ಬಾಲಿವುಡ್ ಸೂಪರ್ಸ್ಟಾರ್ ಅಮೀರ್ ಖಾನ್ ಮತ್ತು ಅವರ ಮಗ ಆಜಾದ್ ರಾವ್ ಖಾನ್ ಮಾವಿನ ಹಣ್ಣುಗಳನ್ನು ಸವಿಯುತ್ತಿರುವ ಕ್ಯೂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಿನಿಮಾದ ಒತ್ತಡದಿಂದ ನಾನು ನನ್ನ ಕುಟುಂಬವನ್ನು ಲಘುವಾಗಿ ತೆಗೆದುಕೊಂಡೆ ಎಂದು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಅವರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ಫೋಟೋ ವೈರಲ್ ಆಗಿದೆ.
ಮಾಡಿದ ತಪ್ಪು ತಿದ್ದಿಕೊಳ್ಳುತ್ತಿದ್ದಾರೆಯೇ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್?
ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರು ತಮ್ಮ ಕುಟುಂಬ ಸದಸ್ಯರನ್ನು ಲಘುವಾಗಿ ತೆಗೆದುಕೊಂಡ ಬಳಿಕ ಇದೀಗ ಹಿಂತಿರುಗಿ ನೋಡುತ್ತಿದ್ದಾರೆ. ಚಿತ್ರಗಳಲ್ಲಿ ತಂದೆ-ಮಗ ಇಬ್ಬರು ಮಾವಿನ ಹಣ್ಣನ್ನು ಸವಿಯುತ್ತಿದ್ದು, ಆ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಅಮೀರ್ ಅಂದದ ಶೀರ್ಷಿಕೆ ಕೂಡ ಹಾಕಿಕೊಂಡಿದ್ದಾರೆ..
ಮಕ್ಕಳ ಜೊತೆ ಸಮಯ ಕಳೆಯದಿರುವುದು ನನ್ನ ದೊಡ್ಡ ತಪ್ಪು ಎಂದು ಈವರೆಗೆ ಆಗಿರುವ ಪ್ರಮಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಂದು ಈ ಫೋಟೋಗಳ ಮೂಲಕ ಅರ್ಥೈಸಿಕೊಳ್ಳಬಹುದು. ಮಗ ಆಜಾದ್ ಜೊತೆ ಕುಳಿತು ಮಾವಿನ ಹಣ್ಣನ್ನು ತಿನ್ನುತ್ತಾ ಹರಟೆ ಹೊಡೆಯುತ್ತಿರುವ ಫೋಟೋಗಳನ್ನು ಖಾನ್, ತಮ್ಮ ಪ್ರೊಡಕ್ಷನ್ ಬ್ಯಾನರ್ ಅಮೀರ್ ಖಾನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ತಂದೆ-ಮಗ ಇಬ್ಬರು ಮಾವಿನ ಹಣ್ಣನ್ನು ಸವಿಯುತ್ತಿರುವುದನ್ನು ಕಾಣಬಹುದು. ಫೋಟೋ ಜೊತೆಗೆ ಅಮೀರ್ ಅಂದದ ಶೀರ್ಷಿಕೆ ಕೂಡ ಹಾಕಿಕೊಂಡಿದ್ದಾರೆ.
ಆಜಾದ್ ಅಮೀರ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರ ಮಗ. ಇತ್ತೀಚೆಗೆ ಕಿರಣ್ ರಾವ್ ಮತ್ತು ಅಮೀರ್ ಖಾನ್ ಪರಸ್ಪರ ವಿಚ್ಛೇದನ ತೆಗೆದುಕೊಳ್ಳುವ ಮೂಲಕ ತಮ್ಮ 15 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದರು. ತಮ್ಮ ಮಗ ಆಜಾದ್ನನ್ನು ಸಹ-ಪೋಷಕರಾಗಿ ಮುಂದುವರಿಸುವುದಾಗಿ ಅಂದು ಹೇಳಿಕೊಂಡಿದ್ದರು. ಸದ್ಯ ಇಬ್ಬರು ಬೇರೆ ಬೇರೆಯಾಗಿದ್ದರೂ ಅಮೀರ್ ಆಗಾಗ ಈ ತರಹದ ಖುಷಿ ವಿಚಾರವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಅಮೀರ್ ಖಾನ್ ಮೂವರು ಮಕ್ಕಳ ತಂದೆಯಾಗಿದ್ದು, ಮೊದಲ ಪತ್ನಿ ರೀನಾ ದತ್ತಾ ಅವರೊಂದಿಗೆ ಇರಾ ಮತ್ತು ಜುನೈದ್ ಖಾನ್ ಅವರನ್ನು ಹೊಂದಿದ್ದಾರೆ.