ವಿಜಯನಗರ: ಇಂದು ನಟ ಶಿವ ರಾಜ್ಕುಮಾರ್ ದಂಪತಿ ನಗರದಲ್ಲಿರುವ ರಾಜ್ಕುಮಾರ್ ಅಭಿಮಾನಿ ಮನೆಗೆ ಭೇಟಿ ನೀಡಿದರು. ಜ್ಯೂನಿಯರ್ ರಾಜ್ಕುಮಾರ್ರಂತೆ ಇದ್ದ ಬಾಣದ ಶ್ರೀಧರ ಅವರು ಕಳೆದ ವರ್ಷ ಕೋವಿಡ್ಗೆ ಬಲಿಯಾಗಿದ್ದರು. ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ ಎಂದು ಗುರುತಿಸಿಕೊಂಡಿದ್ದ ಬಾಣದ ಶ್ರೀಧರ ಥೇಟ್ ವರನಟರಂತೆ ವೇಷ ಭೂಷಣ ತೊಡುತ್ತಿದ್ದರು. ಆದರೆ ಇಂದು ಅವರಿಲ್ಲ ಅನ್ನೋದು ಬಹಳ ಬೇಸರದ ಸಂಗತಿ. ದಿವಂಗತ ಬಾಣದ ಶ್ರೀಧರ ಮನೆಗೆ ಶಿವ ರಾಜ್ಕುಮಾರ್ ದಂಪತಿ ಭೇಟಿ ಮಾಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಅಭಿಮಾನಿ ಮನೆಗೆ ಭೇಟಿ ನೀಡಿದ ಶಿವಣ್ಣ..ವಿಡಿಯೋ
ನಗರದಲ್ಲಿರುವ ರಾಜ್ಕುಮಾರ್ ಅಭಿಮಾನಿಯೊಬ್ಬರ ಮನೆಗೆ ನಟ ಶಿವ ರಾಜ್ಕುಮಾರ್ ಭೇಟಿ ನೀಡಿದರು.
ಅಭಿಮಾನಿ ಮನೆಗೆ ಭೇಟಿ ನೀಡಿದ ಶಿವಣ್ಣ
ಹೊಸಪೇಟೆ ತಾಲೂಕಿನ ಇಂಗಳಿ ಗ್ರಾಮದಲ್ಲಿರುವ ಅನ್ನಪೂರ್ಣೇಶ್ವರಿ ವಸತಿಯುತ ವಿದ್ಯಾಪೀಠಕ್ಕೆ ಭೇಟಿ ನೀಡಿ ಅಲ್ಲಿನ ಜೋಗದ ತಾತಯ್ಯ (ದಿಗಂಬರ ರಾಜ ಭಾರತಿ ಶ್ರೀಗಳು)ರನ್ನು ಭೇಟಿ ಮಾಡಿ ಚರ್ಚಿಸಿದರು. ಹೈಸ್ಕೂಲ್ ಅನ್ನು ಶಕ್ತಿಧಾಮಕ್ಕೆ ಪಡೆಯುವಂತೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಶಿವಣ್ಣ ವಾರದೊಳಗೆ ಶಾಲೆಯನ್ನು ಶಕ್ತಿಧಾಮಕ್ಕೆ ಪಡೆಯುವ ಬಗ್ಗೆ ತಿಳಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ:'ವೇದ' ಕೌಟುಂಬಿಕ ಸದಭಿರುಚಿಯ ಸಿನಿಮಾ: ನಟ ಶಿವರಾಜ್ ಕುಮಾರ್
Last Updated : Dec 15, 2022, 7:22 PM IST