ಕರ್ನಾಟಕ

karnataka

ETV Bharat / elections

ಧಾರವಾಡ ಲೋಕಸಭಾ ಕ್ಷೇತ್ರ: ಮೊದಲ‌ ಚುನಾವಣೆಯಿಂದ ಇಲ್ಲಿವರೆಗಿನ ಹಿನ್ನೋಟ - Dharwad Lok Sabha

ರಾಷ್ಟ್ರದಲ್ಲಿ ಲೋಕಸಭಾ ಚುನಾವಣಾ ಅಖಾಡ ಬಲು ಜೋರಾಗಿದೆ. ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದು ಹಗಲು ರಾತ್ರಿ ಎನ್ನದೇ ಪ್ರಚಾರ ನಡೆಸಿ ಮತ ಭೇಟೆಯನ್ನು ನಡೆಸುತ್ತಿದ್ದಾರೆ. ಹಾಗೆಯೇ ಧಾರವಾಡ ಲಿಕ ಸಭಾ ಕ್ಷೇತ್ರದ ಇತಿಹಾಸವನ್ನು ನೋಡಿದ್ರೆ ಯಾವೆಲ್ಲ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ ಎಂಬ ಸಂಪೂರ್ಣ ಮಾಹಿಹಿತಿ ಇಲ್ಲಿದೆ.

ಧಾರವಾಡ ಲೋಕಸಭಾ ಕ್ಷೇತ್ರ

By

Published : Apr 19, 2019, 7:15 PM IST

1)1954 -ಕಾಂಗ್ರೆಸ್, ಕೆಎಂಪಿಪಿಯಿಂದ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕೆಎಂಪಿಪಿ ಅಭ್ಯರ್ಥಿ ಸಿ.ಟಿ. ಕಂಬಳಿ ಅವರು 82,206 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಡಿ.ಪಿ. ಕರಮಕರ ಅವರು 1,29,077 ಮತಗಳನ್ನು ಪಡೆದು ಕೆಎಂಪಿಪಿ ಅಭ್ಯರ್ಥಿ ಸಿ.ಟಿ. ಕಂಬಳಿ ಅವರನ್ನು ಪರಾಭವಗೊಳಿಸಿದ್ದರು.

2)1956 - ಕಾಂಗ್ರೆಸ್, ಪಕ್ಷೇತರ, ಭಾಜಸಂ ನ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿ ಬಿ.ಎನ್. ಮುನವಳ್ಳಿ 58,259 ಮತಗಳನ್ನು, ಭಾಜಸಂ ಅಭ್ಯರ್ಥಿ ಜಗನಾಥ್​ರಾವ್ ಎ. ಜೋಷಿ 26,106 ಮತಗಳನ್ನು, ಕಾಂಗ್ರೆಸ್ ಅಭ್ಯರ್ಥಿಯಾದ ಡಿ.ಪಿ. ಕರಮಕರ 1,23,622 ಮತಗಳನ್ನು ಗಳಿಸಿ 2ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು.

3)1962 -ಒಬ್ಬ ಸ್ವತಂತ್ರ ಅಭ್ಯರ್ಥಿ ಸೇರಿ ಒಟ್ಟು ನಾಲ್ವರು ಚುನವಣಾ ಕಣದಲ್ಲಿದ್ದರು. ಪಕ್ಷೇತರ ಅಭ್ಯರ್ಥಿ ಎ.ಎ. ಶಿವಳ್ಳಿ, 34,104 ಮತಗಳನ್ನು ಗಳಿಸಿದ್ದರು. ಭಾಜಸಂ ಅಭ್ಯರ್ಥಿ ಐ.ಎ. ಮೆಣಸಿನಕಾಯಿ 30,136 ಮತಗಳನ್ನು ಗಳಿಸಿದ್ರೆ, ಪಿಎಸ್‌ಪಿ ಅಭ್ಯರ್ಥಿ ಎಚ್.ಜಿ. ಮುದಗಲ್ 10,036 ಮತ ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸರೋಜಿನಿ ಮಹಿಷಿ 1,87,654 ಮತಗಳನ್ನು ಗಳಿಸಿ ಜಯಶಾಲಿಯಾದರು.

4)1967- ಮೂರು ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರು. ಭಾಜಸಂ ಅಭ್ಯರ್ಥಿ ಜಗನ್ನಾಥರಾವ್, ಎ. ಜೋಷಿ 81,743 ಮತಗಳು ಹಾಗೂ ಪಿಎಸ್‌ಪಿ ಅಭ್ಯರ್ಥಿ ಎಸ್.ಎ. ಖಾದರ್ 19,679 ಮತಗಳನ್ನು ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಸರೋಜಿನಿ ಮಹಿಷಿ 1,69,173 ಮತಗಳನ್ನು ಗಳಿಸಿ ೨ನೇ ಬಾರಿಗೆ ಚುನಾಯಿತರಾದರು.

ಧಾರವಾಡ ಲೋಕಸಭಾ ಕ್ಷೇತ್ರ

5)1971- ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಯೊಡ್ಡಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ಜಿ. ವಾಲಿ ಅವರು 91,313 ಮತಗಳನ್ನು ಪಡೆದಿದ್ದರು. ಪಿ.ಎಸ್.ಪಿ ಪಕ್ಷದ ಅಭ್ಯರ್ಥಿ ಎಸ್.ಪಿ. ಶಿರೂರ ಅವರು 2,742, ಕಾಂಗ್ರೆಸ್ ಅಭ್ಯರ್ಥಿ ಸರೋಜಿನಿ ಮಹಿಷಿ (ಓ)ಅವರು 1,89,382 ಮತಗಳನ್ನು ಗಳಿಸಿ 3ನೇ ಬಾರಿಗೆ ಲೋಕಸಭೆಗೆ ಪ್ರವೇಶ ಮಾಡಿದ್ದರು.

6)1977- ಕಾಂಗ್ರೆಸ್‌ನ ಸರೋಜಿನಿ ಮಹಿಷಿ ಅವರು 2,05,627 ಮತಗಳನ್ನು ಗಳಿಸಿ ೪ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಭಾರತೀಯ ಲೋಕ ದಳದ ಅಭ್ಯರ್ಥಿ ಜಗನ್ನಾಥ ಎ. ಜೋಷಿ ಅವರು 1,51,199 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

7)1980- ನಾಲ್ಕು ಪಕ್ಷಗಳ ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ (ಐ) ಪಕ್ಷದ ಅಭ್ಯರ್ಥಿ ಡಿ.ಕೆ. ನಾಯ್ಕರ್ ಅವರು 2,08,269 ಮತಗಳನ್ನು ಗಳಿಸಿ ಮೊದಲ ಬಾರಿಗೆ ಲೋಕಸಭಾ ಸದಸ್ಯರಾದರು. ಜನತಾ ಪಕ್ಷದ ಅಭ್ಯರ್ಥಿ ಡಾ. ಸರೋಜಿನಿ ಮಹಿಷಿ ಅವರು 1,11,575 ಮತಗಳು, ಕಾಂಗ್ರೆಸ್(ಯು) ಪಕ್ಷದ ಅಭ್ಯರ್ಥಿ ಎನ್.ಬಿ. ಸಿಕ್ಕೆದೇಸಾಯಿ 25,851 ಹಾಗೂ ಜನತಾಪಕ್ಷ (ಎಸ್)ನ ಅಭ್ಯರ್ಥಿ ಹೆಗಡೆ ಗಣಪತಿ ಶ್ರೀಧರ ಅವರು 7,493 ಮತಗಳನ್ನು ಗಳಿಸಿದ್ದರು.

8)1984ಒಟ್ಟು 17 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ. ನಾಯ್ಕರ್ ಅವರು 2,29,856 ಮತಗಳನ್ನು ಗಳಿಸಿ 2ನೇ ಬಾರಿಗೆ ಸಂಸದರಾಗಿ ಚುನಾಯಿತ ರಾದರು. ಜನತಾ ಪಕ್ಷದ ಅಭ್ಯರ್ಥಿ ಎಸ್.ಐ. ಶೆಟ್ಟರ್ 1,85,014 ಹಾಗೂ ಲೋಕದಳ ಪಕ್ಷದ ಅಭ್ಯರ್ಥಿ ಎಮ್.ಜಿ. ಲಕ್ಷ್ಮೇಶ್ವರ 8,510 ಮತಗಳನ್ನು ಪಡೆದರು.

9)1989-ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ.ನಾಯ್ಕರ್ ಅವರು 2,76,545 ಮತಗಳನ್ನು ಗಳಿಸಿ 3 ನೇ ಬಾರಿಗೆ ಜಯಶಾಲಿಯಾದರು. ಜನತಾದಳ ಅಭ್ಯರ್ಥಿ ಚಂದ್ರಕಾಂತ ಬೆಲ್ಲದ 2,20,997,ಜನತಾ ಪಕ್ಷದ ಅಭ್ಯರ್ಥಿ ಸೈಯದ್ ನಿಜಾಮುದ್ದಿನ್ 13,405, ಕರ್ನಾಟಕ ರಾಜ್ಯ ರೈತ ಸಂಘದ ಅಭ್ಯರ್ಥಿ ಬಿ.ಸಿ. ಪಾಟೀಲ 69,605, ಮುಸ್ಲಿಂ ಲೀಗ್ ಪಕ್ಷದ ಅಭ್ಯರ್ಥಿ ಎ.ಜಿ. ಬೆಟಗೇರಿ 3,877 ಕೆ.ಸಿ.ಪಿ. ಪಕ್ಷದ ಅಭ್ಯರ್ಥಿ ಮಹಾದೇವಸ್ವಾಮಿ1,915 ಹಾಗೂ ಲೋಕದಳ(ಬಿ) ಪಕ್ಷದ ಅಭ್ಯರ್ಥಿ ಹೆಗಡೆ ಗಣಪತಿ ಶ್ರೀಧರ್ 885 ಮತಗಳನ್ನು ಪಡೆದಿದ್ದರು.

10)1991-17 ಜನ ಕಣದಲ್ಲಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ. ನಾಯ್ಕರ್ ಅವರು 1,57,682 ಮತಗಳನ್ನು ಗಳಿಸಿ ೪ನೇ ಬಾರಿಗೆ ವಿಜೇತರಾಗಿದ್ದರು. ಜನತಾದಳ ಅಭ್ಯರ್ಥಿ ಚಂದ್ರಕಾಂತ ಬೆಲ್ಲದ 1,53,891 ಕರ್ನಾಟಕ ರಾಜ್ಯ ರೈತ ಸಂಘದ ಅಭ್ಯರ್ಥಿ ಬಿ.ಆರ್. ಯಾವಗಲ್ 1,34,565, ಹಾಗೂ ಪಿ.ಬಿ.ಐ. ಅಭ್ಯರ್ಥಿ ಪಾಟೀಲ ಕುಲಕರ್ಣಿ 34,520ಮತಗಳನ್ನು ಗಳಿಸಿದ್ದರು.

11)1996- 18 ಜನ ಪಕ್ಷೇತರರು ಸೇರಿ ಒಟ್ಟು 21 ಜನ ಚುನವಣಾ ಕಣದಲ್ಲಿದ್ದರು. ಬಿಜೆಪಿಯ ವಿಜಯ ಸಂಕೇಶ್ವರ ಅವರು 2,28,572 ಮತಗಳನ್ನು ಗಳಿಸಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಜನತಾದಳದ ಎಸ್.ಐ. ಮುನವಳ್ಳಿ 1,88,221, ಕಾಂಗ್ರೆಸ್ ಪಕ್ಷದ ಡಿ.ಕೆ. ನಾಯ್ಕರ್ 1,49,768 ಮತಗಳನ್ನು ಗಳಿಸಿದರು.

12)1998- ಒಟ್ಟು 8 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿ ವಿಜಯ ಸಂಕೇಶ್ವರ 3,39,660 ಮತಗಳನ್ನು ಗಳಿಸಿ 2ನೇ ಬಾರಿಗೆ ಲೋಕಸಭಾ ಸದಸ್ಯರಾದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ನಾಯ್ಕರ್ 2,10,459, ಜನತಾದಳ ಪಕ್ಷದ ಎಸ್.ಐ.ಮುನವಳ್ಳಿ 1,13,763, ಕ.ವಿ.ಪ. ಅಭ್ಯರ್ಥಿ ಎಂ.ಆರ್. ಕಾರಿಕಾಯಿ 3,652, ಮಾನವ ಪಕ್ಷದ ಕೆ.ಎಸ್. ಆಚಾರ‍್ಯ 2,903 ಹಾಗೂ ಅ.ಭಾ.ಹಿಂ.ಪ. ದ ಸರ್ವದೆ ಸಂತೋಷ 2,903 ಮತಗಳನ್ನು ಗಳಿಸಿದ್ದರು.

13)1999- ಬಿ.ಜೆ.ಪಿ ಅಭ್ಯರ್ಥಿ ವಿಜಯ ಸಂಕೇಶ್ವರ 3,45,164 ಮತಗಳನ್ನು ಗಳಿಸಿ 3ನೇ ಬಾರಿಗೆ ಜಯಶಾಲಿಯಾದರು. ಕಾಂಗ್ರೆಸ್ ಪಕ್ಷದ ವಿರಣ್ಣ ಮತ್ತಿಕಟ್ಟಿ 3,03,584 ಮತಗಳು ಹಾಗೂ ಜನತಾದಳ(ಎಸ್) ಇಸ್ಮಾಯಿಲ್‌ಸಾಬ್ ಕಾಲೇಬುಡ್ಡೆ 71,146 ಮತಗಳನ್ನು ಗಳಿಸಿದ್ದರು.

14)2004-ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿ.ಜೆ.ಪಿ ಅಭ್ಯರ್ಥಿ ಪ್ರಲ್ಹಾದ ಜೋಷಿ 3,85,084 ಮತಗಳನ್ನು ಪಡೆದು ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ಪಾಟೀಲ ಅವರು 3,02,006 ಮತಗಳನ್ನು ಪಡೆದರೆ. ಜೆ.ಡಿ.ಎಸ್ ಅಭ್ಯರ್ಥಿ ಶಾಗೋಟಿ ಚಿಕ್ಕಪ್ಪ ನಿಂಗಪ್ಪ 52,572 ಮತಗಳನ್ನು ಪಡೆದಿದ್ದರು.

15)2008-ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿ.ಜೆ.ಪಿ ಅಭ್ಯರ್ಥಿ ಪ್ರಲ್ಹಾದ ಜೋಷಿ 4,46,746 ಮತಗಳನ್ನು ಗಳಿಸಿ 2ನೇ ಬಾರಿಗೆ ಜಯಶಾಲಿಯಾದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಸಿ.ಕುನ್ನೂರ 3,09,123 ಮತಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿ ಎಂ.ಸಿ. ತಳಕಲ್ಲಮಠ 7,176 ಮತ ಪಡೆದರು.

16) 2004-ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿಯಾದ ಪ್ರಲ್ಹಾದ ಜೋಷಿ 5,45,935 ಮತಗಳನ್ನು ಪಡೆದು 3ನೇ ಬಾರಿಗೆ ವಿಜಯಶಾಲಿಯಾದರು. ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ 4,31,738 ಮತ ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿಯಾದ ಬಂಕಾಪುರ ಹನುಮಂತಪ್ಪ ಮಲ್ಲಪ್ಪ 8,836 ಮತ ಪಡೆದರು. ಬಿಎಸ್‌ಪಿ ಅಭ್ಯರ್ಥಿ ಈರಪ್ಪ ಭರಮಪ್ಪ ಮಾದರ 6,858 ಮತ ಪಡೆದಿದ್ದರು. ಪಕ್ಷೇತರ ಅಭ್ಯರ್ಥಿ ಪ್ರಮೋದ ಹನುಮಂತರಾವ್ ಮುತಾಲಿಕ್ 5,465 ಮತಗಳನ್ನು ಪಡೆದಿದ್ದರು.

ಈ ಎಲ್ಲಾ ಅಂಕಿ ಅಂಶಗಳನ್ನು ನೋಡಿದರೆ ಧಾರವಾಡ‌ ಲೋಕಸಭಾ ಕ್ಷೇತ್ರ ಭಾರತೀಯ ಜನತಾ ಪಕ್ಷದ ಭದ್ರಕೋಟಿಯಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಧಾರವಾಡವನ್ನು ವಿಜಯ ಸಂಕೇಶ್ವರ ವಶಪಡಿಸಿಕೊಂಡ ಬಳಿಕ ಸತತವಾಗಿ ಬಿಜೆಪಿ ಗೆಲುವು ಸಾಧಿಸುತ್ತ ಬರುತ್ತಿದೆ. ಈ ಬಾರೀ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಹಾಗೂ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪ್ರಲ್ಹಾದ್​ ಜೋಶಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ABOUT THE AUTHOR

...view details