಿಕಾ ರಂಗನಾಥ್ ಹೀಗೆ ಕುಡಿದು ರಂಪಾಟ ಮಾಡಿರೋದು ರಿಯಲ್ ಅಲ್ಲ. ಕೇವಲ ರೀಲ್. ಹೀಗೆ ಕೈಯಲ್ಲಿ ಎಣ್ಣೆ ಬಾಟ್ಲಿ ಹಿಡಿದು ಗಲಾಟೆ ಮಾಡಿರೋದು ಕೇವಲ ಕ್ಯಾಮರಾ ಮುಂದೆ ಅಷ್ಟೇ. ಹೌದು, ಆಶಿಕಾ ರಂಗನಾಥ್ ಅಭಿನಯದ ರೇಮೊ ಚಿತ್ರದ ಒಂದು ದೃಶ್ಯ ಇದು. ಈ ಸಿನಿಮಾ ಶೂಟಿಂಗ್ ಸಮಯದಲ್ಲಿ ತೆಗೆದ ದೃಶ್ಯದ ತುಣುಕಷ್ಟೇ. ಸದ್ಯಕ್ಕೆ ವಿಡಿಯೋ ಲೀಕ್ ಆಗಿ ವೈರಲ್ ಆಗಿದೆ.