ಕರ್ನಾಟಕ

karnataka

ETV Bharat / entertainment

ಪ್ರೇಮಕಥೆಯುಳ್ಳ ಕೃಷ್ಣನ ದಿಲ್ ಪಸಂದ್ ಟೀಸರ್ ರಿಲೀಸ್​​ - Dil Pasand

ಬಹುತೇಕ ಚಿತ್ರೀಕರಣ ಮುಗಿಸಿರೋ ದಿಲ್ ಪಸಂದ್ ಸಿನಿಮಾ ಟೀಸರ್ ಬಿಡುಗಡೆ ಆಗಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

actor darling krishna starrer Dil Pasand Teaser Release
ದಿಲ್ ಪಸಂದ್ ಟೀಸರ್ ರಿಲೀಸ್​​

By

Published : Oct 5, 2022, 12:43 PM IST

ಲವ್ ಮಾಕ್ ಟೈಲ್ ಪಾರ್ಟ್ 1 ಹಾಗು 2 ಸಿನಿಮಾಗಳ ಯಶಸ್ಸಿನ ಬಳಿಕ ಡಾರ್ಲಿಂಗ್ ಕೃಷ್ಣನಿಗೆ ಬೇಡಿಕೆ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಟ ಕೃಷ್ಣ ಈಗ ದಿಲ್ ಪಸಂದ್ ಅಂತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ದಿಲ್ ಪಸಂದ್ ಸಿನಿಮಾ ಟೀಸರ್ ಬಿಡುಗಡೆ ಆಗಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ರೊಮ್ಯಾಂಟಿಕ್ ಕಥೆ ಜೊತೆಗೆ ಥ್ರಿಲ್ಲಿಂಗ್​​ನಿಂದ‌ ಕೂಡಿದ್ದು ಈ ಸಿನಿಮಾ ಗೆಲ್ಲುವ ಸೂಚನೆ ನೀಡಿದೆ. ದಿಲ್ ಪಸಂದ್ ಚಿತ್ರತಂಡ ಕೂಡ ಟೀಸರ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದೆ.

ಮೊದಲಿಗೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ನಾನು ಕಥೆ ಕೇಳಬೇಕಾದರೆ ಸಾಕಷ್ಟು ಖುಷಿ ಪಟ್ಟಿದೆ. ಸಾಕಷ್ಟು ಎಂಜಾಯ್ ಮಾಡಿಕೊಂಡು ಡಬ್ಬಿಂಗ್ ಮಾಡಿದ್ದೇನೆ. ಉತ್ತಮ ಮನೋರಂಜನೆಯಿರುವ "ದಿಲ್ ಪಸಂದ್" ಎಲ್ಲರಿಗೂ ಪ್ರಿಯವಾಗಲಿದೆ. ಕಾಮಿಡಿ ಜೊತೆಗೆ ತಂದೆ-ಮಗನ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು.

ದಿಲ್ ಪಸಂದ್ ಚಿತ್ರತಂಡ

ಐಶು ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ತುಂಬಾ ಎಮೋಷನಲ್ ಹುಡುಗಿ ನಾನು. ಲವ್ ಟ್ರ್ಯಾಕ್ ಇರುವ ಚಿತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಆದರೆ ಕಂಪ್ಲೀಟ್ ಲವ್ ಸ್ಟೋರಿಯಳ್ಳ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ನಾನು ನಟಿಸಿರುವ ಪೂರ್ಣ ಪ್ರೇಮಕಥೆಯುಳ್ಳ ಮೊದಲ ಚಿತ್ರ "ದಿಲ್ ಪಸಂದ್" ಎಂದು ನಟಿ ನಿಶ್ವಿಕಾ ನಾಯ್ಡು ತಿಳಿಸಿದರು. ಈ ಚಿತ್ರದಲ್ಲಿ ಮುಗ್ದ ಹುಡುಗಿಯ ಪಾತ್ರ ನನ್ನದು. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ "ದಿಲ್ ಪಸಂದ್". ಈ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಾಗಿದೆ ಎಂದರು ಮತ್ತೋರ್ವ ನಟಿ ಮೇಘಾ ಶೆಟ್ಟಿ.

ಈಗಾಗಲೇ ಮಳೆ, ಶಿವಾರ್ಜುನ ಸಿನಿಮಾಗಳನ್ನು ನಿರ್ದೇಶನ ಮಾಡಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ಶಿವ ತೇಜಸ್ ಮಾತನಾಡಿ, ಕುಟುಂಬ ಸಮೇತ ನೋಡಬಹುದಾದ ನಮ್ಮ ಚಿತ್ರ "ದಿಲ್ ಪಸಂದ್" ನಷ್ಟೇ ಸಿಹಿಯಾಗಿದೆ . ನನ್ನ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಸುಮಂತ್ ಕ್ರಾಂತಿ ಅವರಿಗೆ ಹಾಗೂ ನನ್ನ ಇಡೀ ಚಿತ್ರ ತಂಡಕ್ಕೆ ಧನ್ಯವಾದ ಎಂದರು.

ಬಳಿಕ‌ ನಿರ್ಮಾಪಕ ಸುಮಂತ್ ಕ್ರಾಂತಿ ಮಾತನಾಡಿ ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾ ಮಾಡಿಕೊಟ್ಟಿದ್ದಾರೆ. ಕೆಲವರು ಕಥೆ ಹೇಳುವುದೆ ಬೇರೆ. ಚಿತ್ರ ಮಾಡುವುದೇ ಬೇರೆ. ನಾನು ಇತ್ತೀಚೆಗೆ ಚಿತ್ರ ನೋಡಿದೆ. ಶಿವತೇಜಸ್ ಹೇಳಿದ ರೀತಿಯಲ್ಲೇ ಚಿತ್ರ ಮಾಡಿದ್ದಾರೆ. ನಮ್ಮ"ದಿಲ್ ಪಸಂದ್" ಚಿತ್ರ ಚೆನ್ನಾಗಿದೆ ಎಂದರು. ಸದ್ಯ ಟೀಸಸ್​ನಿಂದಲೇ ಸೌಂಡ್ ಮಾಡುತ್ತಿರುವ ದಿಲ್‌ ಪಸಂದ್ ಸಿನಿಮಾ‌ ನವೆಂಬರ್ 11ಕ್ಕೆ ರಿಲೀಸ್ ಆಗಲಿದೆ.

ಇದನ್ನೂ ಓದಿ:ಸ್ಯಾಂಡಲ್​ವುಡ್​ಗೆ ಮತ್ತೆ ರಮ್ಯ ಚೈತ್ರಕಾಲ.. ಚಿತ್ರದ ಟೈಟಲ್ ಘೋಷಣೆ, ಯಾರು ನಾಯಕ?

ಪ್ರೇಮ ಕಥೆಯೊಂದಿಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನ ಶಿವತೇಜಸ್ ನಿರ್ದೇಶನ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ‌ ನಾಯ್ಡು ಅಲ್ಲದೇ ಮೇಘ ಶೆಟ್ಟಿ, ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ಮಾಡಿರೋ ದಿಲ್ ಪಸಂದ್ ಸಿನಿಮಾದ ನಾಲ್ಕು ಸುಮಧುರ ಹಾಡುಗಳಿಗೆ ಮ್ಯೂಸಿಕ್ ‌ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸಿದ್ದಾರೆ.

ABOUT THE AUTHOR

...view details