ಬ್ರಿಟಿಷ್ ಇತಿಹಾಸದಲ್ಲೇ ಸುದೀರ್ಘಾವಧಿಗೆ ರಾಣಿಯಾಗಿದ್ದ ಹಿರಿಮೆ ಹೊಂದಿರುವ 2ನೇ ಎಲಿಜಬೆತ್ ಗುರುವಾರ ರಾತ್ರಿ ನಿಧನರಾಗಿದ್ದು, ವಿಶ್ವದ ರಾಜಕೀಯ ನಾಯಕರು, ಉದ್ಯಮಿಗಳು, ಗಣ್ಯರು ಸೇರಿದಂತೆ ವಿವಿಧ ಪಕ್ಷಗಳು ಸಂತಾಪ ಸೂಚಿಸಿವೆ.
ನಟ, ಮಕ್ಕಲ್ ನಿಧಿ ಮಾಯಮ್ (Makkal Neeti Mayyam party) ಪಕ್ಷದ ನಾಯಕ ಕಮಲ್ ಹಾಸನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದು, 70 ವರ್ಷಗಳ ಕಾಲ ಆಡಳಿತ ನಡೆಸಿದ್ದ ಇಂಗ್ಲೆಂಡಿನ ರಾಣಿ ಎಲಿಜಬೆತ್ II ಅವರ ಸಾವಿನ ಸುದ್ದಿ ಕೇಳಿ ದುಃಖಿತನಾದೆ. ಅವರನ್ನು ಬ್ರಿಟಿಷರು ಮಾತ್ರವಲ್ಲದೇ ಇಡೀ ವಿಶ್ವವೇ ಪ್ರೀತಿಸುತ್ತದೆ. 25 ವರ್ಷಗಳ ಹಿಂದೆ ಅವರು ನಮ್ಮ ಆಹ್ವಾನವನ್ನು ಸ್ವೀಕರಿಸಿ ಮರುಧನಯಗಂ (Marudhanayagam) ಶೂಟಿಂಗ್ ಸೆಟ್ಗೆ ಆಗಮಿಸಿದ್ದರು. ಬಹುಶಃ ಅವರು ಭಾಗವಹಿಸಿದ ಏಕೈಕ ಚಲನಚಿತ್ರ ಚಿತ್ರೀಕರಣ ಇದು ಎಂದು ಟ್ವೀಟ್ ಮಾಡಿದ್ದಾರೆ.
ಮರುಧನಯಗಂ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದ ರಾಣಿ ಎಲಿಜಬೆತ್
ಇದನ್ನೂ ಓದಿ:ರಾಣಿ ಎಲಿಜಬೆತ್ ನಿಧನಕ್ಕೆ ಡಬ್ಬಾವಾಲಾಗಳ ಸಂತಾಪ: ಜೊತೆಯಲ್ಲೇ ಟಿಫಿನ್ ಸೇವಿಸಿದ ಕ್ಷಣದ ಮೆಲುಕು
ಇನ್ನೂ 5 ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಅವರನ್ನು ಅರಮನೆಯಲ್ಲಿ ಭೇಟಿಯಾಗಿದ್ದನ್ನು ನಾನು ಇನ್ನೂ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ತಮ್ಮ ಪ್ರೀತಿಯ ರಾಣಿಯನ್ನು ಕಳೆದುಕೊಂಡಿರುವ ಇಂಗ್ಲೆಂಡ್ ಮತ್ತು ರಾಜಮನೆತನದವರಿಗೆ ನನ್ನ ಆಳವಾದ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.