ಕರ್ನಾಟಕ

karnataka

ETV Bharat / entertainment

ಆಸ್ಕರ್ ರೇಸ್‌ನಲ್ಲಿರುವ ಚೆಲ್ಲೋ ಶೋ ಚಿತ್ರದ ಬಾಲ ಪ್ರತಿಭೆ ರಾಹುಲ್​ ವಿಧಿವಶ - ಆಸ್ಕರ್​ 2023ಕ್ಕೆ ಭಾರತದಿಂದ ಅಧಿಕೃತ ಪ್ರವೇಶ

ಚಿತ್ರರಂಗದಲ್ಲಿ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಭಾರತದ ಪರವಾಗಿ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿಗೆ ಪ್ರವೇಶಿಸುತ್ತಿರುವ ಗುಜರಾತಿ ಚಿತ್ರ ‘ಚೆಲ್ಲೋ ಶೋ’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ರಾಹುಲ್ ಕೋಲಿ ವಿಧಿವಶರಾಗಿದ್ದಾರೆ.

child actor rahul koli passes away  chhello show child actor rahul koli passes away  oscars entry chhello show movie  ಆಸ್ಕರ್ ರೇಸ್‌ನಲ್ಲಿರುವ ಚೆಲೋ ಶೋ ಚಿತ್ರ  ಚೆಲೋ ಶೋ ಚಿತ್ರದ ಬಾಲ ಪ್ರತಿಭೆ ರಾಹುಲ್​ ಇನ್ನಿಲ್ಲ  ಚಿತ್ರರಂಗದಲ್ಲಿ ದುಃಖದ ಸುದ್ದಿ  ರಾಹುಲ್ ಕೋಲಿ ವಿಧಿವಶ  ಲಾಸ್ಟ್ ಫಿಲ್ಮ್ ಶೋ  ಆಸ್ಕರ್​ 2023ಕ್ಕೆ ಭಾರತದಿಂದ ಅಧಿಕೃತ ಪ್ರವೇಶ
ಬಾಲ ಪ್ರತಿಭೆ ರಾಹುಲ್​ ಇನ್ನಿಲ್ಲ

By

Published : Oct 11, 2022, 11:42 AM IST

Updated : Oct 13, 2022, 6:29 AM IST

ಚೆನ್ನೈ (ತಮಿಳುನಾಡು):ಲಾಸ್ಟ್ ಫಿಲ್ಮ್ ಶೋ (ಚೆಲ್ಲೋ ಶೋ) ಸಿನಿಮಾವು ಆಸ್ಕರ್​ 2023ಕ್ಕೆ ಭಾರತದಿಂದ ಅಧಿಕೃತ ಪ್ರವೇಶವಾಗಿದೆ. ಈ ಸಿನಿಮಾವನ್ನು ತಯಾರಕರು 95 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಅದು ಕೂಡ ಬಿಡುಗಡೆ ಒಂದು ದಿನ ಬಾಕಿ ಇರುವಾಗಲೇ. ಅಲ್ಲದೇ ಸಿನಿಮಾದ ಟಿಕೆಟ್ ​ದರವನ್ನು 95 ರೂ.ಗೆ ನಿಗದಿಪಡಿಸಿದ್ದಾರೆ. ಆದ್ರೆ ಚಿತ್ರ ಬಿಡುಗಡೆಗೂ ಮುನ್ನ ದುಃಖದ ಸುದ್ದಿಯೊಂದು ಹೊರ ಬಿದ್ದಿದೆ.

ಹೌದು, ಚೆಲ್ಲೋ ಶೋ ಸಿನಿಮಾ ತಯಾರಕರು ಅಕ್ಟೋಬರ್ 13 ಅಂದರೆ ಗುರುವಾರದ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಗುಜರಾತಿ ಭಾಷೆಯಲ್ಲಿರುವ ಸಿನಿಮಾ ಶುಕ್ರವಾರ (ಅಕ್ಟೋಬರ್14) ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ 15 ವರ್ಷದ ಬಾಲಕ ರಾಹುಲ್​ ಕೋಲಿ ಇನ್ನಿಲ್ಲ. ಅವರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

95ನೇ ಆಸ್ಕರ್​ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆ 95 ಚಿತ್ರಮಂದಿರಗಳಲ್ಲಿ, 95 ರೂಪಾಯಿಗಳ ಟಿಕೆಟ್ ದರದಲ್ಲಿ ಸಿನಿಮಾ ನೋಡಬಹುದಾಗಿದೆ. ಈ ವಿಷಯವನ್ನು ನಿರ್ದೇಶಕ ಪಾನ್ ನಳಿನ್ ಹಂಚಿಕೊಂಡಿದ್ದು, ನಮ್ಮ ಕೊನೆಯ ಚಿತ್ರ ಪ್ರದರ್ಶನ ('ಚೆಲ್ಲೋ ಶೋ') ಸಿನಿಮಾ ನೋಡಲು ಅಭಿಮಾನಿಗಳು ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಹಾಗಾಗಿ ನಾವು ಗುರುವಾರ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಓದಿ:ಆಸ್ಕರ್ ರೇಸ್‌ನಲ್ಲಿರುವ 'ಚೆಲೋ ಶೋ' ಚಿತ್ರದ ನಿರ್ದೇಶಕ ಓರ್ವ ವಿಡಿಯೋಗ್ರಾಫರ್‌! ನಿರ್ದೇಶಕ ನಳಿನ್ ಸಿನಿ ಪಯಣ ಇನ್ನೂ ರೋಚಕ

Last Updated : Oct 13, 2022, 6:29 AM IST

ABOUT THE AUTHOR

...view details