ಕರ್ನಾಟಕ

karnataka

ETV Bharat / entertainment

ಅಬ್ಬಬ್ಬಾ.. ಆಲಿಯಾ ಭಟ್​ ತೊಟ್ಟ ಬಟ್ಟೆ, ಬ್ಯಾಗ್​ ಬೆಲೆ 4 ಲಕ್ಷ ರೂ., ಏರ್ಪೋರ್ಟ್​​ಗೆ ಬರಲು ಇಷ್ಟೊಂದು ಖರ್ಚು! - ಆಲಿಯಾ ಭಟ್ ಲೇಟೆಸ್ಟ್ ನ್ಯೂಸ್

ಮಂಗಳವಾರ ರಾತ್ರಿ ನಟಿ ಆಲಿಯಾ ಭಟ್​ ಮೇಕಪ್ ಇಲ್ಲದೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆದರೆ ಅವರ ಬಟ್ಟೆ, ಶೂ, ಬ್ಯಾಗ್​ ಬೆಲೆ ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

Alia Bhatt airport look
ನಟಿ ಆಲಿಯಾ ಭಟ್ ಏರ್ಪೋರ್ಟ್ ಲುಕ್

By

Published : Apr 26, 2023, 1:25 PM IST

ಬಾಲಿವುಡ್​ ನಟಿಮಣಿಯರು ಅಭಿನಯ ಮಾತ್ರವಲ್ಲದೇ ತಮ್ಮ ಫ್ಯಾಷನ್​ ಸೆನ್ಸ್​ನಿಂದ ಸಾಕಷ್ಟು ಸದ್ದು ಮಾಡುತ್ತಾರೆ. ಫೋಟೋಶೂಟ್​, ಇವರು ತೊಡುವ ಬಟ್ಟೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗುತ್ತಾರೆ. ಏರ್​ಪೋರ್ಟ್​​ನಲ್ಲಿ ಅವರ ಸೌಂದರ್ಯ ಸೆರೆಹಿಡಿಯಲು ಪಾಪರಾಜಿಗಳು ಕಾದು ಕುಳಿತಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್​ ಬಹುಬೇಡಿಕೆ ತಾರೆ ಆಲಿಯಾ ಭಟ್ ಏರ್​ಪೋರ್ಟ್​ ಲುಕ್​ ಸಖತ್​ ಸೌಂಡ್​ ಮಾಡುತ್ತಿದೆ.

'ಹಾರ್ಟ್ ಆಫ್ ಸ್ಟೋನ್' ಮೂಲಕ ಅಂತಾರಾಷ್ಟ್ರೀಯ ಸಿನಿ ಉದ್ಯಮಕ್ಕೆ ಪದಾರ್ಪಣೆ ಮಾಡಲು ಸಿದ್ಧವಾಗಿರುವ ಆಲಿಯಾ ಭಟ್ ಇತ್ತೀಚೆಗೆ ದುಬೈನಲ್ಲಿ ಸಮಯ ಕಳೆದು, ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಮಂಗಳವಾರ ರಾತ್ರಿ, ಆಲಿಯಾ ಭಟ್​ ಮೇಕಪ್ ಇಲ್ಲದೇ ಡೆನಿಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸರಳವಾಗಿ ಕಾಣುತ್ತಿದ್ದರೂ ಕೂಡ ಅವರ ಲಕ್ಷಗಟ್ಟಲೆ ಬೆಲೆಬಾಳುವ ಉಡುಪಿನ ಮೂಲಕ ಸರಳ ಸೌಂದರ್ಯದ ತೂಕ ಹೆಚ್ಚಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿ ಖಾತೆಯಿಂದ ವಿಡಿಯೋವೊಂದು ಹೊರಬಿದ್ದಿದೆ. ಆಲಿಯಾ ಡೆನಿಮ್ ಆ್ಯಂಡ್​​ ಡೆನಿಮ್ ಲುಕ್​​ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಟಿ ಡೆನಿಮ್ ಜೀನ್ಸ್, ಡೆನಿಮ್ ಜಾಕೆಟ್, ವೈಟ್​ ಟಾಪ್​​ ಧರಿಸಿದ್ದರು. ಅವರು ತೊಟ್ಟ ಈ ಸ್ಟೈಲಿಶ್​ ಉಡುಗೆ ಬೆಲೆ ಕೇಳಿದ್ರೆ ನಿಮಗೆ ಶಾಕ್​ ಆಗೋದ್ರಲ್ಲಿ ಸಂದೇಹವೇ ಇಲ್ಲ.

ಡೆನಿಮ್ ಬೆಲೆ 1,71,916 ರೂ. ಅವರು ಹಿಡಿದಿದ್ದ ಬ್ರ್ಯಾಂಡೆಡ್​ ಬ್ಯಾಗ್​ ಬೆಲೆ 1,67,994 ರೂ. ಶೂ ಬೆಲೆ 75,423 ರೂ. ವಿಮಾನ ನಿಲ್ದಾಣದ ಸಂಪೂರ್ಣ ನೋಟಕ್ಕೆ 4,15,333 ರೂ. ಖರ್ಚು ಮಾಡಿದ್ದಾರೆ. ಆಲಿಯಾ ಭಟ್​​ ಯಾವುದೇ ಮೇಕಪ್ ಇಲ್ಲದೇ, ತಮ್ಮ ನೈಸರ್ಗಿಕ ಸೌಂದರ್ಯ ಪ್ರದರ್ಶಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಡುವ ಮೊದಲು ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ನಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಭಿಮಾನಿಗಳು, ನೆಟ್ಟಿಗರು ಕಾಮೆಂಟ್​ ವಿಭಾಗದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಏರ್ಪೋರ್ಟ್​​ಗೆ ಬರಲು ಇಷ್ಟೊಂದು ಖರ್ಚು ಮಾಡಿದ್ರಾ ನಟಿ ಎಂದು ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ:ಜೂ.ಎನ್​​ಟಿಆರ್ ಜೊತೆ ಕೆಲಸ ಮಾಡಲಿಚ್ಛಿಸಿದ ಹಾಲಿವುಡ್​​ ನಿರ್ದೇಶಕ

ನಟಿ ಆಲಿಯಾ ಭಟ್​ ಈ ವರ್ಷ ಮೆಟ್ ಗಾಲಾದಲ್ಲಿ ಭಾಗವಹಿಸಲಿದ್ದಾರೆ. ಇದು ಅವರ ಮೊದಲ ಹೆಜ್ಜೆ. ರೆಡ್ ಕಾರ್ಪೆಟ್ ಮೇಲೆ ತಮ್ಮ ಮೆಚ್ಚಿನ ನಟಿಯ ಹೆಜ್ಜೆ ಗುರುತಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ವರ್ಷ ಹಾಲಿವುಡ್​ ನಟರ ಜೊತೆ, ಆಲಿಯಾ ಹಾರ್ಟ್ ಆಫ್ ಸ್ಟೋನ್ ಮೂಲಕ ಹಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ:'ಮನ್ ಕಿ ಬಾತ್' ಭಾರತೀಯರ ಮೇಲೆ ದೊಡ್ಡ ಪ್ರಭಾವ ಬೀರಿದೆ: ನಟ ಅಮೀರ್​ ಖಾನ್​

ಇನ್ನೂ ಆಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ನಟ ರಣ್​​​ವೀರ್ ಸಿಂಗ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಜೊತೆಗೆ ಧರ್ಮೇಂದ್ರ, ಜಯಾ ಬಚ್ಚನ್​ ಮತ್ತು ಶಬಾನಾ ಅಜ್ಮಿ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಕಿ ರಾಣಿಯ ಪ್ರೇಮ ಕಥೆಯ ಈ ಸಿನಿಮಾ ಜುಲೈ 28ರಂದು ಬಿಡುಗಡೆಯಾಗಲಿದೆ.

ABOUT THE AUTHOR

...view details