ಮೈಸೂರು: 'ಕ್ರಾಂತಿʼ ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಟ ದರ್ಶನ್, 'ಯಜಮಾನ ಚಿತ್ರದ ನಂತರ ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹರಿಕೃಷ್ಣ ಅವರು ಕ್ರಾಂತಿ ಚಿತ್ರ ನಿರ್ದೇಶಿಸಿದ್ದಾರೆ. ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಇಡೀ ಚಿತ್ರರಂಗವೇ ಭಾಗಿಯಾಗಿದೆ. ಶೇ 90ರಷ್ಟು ಕಲಾವಿದರು ಇದರಲ್ಲಿದ್ದಾರೆ. ಧರಣಿ ಮಂಡಲ ಎಂಬ ಹಾಡು ಅಭಿಮಾನಿಗಳ ಮೂಲಕವೇ ಬಿಡುಗಡೆಯಾಗಲಿದೆ' ಎಂದರು.
'ಕ್ರಾಂತಿ' ಪ್ರಚಾರದಲ್ಲಿ ನಟ ದರ್ಶನ್: ಧರಣಿ ಮಂಡಲ ಹಾಡು ಬಿಡುಗಡೆ - ನಟ ದರ್ಶನ್ ಕ್ರಾಂತಿ ಸಿನಿಮಾ
ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದ ಧರಣಿ ಮಂಡಲ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ.
ಕ್ರಾಂತಿ
ಇದನ್ನೂ ಓದಿ:ಕ್ರಾಂತಿ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್.. ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ತಿಳಿಸಿದ ದಚ್ಚು
ನಿರ್ಮಾಪಕಿ ಶೈಲಜಾ ನಾಗ್, ನಿರ್ದೇಶಕ ಹರಿಕೃಷ್ಣ, ನಾಯಕಿ ಸಂಯುಕ್ತ ಹೊರನಾಡು ಹಾಗೂ ರಚಿತಾ ರಾಮ್ ಸೇರಿದಂತೆ ಚಿತ್ರತಂಡದ ಎಲ್ಲಾ ಕಲಾವಿದರು, ತಂತ್ರಜ್ಞರು ಸುದ್ದಿಗೋಷ್ಠಿಯಲ್ಲಿದ್ದರು.
Last Updated : Dec 11, 2022, 7:21 PM IST