ಲಾಸ್ ಏಂಜಲೀಸ್: 'ಲೈಫ್ ಆಫ್ ಪೈ', 'ಬ್ರೋಕ್ಬ್ಯಾಕ್ ಮೌಂಟೆನ್'ನಂತಹ ಪ್ರಖ್ಯಾತ ಚಿತ್ರ ನಿರ್ದೇಶಿಸಿದ ಆಸ್ಕರ್ ವಿಜೇತ ನಿರ್ದೇಶಕ ಆಂಗ್ ಲೀ ಇದೀಗ 'ಬ್ರೂಸ್ ಲೀ' ಜೀವನಾಧಾರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಬ್ರೂಸ್ ಲೀ ಪಾತ್ರವನ್ನು ಆಂಗ್ ಲೀ ಮಗ ಮ್ಯಾಸನ್ ಲೀ ನಿರ್ವಹಿಸಲಿದ್ದಾರೆ. ಜೀನ್ ಕ್ಯಾಸ್ಟಲೀ, ಅಲೆಕ್ಸ್ ಲಾ ಮತ್ತು ಮಬೆಲ್ ಚೆಂಗ್ ವೆಲ್ ಟವರ್ ಈ ಮುಂಚೆೆ ಚಿತ್ರಕತೆ ರಚಿಸಿದ್ದು, ಈ ಕಥೆಯನ್ನು ಡ್ಯಾನ್ ಫುಟ್ಟರ್ಮ್ಯಾನ್ ಅಳವಡಿಸಿಕೊಳ್ಳಲಿದ್ದಾರೆ.
ಚೀನೀ ಅಮೆರಿಕನ್ ಮಾರ್ಷಲ್ ಆರ್ಟ್ ದಂತಕಥೆಯಾಗಿದ್ದ ಬ್ರೂಸ್ ಲೀ 32ನೇ ವಯಸ್ಸಿನಲ್ಲಿ 1973ರಲ್ಲಿ ಸಾವನ್ನಪ್ಪಿದರು. 'ಫಸ್ಟ್ ಆಫ್ ಪ್ಯೂರಿ', 'ಎಂಟರ್ ದ ಟ್ರಗನ್' ಮತ್ತು 'ದಿ ವೇ ಆಫ್ ದಿ ಡ್ರಾಗನ್' ಅವರ ಪ್ರಮುಖ ಚಿತ್ರಗಳಾಗಿವೆ. 1960 ಮತ್ತು 70ಕ್ಕೆ ಮುಂಚೆ ಪ್ರಪಂಚದಾದ್ಯಂತ ಖ್ಯಾತಿಗೊಂಡಿದ್ದ ದಿ ಗ್ರೀನ್ ಹೊರ್ನೆಟ್ ಟಿವಿ ಸೀರಿಸ್ ಅಲ್ಲೂ ಅವರು ಜನಮನ್ನಣೆ ಗಳಿಸಿದ್ದರು.
ಸಂಪೂರ್ಣವಾಗಿ ಅಮೆರಿಕನ್ ಅಲ್ಲದ, ಸಂಪೂರ್ಣವಾಗಿ ಚೀನಿ ಅಲ್ಲ ಎಂದು ಸ್ವೀಕರಿಸಿದ್ದ ಬ್ರೂಸ್ ಲೀ ಪೂರ್ವ ಮತ್ತು ಪಶ್ಚಿಮಗಳ ಸೇತುವೆಯಾಗಿ ಕುಂಗ್ ಫೂ ಎನ್ನು ಜಗತ್ತಿಗೆ ಪರಿಚಯಿಸಿದ್ದರು. ಮಾರ್ಷಲ್ ಆರ್ಟ್ಸ್ ಮತ್ತು ಆ್ಯಕ್ಷನ್ ಚಿತ್ರಗಳಲ್ಲಿ ಅದ್ಬುತ ನಟನೆ ಮೂಲಕ ಅವರು ಕ್ರಾಂತಿ ಮಾಡಿದರು ಎಂದು ಆಂಗ್ ಲೀ ತಿಳಿಸಿದ್ದಾರೆ.