ಕರ್ನಾಟಕ

karnataka

ETV Bharat / entertainment

ಅಭಿಮಾನಿಗಳೊಂದಿಗೆ ಅಮೀರ್ ಖಾನ್​​.. ನೆಟ್ಟಿಗರ ಮನಗೆದ್ದ ಸೂಪರ್​ ಸ್ಟಾರ್​ ವಿಡಿಯೋ ನೋಡಿ - Aamir Khan video

Aamir Khan with Fans: ನಟ ಅಮೀರ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Aamir Khan
ಅಮೀರ್ ಖಾನ್​​

By ETV Bharat Karnataka Team

Published : Oct 5, 2023, 11:31 AM IST

ಮಿಸ್ಟರ್​ ಪರ್ಫೆಕ್ಷನಿಷ್ಟ್ ಖ್ಯಾತಿಯ ಬಾಲಿವುಡ್ ಸೂಪರ್‌ ಸ್ಟಾರ್ ಅಮೀರ್ ಖಾನ್ ಸದ್ಯ ತಮ್ಮ ಸಂಪೂರ್ಣ ಸಮಯವನ್ನು ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ಕುಟುಂಬಸ್ಥರೊಂದಿಗೆ ಗುಣಮಟ್ಟದ ಸಮಯ ಕಳೆಯಲು ಸಿನಿಮಾಗಳಿಂದ ವಿರಾಮ ಪಡೆದಿದ್ದಾರೆ. ವಿಶೇಷವಾಗಿ ತಮ್ಮ ಮೂವರು ಮಕ್ಕಳಾದ ಜುನೈದ್ ಖಾನ್, ಇರಾ ಖಾನ್ ಮತ್ತು ಅಜಾದ್ ರಾವ್ ಖಾನ್ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಎಂದು ನಂಬಲಾಗಿದೆ. ಆದಾಗ್ಯೂ, ಸೂಪರ್‌ ಸ್ಟಾರ್ ಸುದ್ದಿಯಲ್ಲಿದ್ದಾರೆ. ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಜನಮನದಲ್ಲಿ ಅದೇ ಸ್ಥಾನ ಉಳಿಸಿಕೊಂಡಿದ್ದಾರೆ.

ಅಭಿಮಾನಿಗಳೊಂದಿಗೆ ಅಮೀರ್ ಖಾನ್​​.. ಬುಧವಾರ ರಾತ್ರಿ ಬಹುಬೇಡಿಕೆ ನಟ ಅಮೀರ್ ಖಾನ್ ಮುಂಬೈನ ರೆಸ್ಟೋರೆಂಟ್‌ ಒಂದರಲ್ಲಿ ಕಾಣಿಸಿಕೊಂಡರು. ರೆಸ್ಟೋರೆಂಟ್​​ ಪ್ರವೇಶಿಸುವ ಮುನ್ನ ತಮ್ಮ ಅಭಿಮಾನಿಗಳೊಂದಿಗೆ ಮಾತನಾಡಿದರು. ಫ್ಯಾನ್ಸ್ ಕೈ ಕುಲುಕಿಸಿ, ಮುಗುಳ್ನಗೆ ಬೀರಿ ಮುನ್ನಡೆದರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.

ಮಿಲಿಯನ್ ಡಾಲರ್ ಸ್ಮೈಲ್​ನಲ್ಲಿ ಅಮೀರ್​ ಖಾನ್​: ಪಾಪರಾಜಿಗಳು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ನಟ ಅಮೀರ್​ ಖಾನ್​ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಆನ್​​ಲೈನ್​ಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ನಟ ಅಭಿಮಾನಿಗಳಿಗೆ ಸ್ಪಂದಿಸುವ ವೇಳೆ ಮಿಲಿಯನ್ ಡಾಲರ್ ಸ್ಮೈಲ್​ನಲ್ಲಿ ಕಾಣಿಸಿಕೊಂಡರು. ರೆಸ್ಟೋರೆಂಟ್‌ ಪ್ರವೇಶಿಸುವ ಮುನ್ನ ಪಾಪರಾಜಿಗಳ, ಅಭಿಮಾನಿಗಳ ಕ್ಯಾಮರಾಗೆ ಪೋಸ್ ನೀಡಿದರು. ದಂಗಲ್ ಸ್ಟಾರ್ ಎಂದಿನಂತೆ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ:ದಿ ಆರ್ಚೀಸ್: ವೆರೋನಿಕಾ ಪಾತ್ರದಲ್ಲಿ ಸುಹಾನಾ ಖಾನ್​​: ಶಾರುಖ್​ ಪುತ್ರಿಯ ಚೊಚ್ಚಲ ಚಿತ್ರದ ಅನುಭವ ಹೇಗಿತ್ತು?

ವಿಡಿಯೋ ಶೇರ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಸೆಕ್ಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಕಾಮೆಂಟ್​ ವಿಭಾಗದಲ್ಲಿ ಫ್ಯಾನ್ಸ್, ನಟನ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ''ಭಾರತೀಯ ಚಿತ್ರರಂಗದಲ್ಲಿ ಕೆಲ ಅತ್ಯುತ್ತಮ ಸಿನಿಮಾಗಳನ್ನು ನೀಡಿದ ವ್ಯಕ್ತಿ'' ಎಂದು ನೆಟ್ಟಿಗರೋರ್ವರು ಬರೆದಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೋರ್ವರು "ದ್ವೇಷಿಗಳು ದ್ವೇಷಿಸುತ್ತಾರೆ, ಆದರೆ ಅವರು ಮಿಸ್ಟರ್ ಪರ್ಫೆಕ್ಷನ್" ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳೆಕದಾರರೋರ್ವರು ಪ್ರತಿಕ್ರಿಯಿಸಿ, "ನನ್ನ ಮೆಚ್ಚಿನ ಅಮೀರ್ ಖಾನ್, ನಾನು ಅಮೀರ್ ಖಾನ್ ಸಿನಿಮಾಗಳನ್ನು ಇಷ್ಟಪಡುತ್ತೇನೆ" ಎಂದು ಬರೆದಿದ್ದಾರೆ. "ಅವರು ತಮ್ಮ ಅಭಿಮಾನಿಗಳಿಗೆ ಸ್ಪಂದಿಸುವ ರೀತಿ ಅದ್ಭುತವಾಗಿದೆ" ಎಂದು ಓರ್ವರು ತಿಳಿಸಿದ್ದಾರೆ. ಉಳಿದಂತೆ ಕಾಮೆಂಟ್​ ಸೆಕ್ಷನ್​​ ಫೈಯರ್​, ರೆಡ್ ಹಾರ್ಟ್ ಎಮೋಜಿಯೊಂದಿಗೆ ತುಂಬಿ ತುಳುಕುತ್ತಿದೆ.

ಇದನ್ನೂ ಓದಿ:ಹೊಸಬರ 'ವೇಷ' ಚಿತ್ರಕ್ಕೆ ಸಿಕ್ತು ವಿನೋದ್ ಪ್ರಭಾಕರ್ ಸಾಥ್

ಅದ್ವೈತ್ ಚಂದನ್ ನಿರ್ದೇಶನದ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬಾಲಿವುಡ್​ ಬೇಬೋ ಕರೀನಾ ಕಪೂರ್ ಖಾನ್ ಜೊತೆಗೆ ಅಮೀರ್ ಖಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸದ್ಯ ಸಿನಿಮಾಗಳಿಂದ ಸಣ್ಣ ಬ್ರೇಕ್​ ಪಡೆದಿದ್ದಾರೆ. ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಪ್ರಕಾರ, ನಟನ ಮುಂದಿನ ಚಿತ್ರ 2024ರ ಕ್ರಿಸ್ಮಸ್​ ಸಂದರ್ಭ ತೆರೆಕಾಣಲಿದೆ. 2024ರ ಜನವರಿಗೆ ಚಿತ್ರ ಸೆಟ್ಟೇರಲಿದೆ ಎಂದು ವರದಿಯಾಗಿದೆ. ಸಿನಿಮಾ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದ್ದು, ಅಧಿಕೃತ ಘೋಷಣೆಗೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details