ಕರ್ನಾಟಕ

karnataka

ETV Bharat / elections

ಉಮೇಶ್​ ಜಾಧವ್​ ಮಗಳು ಪಿಯುಸಿ ಫೇಲ್​ ಆಗಲು ಕಾಂಗ್ರೆಸ್​ ಹೇಗೆ ಕಾರಣ: ಸಿದ್ದು ಲೇವಡಿ! - kannada news

ಉಮೇಶ್ ಜಾಧವ್ ತಲೆ ಬುಡ ಇಲ್ಲದ ಹೇಳಿಕೆ ನೀಡ್ತಾರೆ. ತನ್ನ ಮಗಳು ಫೇಲ್ ಆಗಲು ಕಾಂಗ್ರೆಸ್ ನಾಯಕರು ಹೇಗೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ

By

Published : May 11, 2019, 2:18 AM IST

ಕಲಬುರಗಿ :ತನ್ನ ಮಗಳು ಪಿಯುಸಿಯಲ್ಲಿ ಫೇಲ್ ಆಗಲು ಕಾಂಗ್ರೆಸ್ ಕಾರಣ ಎಂಬ ಜಾಧವ್ ಹೇಳಿಕೆ ನೆನಪಿಸಿಕೊಂಡು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಗೆಗಡಲಲ್ಲಿ ತೇಲಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ

ಜಿಲ್ಲೆಯ ಕಾಳಗಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಉಮೇಶ್ ಜಾಧವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದು, ಜೋಕ್ ಆಫ್ ದಿ ಇಯರ್, ಉಮೇಶ್ ಜಾಧವ್ ತಲೆ ಬುಡ ಇಲ್ಲದೇ ಹೇಳಿಕೆ ನೀಡ್ತಾನೆ ಅನ್ನೋದಕ್ಕೆ ಇದೇ ಉದಾಹರಣೆ. ಜಾಧವ್ ಮಗಳು ಫೇಲ್ ಆಗಲು ಕಾಂಗ್ರೆಸ್ ನಾಯಕರು ಹೇಗೆ ಕಾರಣರಾಗುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ತೊರೆದು ಕೋಮುವಾದಿ ಪಕ್ಷ ಸೇರಿದ್ದಕ್ಕೆ ಜಾಧವ್ ವರ್ತನೆಯಿಂದ ಬೇಸತ್ತು ಮಗಳು ಪರೀಕ್ಷೆ ಚೆನ್ನಾಗಿ ಬರೆದಿರಲಿಕ್ಕಿಲ್ಲ. ಜಾಧವ್ ಸಿಂಪಥಿ ಗಿಟ್ಟಿಸಿಕೊಳ್ಳಲು ಇಂತಹ ಹೇಳಿಕೆ ನೀಡಿರಬೇಕು ಎಂದು ಲೇವಡಿಮಾಡಿದರು.

ABOUT THE AUTHOR

...view details