ಹೈದರಾಬಾದ್: ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಮಗ ಕರಣ್ ಡಿಯೋಲ್ ಮದುವೆ ಇತ್ತೀಚೆಗಷ್ಟೆ ಅದ್ದೂರಿಯಾಗಿ ಸಾಗಿತ್ತು. ಈ ಮದುವೆ ಸಂಭ್ರಮದ ಚಿತ್ರಗಳನ್ನು ನಟ ಸೇರಿದಂತೆ ಮಧುಮಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಅಭಿಮಾನಿಗಳೊಂದಿಗೆ ಸಂತಸ ಆಚರಿಸುತ್ತಿದ್ದಾರೆ. ಕರಣ್ ಮದುವೆ ಮತ್ತು ಆರತಕ್ಷತೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದರ ವಿಶೇಷತೆ ಎಂದರೆ ಸೆಲೆಬ್ರಿಟಿಗಳ ಹೆಂಡತಿಯರಾದರೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿರುವ ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ಸನ್ನಿ ಡಿಯೋಲ್ ಹೆಂಡತಿ ಪೂಜಾ ಡಿಯೋಲ್ ಕಾಣಬಹುದು. ಇನ್ಸ್ಟಾಗ್ರಾಂನಲ್ಲಿ ಈ ಮುದ್ದು ಕುಟುಂಬಗಳ ಫೋಟೋವನ್ನು ಹಂಚಿಕೊಂಡ ಕರಣ್, ನಮ್ಮ ಪ್ರೀತಿಯ ಕುಟುಂಬದ ಬೆಂಬಲ ಮತ್ತು ಆಶೀರ್ವಾದಕ್ಕೆ ಕೃತಜ್ಞರಾಗಿರುತ್ತೇವೆ. ಹೃದಯ ತುಂಬಿದ್ದು, ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅಡಿ ಬರಹ ಬರೆದಿದ್ದಾರೆ. ಮೊದಲ ಫೋಟೋದಲ್ಲಿ ನವ ದಂಪತಿಗಳು ತಮ್ಮ ಅಜ್ಜನಾದ ಖ್ಯಾತ ನಟ ಧರ್ಮೇಂದ್ರ ಮತ್ತು ಅವರ ಮೊದಲ ಹೆಂಡತಿ ಪ್ರಕಾಶ್ ಕೌರ್ ಅವರೊಂದಿಗೆ ಇದ್ದಾರೆ.
ಸಾಂಪ್ರದಾಯಿಕ ಉಡುಪಿನಲ್ಲಿ ಕರಣ್ ಮಿಂಚು:ಮತ್ತೊಂದು ಚಿತ್ರದಲ್ಲಿ ಕರಣ್ ಮತ್ತು ಆತನ ಹೆಂಡತಿ ದ್ರಿಶಾ ಆಚಾರ್ಯ, ನಟ ಸನ್ನಿ ಡಿಯೋಲ್ ಮತ್ತು ಆತನ ಹೆಂಡತಿ ಪೂಜಾ ಡಿಯೋಲ್ನೊಂದಿಗೆ ಕಂಡಿದ್ದಾರೆ. ಇನ್ನು ಮೂರು ಮತ್ತು ನಾಲ್ಕನೇ ಚಿತ್ರದಲ್ಲಿ ಡಿಯೋಲ್ ಸಂಪೂರ್ಣ ಕುಟುಂಬವನ್ನು ಕಾಣಬಹುದಾಗಿದೆ. ಇನ್ನು ಕಡೆಯ ಚಿತ್ರದಲ್ಲಿ ಕರಣ್ ಅಪ್ಪನ ಜೊತೆ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ್ದಾರೆ.