ಕರ್ನಾಟಕ

karnataka

ETV Bharat / entertainment

ಕೆಡಿ ಸಿನಿಮಾಕ್ಕಾಗಿ ಬರೊಬ್ಬರಿ 18 ಕೆಜಿ ತೂಕ ಇಳಿಸಿಕೊಂಡ ಆ್ಯಕ್ಷನ್ ಪ್ರಿನ್ಸ್​!: ಅದ್ಧೂರಿ ಆರ್ಭಟ ಹೀಗಿದೆ

ಟೈಟಲ್ ಮತ್ತು ಟೀಸರ್ ಬಿಡುಗಡೆ ಬಳಿಕ ಸಖತ್​ ಸೌಂಡ್​ ಮಾಡುತ್ತಿರುವ ಕೆಡಿ - ನಟೋರಿಯಸ್ ರೌಡಿ ಕಾಳಿಯ ಪಾತ್ರದಲ್ಲಿ ಮಿಂಚಿದ್ದ ಆ್ಯಕ್ಷನ್ ಪ್ರಿನ್ಸ್ - ಮತ್ತೊಂದು ಇಂಟ್ರಸ್ಟಿಂಗ್​ ವಿಷಯವನ್ನು ಬಹಿರಂಗಗೊಳಿದ ಕೆಡಿ ಚಿತ್ರತಂಡ

Action prince who has lost weight
ತೂಕ ಇಳಿಸಿಕೊಂಡ ಆ್ಯಕ್ಷನ್ ಪ್ರಿನ್ಸ್​

By

Published : Jan 11, 2023, 7:32 PM IST

ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ' ಚಂದನವನದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಇತ್ತೀಚೆಗೆ ಅದ್ಧೂರಿ ಟೈಟಲ್​​ ಲಾಂಚ್ ಮಾಡಲಾಗಿತ್ತು. ನಟ ಧ್ರುವ ಸರ್ಜಾ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕ್ರೇಜ್​ ಕ್ರಿಯೆಟ್​ ಮಾಡಿದ್ದರು. ನಟನ ಕಟ್ಟುಮಸ್ತಾದ ನೋಟಕ್ಕೆ ಫಿದಾ ಆಗಿದ್ದರು. ಸದ್ಯ ಚಿತ್ರ ತಂಡ ಮತ್ತೊಂದು ಇಂಟ್ರಸ್ಟಿಂಗ್​ ವಿಷಯವನ್ನು ಬಹಿರಂಗಗೊಳಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ತೂಕ ಇಳಿಸಿಕೊಂಡ ಆ್ಯಕ್ಷನ್ ಪ್ರಿನ್ಸ್​

ಹೌದು, ಇದೀಗ ಈ ಸಿನಿಮಾಕ್ಕಾಗಿ ನಟ ಧ್ರುವ ಸರ್ಜಾ ತಮ್ಮ ದೇಹಕ್ಕೆ ಕೆಲಸ ಕೊಡುವ ಮೂಲಕ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ ಅನ್ನೋದು ಸದ್ಯದ ಮಾಹಿತಿ. ಪೊಗರು ಸಿನಿಮಾಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಧ್ರುವ ಸರ್ಜಾ, ಕೆಡಿ ಪಾತ್ರಕ್ಕಾಗಿ ತಮ್ಮ ದೇಹವನ್ನ ದಂಡಿಸುವ ಮೂಲಕ ತೂಕ ಇಳಿಸಿಕೊಂಡಿದ್ದಾರೆ. ನಿರ್ದೇಶಕ ಪ್ರೇಮ್ ಸಲಹೆ ಮೇರೆಗೆ 30 ದಿನದಲ್ಲಿ ಧ್ರುವ ಸರ್ಜಾ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಸದ್ಯ ಧ್ರುವ ಸರ್ಜಾ ಸಣ್ಣ ಆಗಿರುವ ಫೋಟೋ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ.

ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ರಗಡ್ ಪಾತ್ರಕ್ಕಾಗಿ ದಪ್ಪ ಆಗಿದ್ದರು. ಈಗ ಮತ್ತೆ ಕೆಡಿ ಚಿತ್ರಕ್ಕಾಗಿ ಸಣ್ಣ ಆಗುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸುಮಾರು 60ರ ದಶಕದ ಕಥೆಯನ್ನು ನಿರ್ದೇಶಕ ಪ್ರೇಮ್ ಈ ಚಿತ್ರದ ಮೂಲಕ ಹೇಳಲು ಹೊರಟ್ಟಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ನಿರ್ವಹಿಸುತ್ತಿರುವ ಪಾತ್ರದ ಹೆಸರು ಕಾಳಿ ಅಲಿಯಾಸ್ ಕಾಳಿದಾಸ. ಕಥಾನಾಯಕನ ಹೆಸರನ್ನೇ ತುಂಡರಿಸಿ ಕಥಾ ಹಂದರಕ್ಕೆ ಹೊಂದುವಂತೆ ಕೆಡಿ ಎಂದು ಹೆಸರಿಟ್ಟಿರುವುದು ಚಿತ್ರದ ಮತ್ತೊಂದು ಪ್ಲಸ್​ ಪಾಯಿಂಟ್​ ಅನ್ನಬಹುದು.

ಕೆಡಿ ಚಿತ್ರದ ಪೋಸ್ಟರ್​

ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದೆ. ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ನಟಿಸುತ್ತಿದ್ದು ಕೆಲವು ದಿನಗಳ ಹಿಂದೆ ಅವರ ಫಸ್ಟ್​ ಲುಕ್ ​ಅನ್ನು ರಿವೀಲ್ ಮಾಡಲಾಗಿತ್ತು. ಇವರ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್ ಕೂಡ ಪ್ರಮುಖ ಪಾತ್ರವೊಂದನ್ನು ಮಾಡುತ್ತಿರುವುದು ಚಿತ್ರಕ್ಕೆ ಮತ್ತಷ್ಟು ತೂಕ ಬಂದಂತಾಗಿದೆ. ಹಾಗಾಗಿ ಸ್ಯಾಂಡಲ್​ವುಡ್​ನಿಂದ ಇದೊಂದು ಜಬರ್ದಸ್ತ್​ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಬರುತ್ತಿದೆ ಎಂದು ಸೌತ್​ ಸಿನಿಮಾ ಇಂಡಸ್ಟ್ರಿ ಮಾತನಾಡಿಕೊಳ್ಳುತ್ತಿದೆ. ಸದ್ಯಕ್ಕೆ ಧ್ರುವ ಸರ್ಜಾ ಸಣ್ಣ ಆಗಿರುವುದನ್ನು ನೋಡಿದರೆ ಈ ಚಿತ್ರದಲ್ಲಿ ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ಮೂಡತೊಡಗಿದೆ. ಆದರೆ, ಚಿತ್ರತಂಡ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಈ ಕೆಡಿ ಜೊತೆಗೆ ಮಾಲಾಶ್ರೀ ಮಗಳು ರಾಧನ್ ರಾಮ್ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ ಅಂತಾ ಹೇಳಲಾಗಿದೆ. ಆದರೆ, ನಿರ್ದೇಶಕ ಪ್ರೇಮ್ ಮಾತ್ರ ನಾಯಕಿ ಬಗ್ಗೆ ಈ ವರೆಗೆ ಎಲ್ಲಿಯೂ ಸುಳಿವು ನೀಡಿಲ್ಲ. ಮತ್ತೊಂದು ಕಡೆ ಶೂಟಿಂಗ್ ಹಂತದಲ್ಲೇ ಬೇಡಿಕೆ ಹೆಚ್ಚಿಸಿಕೊಂಡಿರುವ ಕೆಡಿ ಸಿನಿಮಾ ವಿತರಣಾ ಹಕ್ಕುಗಳನ್ನು ಮಾರಾಟ ಸಹ ಮಾಡಿದೆ.

ಕೆಜಿಎಫ್ ಮತ್ತು ಕಾಂತಾರ ಅಂತಹ ಸಿನಿಮಾಗಳನ್ನ ವಿತರಣೆ ಮಾಡಿರುವ ಬಾಲಿವುಡ್ ನಿರ್ಮಾಪಕ ಅನಿಲ್ ಥಡಾನಿ ಹಾಗೂ ತೆಲುಗಿನಲ್ಲಿ ಸಾಯಿ ಕೊರಪಟ್ಟಿಯವರ ವಾರಾಹಿ ಈ ಚಿತ್ರವನ್ನು ತೆಲುಗಿನಲ್ಲಿ ವಿತರಿಸಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ಕೆವಿಎನ್ ಪ್ರೋಡಕ್ಷನ್ ಅಡಿ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ನಿರ್ಮಾಣವಾಗುತ್ತಿದೆ. ಕೆಡಿ ಸಿನಿಮಾವನ್ನ ನಿರ್ದೇಶಕ ಪ್ರೇಮ್ ಸಂಪೂರ್ಣವಾಗಿ ರೆಟ್ರೋ ಶೈಲಿಯಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗುತ್ತಿದೆ.

ಇದನ್ನೂ ಓದಿ:ಕಾಂತಾರ ಚಿತ್ರದ ಜೊತೆಗೆ ಪ್ರತಿಷ್ಠಿತ ಆಸ್ಕರ್ ರೇಸ್​​ ಪ್ರವೇಶ ಪಡೆದ ವಿಕ್ರಾಂತ್ ರೋಣ!

ABOUT THE AUTHOR

...view details