ಮುಂಬೈ :ಜುಲೈ 28 ರಂದು ಚಿತ್ರಮಂದಿರಗಳಲ್ಲಿತೆರೆ ಕಾಣಲು ತಯಾರಿ ನಡೆಸಿರುವ ಬಾಲಿವುಡ್ನ ಸಖತ್ ರೋಮ್ಯಾಂಟಿಕ್ ಹಾಗೂ ಹಾಸ್ಯ ಭರಿತ ಚಿತ್ರವಾದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಯ 'ವಾಟ್ ಜುಮ್ಕಾ' ಎಂಬ ಎರಡನೇ ಹಾಡನ್ನು ನಿರ್ಮಾಪಕರು ಬುಧವಾರ ಅನಾವರಣಗೊಳಿಸಿ ದ್ದಾರೆ. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ಇದಾಗಿದ್ದು, ಮುಖ್ಯ ಭೂಮಿಕೆಯಲ್ಲಿ ನಟ ರಣವೀರ್ ಸಿಂಗ್ ಮತ್ತು ಬಹುಬೇಡಿಕೆ ನಟಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.
ವಾಟ್ ಜುಮ್ಕಾ ಹಾಡಿಗೆ ಅರಿಜಿತ್ ಸಿಂಗ್ ಮತ್ತು ಜೋನಿತಾ ಗಾಂಧಿ ಧ್ವನಿಗೂಡಿಸಿದ್ದು, ಸಾಹಿತ್ಯವನ್ನು ಅಮಿತಾಬ್ ಭಟ್ಟಾಚಾರ್ಯ ಬರೆದಿದ್ದಾರೆ. ಕರಣ್ ಜೋಹರ್ ಹಾಡನ್ನು ಅನಾವರಣಗೊಳಿಸಿದ ನಂತರ, ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಅಭಿಪ್ರಾಯಗಳು ಸಂಗ್ರಹವಾಗುತ್ತಿವೆ. ಹಾಡಿಗೆ ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ರೆಡ್ ಹಾರ್ಟ್ ಮತ್ತು ಫೈರ್ ಎಮೋಜಿಗಳನ್ನು ತುಂಬುತ್ತಿದ್ದಾರೆ.
ಇಷ್ಟೆಲ್ಲ ಪ್ರತಿಕ್ರಿಯೆ ಮಧ್ಯೆ ಕೆಲವರು ರಣಬೀರ್ ಕಪೂರ್ ಅವರ ಚಿತ್ರವೊಂದರ 'ತೂ ಜೂತಿ ಮೈನ್ ಮಕ್ಕರ್ ಸಾಂಗ್ ಶೋ ಮೀ ದಿ ತುಮ್ಕಾ' ಹಾಡಿನಲ್ಲಿ ಡ್ಯಾನ್ಸ್ ಮಾಡಿರುವಂತೆ ರಣವೀರ್ ಕೂಡ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆಲಿಯಾ ಭಟ್ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನೊಬ್ಬ ರಣಬೀರ್ ಕಾ ತುಮ್ಕಾ, ಅಲಿಯಾ ಕಾ ಜುಮ್ಕಾ. ಎಂದು ಕಾಮೆಂಟ್ ಬರೆದಿದ್ದಾರೆ. ಇಬ್ಬರು ನಟರ ಡ್ಯಾನ್ ನೋಡಿ ಮತ್ತೊಬ್ಬ ಅಭಿಮಾನಿ "ರಣಬೀರ್ ಡ್ಯಾನ್ಸ್ ತುಮ್ಕಾ ರಣವೀರ್ ಜುಮ್ಕಾದಲ್ಲಿ ಡ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಹೀಗೆ ಅನೇಕರು ರಣವೀರ್ ಸಿಂಗ್ ಅವರ ಡ್ಯಾನ್ಸ್ ಮೂಮೆಂಟ್ಗಳನ್ನು ರಣಬೀರ್ ಕಪೂರ್ ಅವರೊಂದಿಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ.