ಕರ್ನಾಟಕ

karnataka

ETV Bharat / elections

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಾಲಮನ್ನಾ ಆಗಿದೆಯಾ : ಮುರುಳೀಧರ್ ಹಾಲಪ್ಪ ಪ್ರಶ್ನೆ - ಮೋದಿ

1947 ರಿಂದ ಇಲ್ಲಿವರೆಗಿನ ಯಾವುದೇ ಸರಕಾರಗಳು ರೈತರ ಮೇಲೆ ತೆರಿಗೆ ಹಾಕಿಲ್ಲ. ಆದರೆ, ಮೋದಿಯವರು ರೈತರ ಗೊಬ್ಬರ, ಬಿತ್ತನೆ ಬೀಜ, ಯಂತ್ರೋಪಕರಣಗಳ ಮೇಲೆ ತೆರಿಗೆ ಹಾಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಮುರುಳೀಧರ್ ಹಾಲಪ್ಪ ವಾಗ್ದಾಳಿ ನಡೆಸಿದ್ದಾರೆ.

ಹಾಲಪ್ಪ

By

Published : Apr 21, 2019, 10:27 PM IST



ಶಿವಮೊಗ್ಗ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎಷ್ಟು ಮಂದಿ ರೈತರ ಸಾಲಮನ್ನಾ ಆಗಿದೆ, ಮೋದಿ ಸರ್ಕಾರ ಬಂದರೆ ಮುಂದಿನ ದಿನಗಳಲ್ಲಿ ಚುನಾವಣೆಗಳೇ ನಡೆಯುವುದಿಲ್ಲ ಎಂದು ಹೇಳಲಾಗುತ್ತಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಪ್ರಧಾನಿ ಮೋದಿ ವಿರುದ್ಧ ಕೆಪಿಸಿಸಿ ವಕ್ತಾರ ಮುರುಳೀಧರ್ ಹಾಲಪ್ಪ ಕಿಡಿ ಕಾರಿದ್ದಾರೆ.

ಇಂದಿರಾ ಗಾಂಧಿಯವರ ಗರೀಬಿ ಹಠಾವೋ ಯೋಜನೆಯಂತೆ ರಾಹುಲ್ ಗಾಂಧಿ ಕೂಡ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಪಡಿಸುವ ನ್ಯಾಯ್ ಯೋಜನೆ ಜಾರಿಗೆ ತಂದಿದ್ದಾರೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು ಬಡ ಮಹಿಳೆಯರ ಅಕೌಂಟ್‌ಗೆ ಈ ಹಣ ನೇರವಾಗಿ ಜಮೆ ಆಗಲಿದೆ. ಬಡವರಿಗೆ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಕೊಟ್ಟಿದೆ. ಆದರೆ, ಜಿಎಸ್‌ಟಿ ಜಾರಿಯಿಂದ ಜನಸಾಮಾನ್ಯರಿಗೆ ತೊಂದರೆಯಾಯಿತು. ನೋಟು ಅಮಾನ್ಯೀಕರಣದಿಂದ ಕೈಗಾರಿಕೆಗಳು ಮುಚ್ಚಲ್ಟಟ್ಟವು, ಆರ್‌ಬಿಐ ನಿರ್ದೇಶಕರೇ ರಾಜೀನಾಮೆ ಕೊಟ್ಟರು.

ಮೋದಿ ಸರ್ಕಾರದ ನಡೆಯ ವಿರುದ್ಧ ಕಾಂಗ್ರೆಸ್ ಮುಖಂಡ ಮುರಳೀಧರ್ ಹಾಲಪ್ಪ ವಾಗ್ದಾಳಿ

1947 ರಿಂದ ಈವರೆಗಿನ ಯಾವುದೇ ಸರಕಾರಗಳು ರೈತರ ಮೇಲೆ ತೆರಿಗೆ ಹಾಕಿಲ್ಲ. ಆದರೆ, ಮೋದಿಯವರು ರೈತರ ಗೊಬ್ಬರ, ಬಿತ್ತನೆ ಬೀಜ, ಯಂತ್ರೋಪಕರಣಗಳ ಮೇಲೆ ತೆರಿಗೆ ಹಾಕಿದ್ದಾರೆ. ಇದಕ್ಕೆ ರೈತರು ಈ ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ ಎಂದರು.
ಫಸಲ್‌ಭೀಮಾ ಯೋಜನೆಯಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾವಿರಾರು ಕೋಟಿ ಲಾಭವಾಗಿದೆ. ಆದರೆ, ರೈತರಿಗೆ ಸಿಕ್ಕಿದ್ದು 400 ಕೋಟಿ ಮಾತ್ರ. ರೈತ ಸಮ್ಮಾನ್ ಯೋಜನೆಗೆ ನೂರಾರು ಕಾನೂನುಗಳಿವೆ, ಅದು ಎಲ್ಲ ರೈತರಿಗೂ ಸಿಗುವುದಿಲ್ಲ. ಮೋದಿ ಅವರು ಎಷ್ಟು ಜನರ ಅಕೌಂಟ್‌ಗೆ ಹಣ ಹಾಕಿದ್ದಾರೆ ಕೇಳಬೇಕು ಎಂದು ಮುರುಳೀಧರ್ ಹಾಲಪ್ಪ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details