ಕೊಪ್ಪಳ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 12 ರಂದು ಜಿಲ್ಲೆಯ ಗಂಗಾವತಿ ನಗರಕ್ಕೆ ನರೇಂದ್ರ ಮೋದಿ ಆಗಮಿಸಲಿದ್ದು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವೇದಿಕೆ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಯಿತು.
ಎಪ್ರಿಲ್ 12 ರಂದು ಗಂಗಾವತಿಗೆ ಮೋದಿ - kannada news
ಎಪ್ರಿಲ್ 12 ರಂದು ಗಂಗಾವತಿ ನಗರಕ್ಕೆ ಮೋದಿ ಆಗಮಿಸಲಿದ್ದು ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.
ಎಪ್ರಿಲ್ 12 ರಂದು ಗಂಗಾವತಿಗೆ ಮೋದಿ
ನಗರದ ಹೊರವಲಯದಲ್ಲಿರುವ ರೈಲ್ವೆ ಸ್ಟೇಷನ್ ಬಳಿಯ ವೇದಿಕೆ ನಿರ್ಮಾಣಕ್ಕೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಹಾಗೂ ಬಿಜೆಪಿ ಮುಖಂಡರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಭೂಮಿಪೂಜೆ ಮಾಡುವ ಸ್ಥಳಕ್ಕೆ ಚುನಾವಣಾಧಿಕಾರಿಗಳು ಭೇಟಿ ನೀಡಿದರು.